ಕೋಲಾರ,ಅ,೧೦- ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೋ ಎಸೆದಿರುವ ರಾಕೇಶ್ ಕಿಶೋರ್ ಎಂಬಾತನ ವಿರುದ್ದ ಕೊಡಲೇ ಕ್ರಮ ಕೈ ಗೊಂಡು ದೇಶದಿಂದಲೇ ಗಡಿ ಪಾರು ಮಾಡುವಂತೆ ಒತ್ತಾಯಿಸಿ ಬಹುಜನಜ ಸಮೈಕ್ಯ ಸಮಿತಿ ನಗರದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟಿಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅವಣಿ ಮಂಜುನಾಥ್ ಮಾತನಾಡಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಸಂದರ್ಭಧಲ್ಲಿ ಬಾರ್ ಕೌನ್ಸಿಲ್ ಸದಸ್ಯ ರಾಕೇಶ್ ಕಿಶೋರ್ ಎಂಬಾತ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಏಕಾಏಕಿ ತಮ್ಮ ಕಾಲಿನ ಶೋ ವನ್ನು ಕಳಚಿ ಅವರ ಮೇಲೆ ಎಸೆದಿರುತ್ತಾರೆ. ಇದೊಂದು ಭಾರತದ ಸಂವಿಧಾನಕ್ಕೆ ಮಸಿ ಬಳಿಯುವಂತ ಅಪಮಾನದ ಪ್ರಕರಣವೆಂದು ಪರಿಗಣಿಸಿ ಹೀನಾಯ ಕೃತ್ಯ ಎಸೆಗಿದ ಆರೋಪಿ ರಾಕೇಶ್ ಕಿಶೋರ್ ಅವರನ್ನು ಕೊಡಲೇ ದೇಶದಿಂದಲೇ ಗಡಿಪಾರು ಮಾಡಿ ಅವರ ಸದಸ್ಯತ್ವವನ್ನು ಶಾಶ್ವತವಾಗಿ ರದ್ದು ಗೊಳಿಸ ಬೇಕು. ಸಂವಿಧಾನಕ್ಕೆ ಧಕ್ಕೆಯುಂಟು ಮಾಡಿರುವ ಅರೋಪಿ ವಿರುದ್ದ ಕಾನೂನು ಕ್ರಮ ಜರುಗಿಸ ಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಹುಜನ ಸಮೈಕ್ಯ ಸಮಿತಿಯ ರಾಜ್ಯಾಧ್ಯಕ್ಷ ಸಂಗೊಂಡಹಳ್ಳಿ ಪಿಳ್ಳಪ್ಪ, ಪ್ರಧಾನ ಕಾರ್ಯದರ್ಶಿ ಹರಟಿ ಸಂಪತ್ ಪದಾಧಿಕಾರಿಗಳಾದ ಜಯಮಂಗಲ ಚಂದ್ರು. ಬೈರಂಡಹಳ್ಳಿ ನಾಗೇಶ್, ಅರಹಳ್ಳಿ ಅಂಜನಪ್ಪ, ಅರುಣ್ ಕುಮಾರ್ ಕೆ.ಜಿ.ಎಫ್.ಚಲಪತಿ, ಸೀಪುರ್ ಗೋವಿಂದ್, ವಿಶ್ವನಾಥ್, ಯಡಹಳ್ಳಿ ನವೀನ್, ಚಂದನ್, ದಾಕ್ಷಾಯಿಣಿ, ನಾರಯಣಮ್ಮ ಹೊಹಳ್ಳಿ ಮಂಜುನಾಥ್ ರಾಜೇಶ್ ಭಾಗವಹಿಸಿದ್ದರು..



























