
ಕಲಬುರಗಿ,ಜ.4: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಆಘಾತಕಾರಿಯಾಗಿದ್ದು ಇಲಾಖೆಗೆ ಕಳಂಕವಾಗಿದೆ. ಇದೆಲ್ಲರ ಹಿಂದೆ ಯಾರೇ ಇದ್ದರೂ ಕ್ರಮ ಆಗಬೇಕು ಎಂದು ಕಾರಾಗೃಹ ಇಲಾಖೆ ಡಿಜಿಪಿ ಅಲೋಕಕುಮಾರ ಅವರಿಗೆ ಮಹಿಳಾ ಸಂಘಟನೆಯ ಕಾರ್ಯಕತೆಯರು ಮನವಿ ಸಲ್ಲಿಸಿದರು.
ಡಾ. ಅನಿತಾ ಆರ್ ಅವರು, ಕೇಂದ್ರ ಕಾರಾಗೃಹವನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸಿದ ದಕ್ಷ ಆಡಳಿತಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಬಂಧಿಗಳ ಸುಧಾರಣೆ, ಸಿಬ್ಬಂದಿಗಳ ಮನೋಬಲ ವೃದ್ಧಿ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಕಾರಾಗೃಹ ವ್ಯವಸ್ಥೆಗೆ ಹೊಸ ಗೌರವ ತಂದುಕೊಟ್ಟಿದ್ದಾರೆ.
ಅವರ ವಿರುದ್ಧ ಕೆಲವು ಸಿಬ್ಬಂದಿಗಳಿಂದಲೆ ಸಂಚು ನಡೆದಿದೆ.ಇದರ ಕುರಿತು ತನಿಖೆ ನಡೆಸಬೇಕು.ನಿಷ್ಪಕ್ಷಪಾತ ತನಿಖೆಯನ್ನು ನಡೆಸಿ ತಪ್ಪಿತಸ್ಥರಾಗಿರುವವರ ಮೇಲೆ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಿದರು.ಸೆಮಿನಾ ಬೆಗಂ, ಜ್ಯೋತಿ ಯು ಆಡಕಿ, ಮನತಾ ವಿ ಡೋಳ್ಳೆ ,ರಾಜಶ್ರೀ ಹುಲಿ, ತಳಜಮ್ಮಾ ಮಾನೆ ಇತರರಿದ್ದರು

























