ಕೂಡಲೇ ತಡಕಲ್ ರಸ್ತೆ ದುರಸ್ಥಿ ಮಾಡಲು ಆಗ್ರಹ

ಕಮಲಾಪುರ :ಅ.17:ತಾಲ್ಲೂಕಿನ ನಾಗೂರು ಗ್ರಾಮ ಪಂಚಾಯಿತಿ ಅಡಿಯಲ್ಲಿ ಬರುವ ತಡಕಲ್ ರಸ್ತೆ ಕೂಡಲೇ ದುರಸ್ಥಿ ಮಾಡಿಸಬೇಕೆಂದು ಗ್ರಾಮದ ಜನರು ಒತ್ತಾಯಿಸಿದರು. ನಾಗೂರು ಗ್ರಾಮ ಪಂಚಾಯಿತಿಯ ಪಿಡಿಒ, ಅಧ್ಯಕ್ಷರು, ಸದಸ್ಯರು ಕಣ್ಣು ಮುಚ್ಚಿ ಕುಳಿತಿದ್ದಾರೆ ಯಾವುದೇ ರೀತಿ ಅಭಿವೃದ್ಧಿ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

    ಸಾರ್ವಜನಿಕರು ಓಡಾಡಲು, ಮಕ್ಕಳು ಶಾಲೆಗೆ ಹೋಗಲು, ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ ಹಾಗೂ ಈಗಾಗಲೇ ಕಾಲು ಜಾರಿ ಅನೇಕ ಜನರು ಎಡವಿ ಬಿದ್ದಿದ್ದಾರೆ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಕಡೆ ಗಮನಹರಿಸಿ ಕೂಡಲೇ ರಸ್ತೆ ದುರಸ್ಥಿ ಮಾಡಿಸಬೇಕೆಂದು ಗ್ರಾಮದ ಸಾರ್ವಜನಿಕರು ಒತ್ತಾಯಿಸಿದರು.