Home ಜಿಲ್ಲೆ ಕಾಮಗಾರಿ ಸ್ಥಳಾಂತರಕ್ಕೆ ಆಗ್ರಹ

ಕಾಮಗಾರಿ ಸ್ಥಳಾಂತರಕ್ಕೆ ಆಗ್ರಹ


ಲಕ್ಷೆ÷್ಮÃಶ್ವರ,ಮೇ.೧೫: ಪಟ್ಟಣದ ಪುರಸಭೆ ಕಲಾಮಹಾ ವಿದ್ಯಾಲಯದ ಆವರಣದಲ್ಲಿ ನಿರ್ಮಿಸುತ್ತಿರುವ ಮೇಲ್ಮಟ್ಟದ ಜಲಾಗಾರ ಕಾಮಗಾರಿಯನ್ನು ಸ್ಥಗಿತಗೊಳಿಸಿ ಕೂಡಲೇ ಬೇರೆಡೆಗೆ ಸ್ಥಳಾಂತರಿಸುವAತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದ ಕಾರ್ಯಕರ್ತರು ಒತ್ತಾಯಿಸಿದ್ದಾರೆ.


ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದ ಜಿಲ್ಲಾ ಅಧ್ಯಕ್ಷರಾದ ಶರಣು ಗೋಡಿ ತಾಲೂಕ ಘಟಕದ ಅಧ್ಯಕ್ಷರಾದ ನಾಗೇಶ್ ಅಮರಾಪುರ ಅವರು ಮಾತನಾಡಿ ಪುರಸಭೆ ಕಲಾಮ ವಿದ್ಯಾಲಯ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿನ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾಗಿದ್ದು ಈ ಸಂಸ್ಥೆ ಅನೇಕ ರಾಜ್ಯ ಮಟ್ಟದ ಅಧಿಕಾರಿಗಳನ್ನು ಕ್ರೀಡಾಪಟುಗಳನ್ನು ರಾಜಕಾರಣಿಗಳನ್ನು ನೀಡಿದ ಹೆಮ್ಮೆ ಈ ಸಂಸ್ಥೆಗೆ ಇದೆ ಈಗಾಗಲೇ ಈ ಸಂಸ್ಥೆಯು ಸರ್ಕಾರಕ್ಕೆ ಹಸ್ತಾಂತರಗೊಳಲಿದ್ದು ನಿವೇಶನದ ಕೊರತೆಯಿಂದ ಸರ್ಕಾರ ಕೈಗೊಳ್ಳುವ ಅನೇಕ ಅಭಿವೃದ್ಧಿ ಕೆಲಸಕ್ಕೆ ಮೇಲ್ಮಟ್ಟದ ಜಲಗಾರ ಅಡ್ಡಿಯಾಗಲಿದೆ.


ಮೇಲಾಗಿ ಕಾಲೇಜಿನ ಆವರಣದಲ್ಲಿ ಈ ಬೃಹತ್ ಮೇಲ್ಮಟ್ಟದ ಜಲಗಾರ ನಿರ್ಮಾಣದಿಂದ ಸದಾ ವಿದ್ಯಾರ್ಥಿಗಳ ಜೀವನದ ಪ್ರಶ್ನೆಯು ತಲೆ ಮೇಲೆ ತೂಗುಗತ್ತಿಯಾಗಲಿದೆ ಆದ್ದರಿಂದ ಸಂಬAಧಪಟ್ಟವರು ಬರುವ ಸೋಮವಾರದೊಳಗಾಗಿ ಕಾಮಗಾರಿಯನ್ನು ಸ್ಥಗಿತಗೊಳಿಸಿ ಬೇರೆಡೆಗೆ ಸ್ಥಳಾಂತರ ಮಾಡಲು ಮುಂದಾಗದಿದ್ದರೆ ಸೋಮವಾರದಿಂದ ಮೇಲ್ಮಟ್ಟದ ಜಲಾಗಾರ ಬಳಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಮಣಕವಾಡ ಮಹಾಂತೇಶ ಉಮಚಗಿ ದುದ್ದು ಸಾಬ್ ತೋಟದ ಡಿಬಿ ಫಕೀರಪ್ಪ ಸೇರಿದಂತೆ ಅನೇಕರು ಇದ್ದರು.