ಸುಳ್ಳು ಜಾತಿ ಪ್ರಮಾಣ ಪತ್ರ ಕ್ರಮಕ್ಕೆ ಆಗ್ರಹ

ಜೇವರ್ಗಿ: ಸೆ.೧೧:ತಳವಾರ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪಡೆದು ಪರಿಶಿಷ್ಟ ಪಂಗಡದ ಮೀಸಲಾತಿ ಪಡೆಯುತ್ತಿದ್ದಾರೆ. ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಾಲ್ಮೀಕಿ ನಾಯಕ ಮಹಾಸಭಾ ತಾಲ್ಲೂಕು ಘಟಕದ ವತಿಯಿಂದ ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
‘ಹಿಂದುಳಿದ ತಳವಾರ ಹೆಸರಿನಲ್ಲಿ ಸುಳ್ಳು ಎಸ್.ಟಿ ಪ್ರಮಾಣ ಪತ್ರ ವಿರುದ್ಧ ಹೋರಾಟ ಮಾಡುವ ವಾಲ್ಮೀಕಿ ಸಮಾಜದ ನಾಯಕರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ. ಅಂತಹವರ ವಿರುದ್ಧ ಪ್ರಕರಣ ದಾಖಲಿಸಬೇಕು. ಅಲ್ಲದೆ ಸುಳ್ಳು ಜಾತಿ ಪ್ರಮಾಣ ನೀಡಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ನಾಯಕ, ಬೇಡ ಸಮಾಜದ ತಳವಾರರಿಗೆ ಮಾತ್ರ ಎಸ್. ಟಿ ಪ್ರಮಾಣ ನೀಡಲು ಸರ್ಕಾರ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಪಟ್ಟಣದ ಮಹರ್ಷಿ ವಾಲ್ಮೀಕಿ ಮಹಾಸಭಾದಿಂದ ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಮುಖಾಂತರ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು
ಯಾದಗಿರಿ ನಗರದಲ್ಲಿ ಸೆ.೧ ರಂದು ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ ಜನಾಂಗದವರು ಪ್ರತಿಭಟನೆ ಮಾಡಿದ್ದರು. ಆ ವೇಳೆ ಮಹರ್ಷಿ ವಾಲ್ಮೀಕಿ ಅವರನ್ನು ಕೋಲಿ ವಾಲ್ಮೀಕಿ ಎಂದು ಸುಳ್ಳು ಆಪಾದನೆ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ವಾಲ್ಮೀಕಿ ನಾಯಕ ಸಮುದಾಯದ ಮುಖಂಡರಾದ ಶ್ರವಣಕುಮಾರ್ ನಾಯಕ್ ಹಾಗೂ ಮರಿಯಪ್ಪ ಮುಗ್ಡಾಪುರ್ ಮತ್ತು ಗುರು ಸುಬೇದಾರ್ ಮೇಲೆ ಸುಳ್ಳು ಪ್ರಕರಣ ರದ್ದು ಮಾಡಬೇಕು ಮತ್ತು ವಾಲ್ಮೀಕಿ ಪರಿವಾರದ ತಳವಾರ ಜಾತಿ ಪ್ರಮಾಣ ಪತ್ರ ಹಿಂದುಳಿದ ವರ್ಗದ ಕೋಲಿ ಕಬ್ಬಲಿಗ ಸಮಾಜದವರು ಸಮಾಜದವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡುತ್ತಿದ್ದಾರೆ ಕೂಡಲೇ ರದ್ದು ಮಾಡಿ ಅವರ ಮೇಲೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ಕೇಸು ದಾಖಲಿಸಬೇಕೆಂದು ವಾಲ್ಮೀಕಿ ನಾಯಕ ಮಹಾಸಭಾ ತಾಲೂಕ ಅಧ್ಯಕ್ಷ ಸುರೇಶ್ ಹವಾಲ್ದಾರ್ ಗುಡೂರು ಹೇಳಿದರು ನಂತರ ಮಾತನಾಡಿದ ವಾಲ್ಮೀಕಿ ಸಮಾಜದ ಮುಖಂಡ ವಾಲ್ಮೀಕಿ ಸಮಾಜದ ಮುಖಂಡರಿಗೆ ಅವಮಾನ ವಾಗುವ ರೀತಿಯಲ್ಲಿ ಕೋಲಿ ಸಮಾಜದ ಸಮಾಜದ ಮುಖಂಡ ಶಿವಾಜಿ ಮಟಗಾರ ಮತ್ತು ಅಂಬರೀಷ್ ಕಾಮನಕೆರೆ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಆಂಬಲಪ್ಪ ದೊರೆ ಬುಟ್ನಾಳ ಹೇಳಿದರು ಈ ಸಂದರ್ಭದಲ್ಲಿ ಸಮಾಜದ ಸಮಾಜ ಮುಖಂಡರಾದ ಮರಿಯಪ್ಪ ಕಟ್ಟಿಸಂಗಾವಿ ಬಾಬು ಗುಂಡಗುರ್ಕಿ ವೀರೇಶ್ ಕೆಲ್ಲೂರು ತಿರುಪತಿ ಹಾಲಗಡ್ಲಾ ಪರಮೇಶ್ ಬಿರಾಳ ಅಯ್ಯಣ್ಣಖಾದಾಪುರ ದೇವು ಲಕಣಪುರ ಸೇರಿದಂತೆ ಅನೇಕರು ಇದ್ದರು.