Home ಜಿಲ್ಲೆ ಕಲಬುರಗಿ ಸಿಡಿಪಿಒ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ

ಸಿಡಿಪಿಒ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ

ಜೇವರ್ಗಿ:ಏ.೯: ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯ ನಿರ್ಣಯಗಳನ್ನು ಸಮಗ್ರವಾಗಿ ಜಾರಿ ಮಾಡದೇ ಉಲ್ಲಂಘಿಸಿರುವ ಶಿಶು ಅಭಿವೃದ್ಧಿಯೋಜನಾಧಿಕಾರಿ ವಿರುದ್ಧಶಿಸ್ತು ಕ್ರಮ ಜರುಗಿಸುವಂತೆ ಅನುಷ್ಠಾನ ಸಮಿತಿ ಸದಸ್ಯರು ಆಗ್ರಹಿಸಿದರು.

ಪಟ್ಟಣದ ಗ್ಯಾರಂಟಿ ಅನುಷ್ಠಾನ ಸಮಿತಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ‘ಸಮಿತಿ ಸದಸ್ಯರು, ಮಹಿಳಾ ದಿನಾಚರಣೆಯಲ್ಲಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರಿಗೆ ಶಿಷ್ಟಾಚಾರ ಪ್ರಕಾರ ಕಾರ್ಯಕ್ರಮ ನಿರ್ವಹಿಸಿದೇ ಅಗೌರವ ತೋರಲಾಗಿದೆ’ ಎಂದು ಅರೋಪಿಸಿದರು.

‘ಏ.೬ ರಂದು ಕಾರ್ಯಾಗಾರ ನಡೆಸಲು ತೀರ್ಮಾನಿಸಲಾಗಿತ್ತು, ಮುಂಚಿತವಾಗಿ ಮಾಹಿತಿ ನೀಡದೇ ರದ್ದುಪಡಿಸಲಾಯಿತು. ಇಲಾಖೆಯ ಯಾವುದೇ ಕಾರ್ಯಕ್ರಮಗಳಿಗೆ ಸಮಿತಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಆಹ್ವಾನ ನೀಡದೇ ಅಗೌರವ ತೋರುತ್ತಿದ್ದಾರೆ’ ಎಂದು ಸದಸ್ಯರು ಅಸಮದಾನ ವ್ಯಕ್ತಪಡಿಸಿದರು. ನಂತರ ೭ ದಿನಗಳ ಒಳಗಾಗಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದಜೇವರ್ಗಿ ಪಟ್ಟಣದ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಕಚೇರಿಯ ಸಭಾಂಗಣದಲ್ಲಿ ಗ್ಯಾರಂಟಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು ಅನುಷ್ಠಾನ ಸಮಿತಿ ಅಧ್ಯಕ್ಷ ಶೌಕತ್ ಅಲಿ ಅಲೂರ ಮಾತನಾಡಿ, ‘ಹೊಸ ಪಡಿತರ ಚೀಟಿಗಾಗಿ ೩೭೦ ಜನ ಅರ್ಜಿ ಸಲ್ಲಿಸಿದ್ದಾರೆ. ಫಲಾನುಭವಿಗಳಿಂದ ಹೆಚ್ಚಿನ ಹಣ ಪಡೆದು ಸರ್ಕಾರದ ಮಾನದಂಡಗ-ಳನ್ನು ಗಾಳಿಗೆ ತೂರಿ ಪಡಿತರ ಚೀಟಿ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಫಲಾನುಭವಿಗಳು ಪಡಿತರ ಚೀಟಿಗಾಗಿ ಸಲ್ಲಿಸಿರುವ ದಾಖಲಾತಿ ವಿವರ ನೀಡುವಂತೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿ, ಅಧಿಕಾರಿಗಳು ಪಂಚ ಗ್ಯಾರಂಟಿ ಯೋಜನೆಗಳು ಸಮಗ್ರವಾಗಿ ಜಾರಿಗೊಳಿಸಲು ಬದ್ಧರಾ ಗಿರಬೇಕು. ಅಧಿಕಾರಿಗಳು ಗ್ಯಾರಂಟಿಗಳ
ಕುರಿತು ನಿರ್ಲಕ್ಷ್ಯ ತೋರದೆ ನಿಗದಿತ ಗುರಿಯೊಂದಿಗೆ ಕೆಲಸ ಮಾಡಬೇಕು’ ಎಂದುತಾಕೀತುಮಾಡಿದರು.
ಸಭೆಯಲ್ಲಿ ತಾ.ಪಂ ೨೨ ರವಿಚಂದ್ರ ರೆಡ್ಡಿ, ಸಮಿತಿ ಸದಸ್ಯರಾದ ಅಂಜನಾಬಾಯಿ ರಾಠೋಡ, ರಾಜು ಗುತ್ತೇದಾರ, ರುಕುಂ ತೋಲಾ ಬಾಗವಾನ, ನಾಗರಾಜ ಬಸವರಾಜ ದೇವದುರ್ಗ, ಗುರುಲಿಂ ಗಪ್ಪಗೌಡ ಪಾಟೀಲ, ಸಿದ್ದು ಮಾವನೂರ, ಸಂತೋಷ ಜೈನಾಪೂರ ಸೇರಿದಂತೆ ಆಹಾರ, ಸಾರಿಗೆ, ಯುವನಿಧಿ ಸೇರಿದಂತೆ ಐದು ಇಲಾಖೆಯ ಅಧಿಕಾರಿಗಳು ಹಾಜರಿದ್ದರು