Home ಜಿಲ್ಲೆ ಕಲಬುರಗಿ ಸಚಿವ ಪ್ರಧಾನ್ ರಾಜೀನಾಮೆಗೆ ಆಗ್ರಹ

ಸಚಿವ ಪ್ರಧಾನ್ ರಾಜೀನಾಮೆಗೆ ಆಗ್ರಹ

ಜೇವರಗಿ,ಜು ೨೫: ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅವ್ಯವಸ್ಥೆಯನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಹಾಗೂ ಹಲವಾರು ವಿದ್ಯಾರ್ಥಿಗಳು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ರಿಲಯನ್ಸ್ ಪೆಟ್ರೋಲ್ ಬಂಕ್‌ನಿAದ ಮಿನಿ ವಿಧಾನಸೌದ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಉಪ ತಹಶೀಲ್ದಾರ್ ಟಿಪ್ಪು ಸುಲ್ತಾನ್ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮಾಜೀದ್‌ಪಟೇಲ್ ಯಾಳವಾರ ಮಾತನಾಡಿ, ವಿದ್ಯಾರ್ಥಿಗಳಿಗೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಟಿಪ್ಪು ಸುಲ್ತಾನ್ ಕಮಿಟಿ ಅಧ್ಯಕ್ಷ ಮೋಹಿಯುದ್ದೀನ್ ಇನಾಮದಾರ, ಸೇಠ ಗಿರಣಿ, ಪಾಟೀಲ ಮುತ್ತಕೋಡ, ರವಿಚಂದ್ರ ಗುತ್ತೇದಾರ, ಇಬ್ರಾಹಿಂ ಪಟೇಲ್, ಮೊಬಿನ್ ಗುತ್ತೇದಾರ, ಸುನೀಲ ಚನ್ನೂರ, ಕರವೇ ಹೋರಾಟಗಾರ ಬಿ.ಹೆಚ್. ಮಾಲಿಪಾಟೀಲ, ರೈತ ಮುಖಂಡ ಅಲ್ಲಾಪಟೇಲ ಇಜೇರಿ, ದಲಿತ ಮುಖಂಡರಾದಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ, ಸಿದ್ರಾಮ ಕಟ್ಟಿ, ಶ್ರೀಹರಿ ಕರಕಿಹಳ್ಳಿ, ರವಿ ಕುರಳಗೇರಾ, ವಿಶ್ವರಾದ್ಯ ಗಂವ್ಹಾರ, ಬಸವರಾಜ ಬಾಗೇವಾಡಿ, ಮಹಿಬೂಬ್ ಮನಿಯಾರ ಮಳ್ಳಿ, ಕಾಂತಪ್ಪ ಚನ್ನೂರ, ಭೀಮರಾಯ ಖಾದ್ಯಾಪೂರ, ರಿಯಾಜ್ ಯಾಳವಾರ ಇದ್ದರು