Home ಜಿಲ್ಲೆ ಕನಿಷ್ಠ ವೇತನ ನೀಡಲು ಆಗ್ರಹ

ಕನಿಷ್ಠ ವೇತನ ನೀಡಲು ಆಗ್ರಹ

ಕುಂದಗೋಳ ಜೂ.೨೧: ರಾಜ್ಯ ಸರ್ಕಾರವು ಈಗಾಗಲೇ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ ಮಾಡಿ ಆದೇಶಿಸಿದ್ದು ಕೂಡಲೇ ಜಾರಿಗೊಳಿಸಬೇಕೆಂದು ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ(ರಿ) ಹಾಗೂ ಎಐಯುಟಿಯುಸಿ ಯಿಂದ ಬಿಸಿಎಂ ತಾಲೂಕ ವಿಸ್ತರಣಾಧಿಕಾರಿಗಳಿಗೆ ಮನವಿ ಪತ್ರ ನೀಡಿ, ಅಗ್ರಹಿಸಲಾಯಿತು .


ಪರಿಷ್ಕöÈತ ಕನಿಷ್ಠ ವೇತನ ನೀಡಲು ರಾಜ್ಯ ಸರ್ಕಾರ ಮಾಡಿದ ಆದೇಶ ಸ್ವಾಗತಾರ್ಹವಾಗಿದ್ದು, ಅದನ್ನು ಕೂಡಲೇ ಜಾರಿಗೊಳಿಸಬೇಕು, ವಸತಿ ನಿಲಯಗಳಲ್ಲಿ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.


ತಾಲೂಕ ಅಧ್ಯಕ್ಷೆ ಗೀತಾ ಬೊಮ್ಮಣ್ಣವರ್, ಉಪಾಧ್ಯಕ್ಷೆ ರತ್ನ ಧಾರವಾಡ, ಕಾರ್ಯದರ್ಶಿ ಕುಸುಮಾ ವೀರಕರ್, ಸದಸ್ಯರಾದ ಗಿರಿಜಾ ಕೋಟಿ, ನಿರ್ಮಲಾ ನೆರ್ತಿ, ಲಕ್ಷಿ÷್ಮÃ ಸಿಂಗಣ್ಣವರ ಮತ್ತಿತರರಿದ್ದರು.