
ಕಲಬುರಗಿ,ಡಿ.6: ಮಹಾನಗರ ಪಾಲಿಕೆಯ ಡೇ ನಲ್ಮ್ ( ದೀನದಯಾಳ್ ಅಂತ್ಯೋದಯ ಯೋಜನೆ )ಯೋಜನೆಯಡಿ ಅಕ್ರಮ ನಡೆದಿದೆ ಎಂದು ಕಲ್ಯಾಣ ಕರ್ನಾಟಕ ಆಟೋ ಚಾಲಕರ ಸಂಘದ ಅಧ್ಯಕ್ಷ
ಲಕ್ಷ್ಮೀಕಾಂತ್ ಮಾಲಿಪಾಟೀಲ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿ ಕೂಡಲೇ ಸೂಕ್ತ ತನಿಖೆ ನಡೆಸಿ ಅಧಿಕಾರ ದುರುಪಯೋಗ ಮಾಡಿಕೊಂಡ ಅಧಿಕಾರಿ, ಸಿಬ್ಬಂದಿಗಳ ಅಮಾನತಿಗೆ ಆಗ್ರಹಿಸಿದರು.
ಸರಕಾರ ಕರೆದಿರುವ ಅರ್ಜಿ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳನ್ನು ಮಂಜೂರು ಮಾಡಲಾಗಿದೆ ಎಂದ ಅವರು ಯೂನಿಯನ್ ಬ್ಯಾಂಕಿನವರು ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು ಹೊಂದಾಣಿಕೆ ಮಾಡಿಕೊಂಡು ಯೂನಿಯನ್ ಬ್ಯಾಂಕಿನಲ್ಲಿ ಸುಮಾರು 270 ಜನರಿಗೆ ಲೋನ್ ಮಾಡಿದ್ದಾರೆ. ಆದ್ದರಿಂದ ಯೂನಿಯನ್ ಬ್ಯಾಂಕ್ ವಿರುದ್ದ ಅಧಿಕಾರ ದುರುಪಯೋಗದ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು.
ಬ್ಯಾಂಕ್‍ನವರು ಮಂಜೂರಾತಿ ಪತ್ರ ನೀಡುವದಕಿಂತ ಮೊದಲೇ ಮಹಾನಗರ ಪಾಲಿಕೆಯ ಡೇ ನಲ್ಮ್
ಯೋಜನಾಧಿಕಾರಿ ಉಪಸಾರಿಗೆಯ ಆಯುಕ್ತಕರಿಗೆ ಲೆಟರ್ ಟೈಪ್ ಮಾಡಿ ಆಯುಕ್ತಕರ ಸಹಿ ತೆಗೆದುಕೊಂಡಿದ್ದಾರೆ.ಸರಕಾರದ 430 ಗುರಿಯಲ್ಲಿ ಸುಮಾರು 230 ಮುಸ್ಲಿಮ್ ಸಮುದಾಯಕ್ಕೆ ಸೇರಿದವರನ್ನು
ಆಯ್ಕೆ ಮಾಡಿದ್ದಾರೆ ಇದು ಯಾವ ಆಧಾರದ ಮೇಲೆ ಮಾಡಿರುತ್ತಾರೆ ಎಂಬುದನ್ನು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಜುಕುಮಾರ ದಸ್ತಾಪುರ,ಶ್ರೀಮಂತ ಬೋಳೆವಾಡ,ಹಣಮಂತ ಶೇರಿ ಸೇರಿದಂತೆ ಹಲವರಿದ್ದರು.































