ಯಾದವ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಲು ಆಗ್ರಹ

ಹೊಸಕೋಟೆ, ಆ,೮- ಸಮಾಜದಲ್ಲಿ ಯಾದವ ಸಮುದಾಯ ಸೇರಿ ದಂತೆ ಹಿಂದುಳಿದ ಶೋಷಿತ ಸಮುದಾಯಗಳನ್ನು ಸಮಾಜದ ಮುಖ್ಯ ವಾಹಿನಿಗೆ ಬರಲು ಅಗತ್ಯವಾಗಿರುವ ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಾನಗಳನ್ನು ಕಲ್ಪಿಸಬೇಕು ಮಹಿಳಾ ಮೀಸಲಾತಿ ನೀಡಬೇಕು ಎಂದು ಮಾಜಿ ಜಿಲ್ಲಾ ಪಂಚಾಯ್ತಿ ಅದ್ಯಕ್ಷ ಹಾಗು ಹೊಸಕೋಟೆ ತಾಲೂಕು ಯಾದವ ಸಂಘದ ಅಧ್ಯಕ್ಷ ವಿ.ಪ್ರಸಾದ್ ಒತ್ತಾಯಿಸಿದ್ದಾರೆ.


ಕೋಲಾರ ಜಿಲ್ಲೆಯಿಂದ ಹೊಸಕೋಟೆಗೆ ಆಗಮಿಸಿದ ಯಾದವ ಸಮುದಾಯದ ಅಹಿರ್ ಕಳಸ ರಥಯಾತ್ರೆ ಸ್ವಾಗತ ಕಾರ್‍ಯಕ್ರಮದಲ್ಲಿ ಮಾತಾನಾಡಿದರು.


ಅಖಿಲ ಭಾರತಯಾದವ ಮಹಾಸಭಾ ನಿರ್ಣಯದಂತೆ ದೇಶದ ಎಲ್ಲಾ ರಾಜ್ಯಗಳಲ್ಲಿ ಯಾತ್ರೆ ನಡೆಯಲಿದ್ದು, ನವೆಂಬರ್ ೧೮ ರಂದು ದೆಹಲಿ ರಾಮಲೀಲಾ ಮೈಧಾನದಲ್ಲಿ ಬೃಹತ್ ಕಾರ್‍ಯಕ್ರಮ ನಡೆಯಲಿದ್ದು , ರಥಯಾತ್ರೆ ಮೂಲಕ ೧೯೬೮ ರಲ್ಲಿ ಚೀನಾಗಡಿಯಲ್ಲಿ ಮಡಿದ ೧೫೪ ಅಹಿರ್ ಸೈನಿಕರು ಯಾದವ ಸಮುದಾಯದವರಾಗಿದ್ದು ಅವರಿಗೆ ಗೌರವ ಸಲ್ಲಿಸಿ ಸಮುದಾಯದ ಜನರಿಗೆ ಜಾಗೃತಿ ಮೂಡಿಸುವುದು,ಭಾರತದ ಸೈನ್ಯದಲ್ಲಿ ಅಹಿರ್ ರೆಜಿಮೆಂಟ್ ಪ್ರಾರಂಭಿಸಬೇಕು,ಮುಂದಿನ ದಿನಗಳಲ್ಲಿ ನಡೆಯುವ ಜಾತಿಗಣತಿಯಲ್ಲಿ ಶೋಷಿತ ಸಮುದಾಯಗಳಿಗೆ ಹಾಗೂ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದ ಅವರು, ಈರಥಯಾತ್ರೆ ಮೂಲಕ ಅಖಿಲ ಭಾರತ ಮಹಾಸಭ ತೆಗೆದುಕೊಂಡಿರುವ ನಾಲ್ಕು ನಿರ್ಣಯಗಳ ಬಗೆ ಶೋಷಿತ ಸಮುದಾಯಗಳಿಗೆ ಜಾಗೃತಿ ಮೂಡಿಸುವ ಮೂಲಕ ರಾಜಕೀಯ,ಸಾಮಾಜಿಕ ಹಾಗು ಶೈಕಣಿಕ ಸ್ಥಾನಮಾನಕ್ಕಾಗಿ ಸರಕಾರವನ್ನು ಒತ್ತಾಯಿಸುವುದು ಈ ಯಾತ್ರೆಯ ಮುಖ್ಯ ಉದ್ದೇಶವಾಗಿದೆ ಎಂದರು


ಬಳಿಕ ವಿಧಾನ ಪರಿಷತ್ ಸದಸ್ಯ ಹಾಗು ಕರ್ನಾಟಕ ರಾಜ್ಯ ಯಾದವ ಸಂಘದ ರಾಜ್ಯಾಧ್ಯಕ್ಷ ಶ್ರೀನಿವಾಸ್ ಮಾತನಾಡಿ, ನಮ್ಮ ಹಕ್ಕುಗಳಿಗೆ ನಾವು ಹೋರಾಟ ನಡೆಸಬೇಕಾದ ಅನಿವಾರ್ಯತೆ ಬಂದಿದ್ದು ನಮ್ಮ ಹೋರಾಟ ಯಾರವಿರುದ್ದವೂ ಅಲ್ಲ ಶೋಷಿತ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಬಿಹಾರ ಚಾಪ್ರಾದಲ್ಲಿ ನಡೆದ ಅಖಿಲ ಭಾರತಯಾದವ ಮಹಾಸಭಾ ನಿರ್ಣಯಿಸಿರುವ ನಾಲ್ಕು ಅಂಶಗಳ ಬಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯಾಧ್ಯಂತ ಅಹಿರ್ ಯಾದವ (ಗೊಲ್ಲ) ಕಳಸ ರಥಯಾತ್ರೆ ಸಂಚರಿಸಲಿದ್ದು ಶೋಷಿತರ ಹಿಂದುಳಿದವರ ಪ್ರತಿ ಮನೆ ಮನೆಗೆ ಈ ವಿಷಯತಲುಪಿಸಿ ದೇಶದಲ್ಲಿ ೨೫ ಕೋಟಿ ಜನ ಸಂಖ್ಯೆಯಿದ್ದು ದೆಹಲಿಯಲ್ಲಿ ನಡೆಯುವ ಸಮಾವೇಶದಲ್ಲಿ ೧೦ ಲಕ್ಷ ಜನ ಸೇರಿ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು ಎಂದರು.

.