ನವಲಗುಂದ,ಜೂ.೧೪: ಬೆಣ್ಣೆ ಹಳ್ಳ ತುಪ್ಪರಿ ಹಳ್ಳ ಅಪಾಯದ ಮಟ್ಟ ಮೀರುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಕೂಡಲೆ ಸರಕಾರ ತಾಲೂಕಾಡಳಿತ ನೆರವಿಗೆ ಧಾವಿಸಿ ತುರ್ತು ಪರಿಹಾರ ಒದಗಿಸಿ ತುರ್ತು ಕ್ರಮ ಕೈಗೊಳ್ಳಲು ಬಿಜೆಪಿ ನವಲಗುಂದ ಮಂಡಲ ಅಧ್ಯಕ್ಷ ಗಂಗಪ್ಪ ಮನಮಿ ಒತ್ತಾಯಿಸಿದರು.
ಶಿರೇಸ್ತದಾರ ಕೃಷ್ಣ ಅರೇರ ಅವರ ಮೂಲಕ ಸಿಎಂ ಸಿದ್ದರಾಮಯ್ಯ ನವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಉಭಯ ಹಳ್ಳಗಳು ಪ್ರವಾಹದ ಮಿತಿ ಮೀರಿ ಹರಿಯುತ್ತಿವೆ ಹಳ್ಳದ ಆಸುಪಾಸಿನ ರೈತರು ಈಗಾಗಲೆ ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಿ ಚಿಗುರೊಡೆದಿದ್ದ ಬೆಳೆ ಕೊಚ್ಚಿ ಹೋಗಿ ರೈತಕುಲ ಸಂಕಷ್ಟಕ್ಕಿಡಾಗಿರುವದರಿAದ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು.
ನವಲಗುಂದ ವಿಧಾನಸಬಾಕ್ಷೇತ್ರದಾದ್ಯಂತ ಸತತ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಹಳೆಯ ದೇವಾಲಯ ಕಟ್ಟಡ ಮನೆಗಳ ಮೇಲ್ಚಾವಣಿಗಳು ಕುಸಿದು ಜನಜೀವನ ಅಸ್ತವ್ಯಸ್ತಗೊಳ್ಳುತ್ತಿದೆ ಕೂಡಲೆ ಜನಸಾಮಾನ್ಯರ ನೆರವಿಗೆ ಸರಕಾರ ಧಾವಿಸಿ ಎರಡು ದಿನಗಳಲ್ಲಿ ಎಲ್ಲ ಸಂತ್ರಸ್ಥರಿಗೆ ಪರಿಹಾರ ದೊರಕುವಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಸಿದ್ದನಗೌಡ ಪಾಟೀಲ, ಷಣ್ಮುಖ ಗುರಿಕಾರ ಸಾಯಿಬಾಬ ಆನೆಗುಂದಿ, ಸುರೇಶ ಗಾಣಿಗೇರ, ಸಿದ್ದಣ್ಣ ಕಿಟಗೇರಿ, ಎಸ್‌ಎನ್ ಬಾಳನಗೌಡ್ರ, ದೇವರಾಜ ದಾಡಿಬಾಯಿ, ಮಲ್ಲಿಕಾರ್ಜುನ ಸಂಗನಗೌಡರ, ಬಸುರಾಜ್ ಕಾತರಕಿ, ಜಯಪ್ರಕಾಶ ಬದಾಮಿ, ಪ್ರಕಾಶ್ ಪಾಟೀಲ, ನಾಗೇಶ್ ಬೆಂಡಿಗೇರಿ, ಫಕ್ಕಿರಪ್ಪ ಜಕ್ಕಪ್ಪನವರ, ಆನಂದ ಚವಡಿ, ಅರುಣ ಮೆಣಸಿನಕಾಯಿ, ಬಿ ಎಲ್ ಪೂಜಾರ, ಪಾಲಾಕ್ಷಗೌಡ ಪಾಟೀಲ, ನಾಗಪ್ಪ ಹರ್ತಿ, ಮಲ್ಲನಗೌಡ ಹಿರೇಗೌಡರ, ಪ್ರವೀಣ ಪಾಟೀಲ, ದ್ಯಾಮನಗೌಡ ಪಾಟೀಲ ಎಸ್ ಬಿ ದಾನಪ್ಪಗೌಡ್ರ ಇದ್ದರು.