ಉಚಿತ ಬೀಜ, ರಸಗೊಬ್ಬರ ನೀಡಲು ಆಗ್ರಹ

ನವಲಗುಂದ,ಜೂ11 : ತಾಲ್ಲೂಕಿನಲ್ಲಿ ಸುರಿದ ಮಳೆಗೆ ಬಿತ್ತನೆ ಮಾಡಿದ ಬೀಜಗೊಬ್ಬರ ಸಂಪೂರ್ಣ ನಾಶವಾಗಿದ್ದು, ಮರಳಿ ಬಿತ್ತಬೇಕಾಗದ ಪರಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸರ್ಕಾರ, ಆಡಳಿತ ವರ್ಗ ಸಮೀಕ್ಷೆ ಕಾರ್ಯಕೈಗೊಂಡು ಹಾನಿಗೋಳಗದ ರೈತರಿಗೆ ಉಚಿತವಾಗಿ ಬೀಜ- ರಸಗೊಬ್ಬರಗಳನ್ನು ನೀಡಬೇಕು ಎಂದು ಮಲಪ್ರಭಾ ಮಹದಾಯಿ ಕಳಸಾ ಬಂಡೂರಿ ರೈತ ಒಕ್ಕೂಟದ ಅಧ್ಯಕ್ಷ ಲೋಕನಾಥ ಹೆಬಸೂರ ಆಗ್ರಹಿಸಿದರು.

ಮಲಪ್ರಭಾ ಮಹದಾಯಿ ಕಳಸಾ ಬಂಡೂರಿ ರೈತ ಒಕ್ಕೂಟದಿಂದ ತಹಶೀಲ್ದಾರ್ ಸುಧೀರ ಸಾವುಕಾರ ಹಾಗೂ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಅತಿವೃಷ್ಟಿ, ಪ್ರಕೃತಿ ವಿಕೋಪದಿಂದ ಬಿತ್ತನೆ ಭೂಮಿ, ಮನೆಗಳಿಗೆ ನೀರುನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ಮಾದರಿಯಲ್ಲಿ ರೈತರಿಗೆ ತಕ್ಷಣವೇ ಪರಿಹಾರ ನೀಡದೆ ಹೋದಲ್ಲಿ ರೈತರು ಬೀದಿಗಿಳಿದು ಹೊರಡುವುದು ಅನಿವಾರ್ಯ ಎಂದು ಎಚ್ಚರಿಸಿದರು.

ಈ ವೇಳೆ ರಘುನಾಥ ನಡುವಿನ ಮನಿ, ಫಕ್ಕೀರಗೌಡ್ರ ವೆಂಕನಗೌಡ್ರ, ಈರಣ್ಣ ಶಿಶುವಿನಹಳ್ಳಿ, ಭರಮಪ್ಪ ಕಾತರಕಿ, ಮಾಳಪ್ಪ ಮೂಲಿಮನಿ, ಈರಣ್ಣಕೆಸರಪ್ಪನವರ, ನೀಲಪ್ಪ ನಾವಳ್ಳಿ, ಬಸವರಾಜ ತಳವಾರ, ಆನಂದ ಹರಿಹರ, ಸೇರಿದಂತೆ ರೈತರು ಇದ್ದರು.