ಸೈದಾಪುರ:ಸೆ.13:ಗುರುಮಠಕಲ್ ಪಟ್ಟಣದಲ್ಲಿ ಇತ್ತಿಚಿಗೆ ಜರುಗಿದ ಪ್ರಜಾಸೌಧ ಅಡಿಗಲ್ಲು ಸಮಾರಂಭದಲ್ಲಿ ಕೊಲಿ ಕಬ್ಬಲಿಗ ಸಮಾಜದ ಹಿರಿಯ ಮುಖಂಡ ಮಾಜಿ ಸಚಿವ ಹಾಗೂ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧಕ್ಷರಾದ ಶ್ರೀ ಬಾಬುರಾವ ಚಿಂಚನಸೂರಿಗೆ ನಿಂದಿಸಿದ ಶಾಸಕ ಶರಣಗೌಡ ಕಂದಕೂರ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಕೊಲಿ ಕಬ್ಬಲಿಗ ಸಮಾಜದ ವಲಯಾಧ್ಯಕ್ಷ ರಮೇಶ ಭೀಮನಹಳ್ಳಿ ಆಗ್ರಹಿಸಿದರು.
ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಬುರಾವ ಚಿಂಚನಸೂರು ರವರು ಸಂಪುಟ ದರ್ಜೆಯ ಸ್ಥಾನಮಾನ ಹೊಂದಿರುವ ಹಿನ್ನಲೆಯಲ್ಲಿ ಶಿಷ್ಟಚಾರದಂತೆ ಅವರು ಈ ಸಮಾರಂಭಕ್ಕೆ ಆಗಮಿಸಿದ್ದಾರೆ. ಅವರು ಸಂಚಾರ ದಟ್ಟಣೆಯಿಂದ ಆಗಮಿಸುವ ಸ್ವಲ್ಪ ತಡವಾಗಿದೆ. ಈ ಕಾರಣದಿಂದ ಅಲ್ಲಿನ ಅಧಿಕಾರಿಗಳು ಬಾಬುರಾವ್ ಚಿಂಚನಸೂರು ರವರು ಸ್ವಲ್ಪ ಸಮಯದಲ್ಲಿಯೇ ಆಗಮಿಸುತ್ತಾರೆ ಅಡಿಗಲ್ಲು ಕಾರ್ಯಕ್ರಮವನ್ನು ಐದು ನಿಮಿಷ ತಡವಾಗಿ ಮಾಡೋಣ ಎಂದು ತಿಳಿಸಿದ್ದ ವೇಳೆ ಶಾಸಕ ಶರಣಗೌಡ ಕಂದಕೂರು ರವರು ಏಕ ವಚನದಲ್ಲಿಯೇ ನಿಂದಿಸಿರುವುದು, ಕೋಲಿ ಸಮಾಜ ಸೇರಿದಂತೆ ಇಡೀ ಹಿಂದುಳಿದ ವರ್ಗಗಗಳ ಜನರಿಗೆ ತುಂಬ ನೋವಾಗಿದೆ.
ನಮ್ಮ ಸಮಾಜದ ಹಿರಿಯ ನಾಯಕರಿಗೆ ಅಪಮಾನ ಮಾಡಿರುವುದು ಖಂಡನೀಯವಾಗಿದೆ. ಬಹಿರಂಗವಾಗಿ ಕ್ಷೇಮಯಾಚಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕೊಲಿ ಕಬ್ಬಲಿಗ ಸಮಾಜ ಜೊತೆಗೆ ಅಹಿಂದ ವರ್ಗದ ಜನರು ಶಾಸಕರ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಈ ವೇಳೆ ಕೊಲಿ ಕಬ್ಬಲಿಗ ಸಮಾಜದ ಕಾರ್ಯದರ್ಶಿ ಪ್ರಭು ಗೂಗಲ್, ಯುವ ಘಟಕ ಅಧ್ಯಕ್ಷ ಅಂಜನೇಯ ಕಟ್ಟಿಮನಿ, ನಗರ ಅಧ್ಯಕ್ಷ ಅಂಬರೀಶ ರಾಚನಳ್ಳಿಕರ್, ಬಸವಂತ ಬೆಳಗುಂದಿ, ಅರುಣ ಹೊರಂಚ, ಮರೆಪ್ಪ ಕಟ್ಟಿಮನಿ, ಶಿವರಾಜ ದ್ಯಾವರಿ, ಬನ್ನಪ್ಪ ಅಜಲಾಪುರ, ಗೋವಿಂದ ಇಡ್ಲೂರು, ಮಲ್ಲು ಸಾವೂರು, ಹಣಮಂತ ರಾಚನಹಳ್ಳಿ, ಮಲ್ಲು ಹುಲಿಬೆಟ್ಟ, ಗಂಗಪ್ಪ ಬೆಳಗುಂದಿ, ಭೀಮರಾಯ ಬೆಳಗುಂದಿ, ನಾರಾಯಣ ಇಡ್ಲೂರು, ಮಹಾತೆಂಶ ರಾಚನಹಳ್ಳಿ, ಅಂಜಪ್ಪ ಇಡ್ಲೂರು, ಮಹಾದೇವಪ್ಪ ಜೈಗ್ರಾಮ, ಮರೆಪ್ಪ ಬಾಗ್ಲಿ ಸೇರಿದಂತೆ ಇತರರಿದ್ದರು.























