ಕಲ್ಯಾಣ ಸಂಘದ ಭ್ರಷ್ಟ ಅಧಿಕಾರಿಗಳ ವಜಾಕ್ಕೆ ಆಗ್ರಹ

ಕಲಬುರಗಿ,ಡಿ.15: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗು ಸಾಂಸ್ಕøತಿಕ ಸಂಘದಲ್ಲಿ ಭ್ರಷ್ಟಾಚಾರ ನಡೆಸಿದ ಅಧಿಕಾರಿಗಳನ್ನು ವಜಾ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ ಎಸ್ ಪಾಟೀಲ ನರಿಬೋಳ ಆಗ್ರಹಿಸಿದ್ದಾರೆ.
ಬಿ.ಎಸ್ ಯಡಿಯುರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಕಲ್ಯಾಣ ಕರ್ನಾಟಕದ ಕುರಿತು ಇಲ್ಲಿನ ಜನರ ಮೇಲಿನ ಗೌರವ ಪ್ರೀತಿಯಿಂದ ಒಂದು ಹೊಸ ಸಂಸ್ಥೆಯನ್ನೇ ಹುಟ್ಟುಹಾಕಿ ಪ್ರತಿವರ್ಷ 500 ಕೋಟಿ ರೂಪಾಯಿ ಅನುದಾನ ಬರುವಂತೆ ಮಾಡಿ ಕಲ್ಯಾಣಕರ್ನಾಟಕ ಭಾಗಕ್ಕೆ ಕೊಡುಗೆ ನೀಡಿದ್ದರು. ತನಿಖೆಯಲ್ಲಿ ಪ್ರಸ್ತಾಪಿಸಿದ ಅಧಿಕಾರಿಗಳನ್ನು ಕೂಡಲೆ ವಜಾ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ ಮಾಡಿದ್ದೆ ಆದರೆ ಜಿಲ್ಲಾಧಿಕಾರಿ ಕಛೇರಿಯ ಎದುರುಗಡೆ ಅನಿರ್ದಿಷ್ಟ ಧರಣಿಯನ್ನು ಮಾಡಲಾಗುವದು ಎಂದು ತಿಳಿಸಿದ್ದಾರೆ.