
ಮುಳಬಾಗಿಲು,ಡಿ,೧೯-ಬೆಂಬಲ ಬೆಲೆ ಯೋಜನೆಯಲ್ಲಿ ರಾಗಿ ಖರೀದಿ ನೊಂದಣಿ ಮಾಡಲು ರೈತರಿಗೆ ಒಂದು ತಿಂಗಳ ಕಾಲಾವಕಾಶ ನೀಡುವ ಜೊತೆಗೆ ರೈತರ ಹೆಸರಿನಲ್ಲಿ ದಲ್ಲಾಳಿಗಳು ನೊಂದಣಿ ಮಾಡುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪರನ್ನು ಒತ್ತಾಯಿಸಿದರು.
ಪ್ರತಿಕಾ ಹೇಳಿಕೆ ನೀಡಿದ ಅವರು, ಉತ್ತಮ ಮುಂಗಾರು ಹಿಂಗಾರು ಮಳೆಯಿಂದ ಈಭಾರಿ ರಾಗಿ ಉತ್ತಮ ಬೆಳೆಯ ಜೊತೆಗೆ ಉತ್ತಮ ಫಸಲು ಬಂದಿದ್ದು, ಇತ್ತೀಚೆಗೆ ಸುರಿಯುತ್ತಿರುವ ಜಡಿ ಮಳೆಯಿಂದ ಕೂಲಿ ಹಾಳುಗಳ ಸಮಸ್ಯೆಯಿಂದ ರಾಗಿ, ಕಟಾವು ಮಾಡಿ ಒಕ್ಕಣಿ ಮಾಡುವುದು ನಿದಾನವಾಗಿ ನೊಂದಣಿ ಮಾಡಿಸುವ ಪ್ರಕ್ರಿಯೆ ನಿಧಾನವಾಗುತ್ತದೆ. ಆದರೆ ಸರ್ಕಾರ ಬೆಂಬಲ ಬೆಲೆ ಯೋಜನೆಯಲ್ಲಿ ನೊಂದಣಿ ಮಾಡುವ ಕಾಲವಕಾಶ ಮುಕ್ತಾಯವಾಗಿದೆ ಎಂದು ಸಂಬಂಧಪಟ್ಟ ಆಹಾರ ಇಲಾಖೆ ಅಧಿಕಾರಿಗಳು ಹೇಳುತ್ತಿರುವುದರಿಂದ ನೊಂದಣಿ ಮಾಡದ ರೈತರು ಪರದಾಡುತ್ತಿದ್ದಾರೆ.
ಮೂರು ತಿಂಗಳಿಂದ ನಡೆಯುತ್ತಿರುವ ಬೆಂಬಲ ಬೆಲೆ ನೊಂದಣಿ ಮಾಡುವ ಆಹಾರ ಇಲಾಖೆಯಲ್ಲಿ ಸರ್ವರ್ ಸಮಸ್ಯೆ ವಿದ್ಯುತ್ ಸಮಸ್ಯೆಯ ಜೊತೆಗೆ ನೂರೊಂದು ಕಾನೂನುಗಳು ಹೇಳುವ ಜೊತೆಗೆ ಪ್ರತಿದಿನ ನೂರಾರು ರೈತರು ಸಂಬಂಧಪಟ್ಟ ದಾಖಲೆ ತಂದರೂ ನೊಂದಣಿಯಾಗದೆ, ಬೆಳಿಗ್ಗೆಯಿಂದ ಸಂಜೆಯ ವರೆಗೂ ಇಲಾಖೆ ಹತ್ತಿರ ಕಾದು, ಬರೀ ಕೈಯಲ್ಲಿ ಮನೆಗೆ ವಾಪಸ್ಸು ಆಗುವ ಪರಿಸ್ಥಿತಿ ಇದ್ದರೂ ಸರ್ಕಾರ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ರಾಗಿ ನೊಂದಣಿ ಮಾಡಲು ಒಂದು ತಿಂಗಳ ಕಾಲ ಕಾಲವಕಾಶ ನೀಡ ಬೇಕೆಂದು ಆಗ್ರಹಿಸಿದರು. ರಾಜ್ಯ ಯುವ ಮುಖಂಡ ಪುತ್ತೇರಿ ರಾಜು, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಗಿರೀಶ್, ಕದರಿನತ್ತ ಅಪ್ಪಾಜಿ ರಾವ್ ಇದ್ದರು.


























