ನೂತನ ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ ಆಗ್ರಹ

ಆನೇಕಲ್.ಸೆ೭:ಹೂವು ಬೆಳೆಗಾರರಿಗೆ ಹೂವುಗಳನ್ನು ಮಾರಾಟ ಮಾಡಲು ಜಿಕೆವಿಕೆಯಲ್ಲಿ ಸ್ಥಳ ಕಾಯ್ದಿರಿಸಲಾಗಿದ್ದು ಇದರ ಬದಲಾಗಿ ರೈತರಿಗೆ ಮತ್ತು ವರ್ತಕರಿಗೆ ಅನುಕೂಲ ವಾಗಲಿರುವ ಆನೇಕಲ್ ತಾಲೂಕು ಅತ್ತಿಬೆಲೆ ಸಮೀಪದ ಆರ್‌ಟಿಓ ಕಚೇರಿ ಬಳಿ ಇರುವ ಸರ್ಕಾರಿ ಸ್ಥಳದಲ್ಲಿ ರಾಜ್ಯ ಸರ್ಕಾರ ಕೂಡಲೇ ಹೂವಿನ ಮಾರುಕಟ್ಟೆ ಯನ್ನು ನಿರ್ಮಿಸಿಕೊಡಬೇಕು ಎಂದು ಆನೇಕಲ್ ತಾಲೂಕು ಹಸಿರು ಮನೆ ಬೆಳಗಾರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮತ್ತು ರೈತರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.


ಇನ್ನು ಆನೇಕಲ್ ತಾಲೂಕಿನ ಅತ್ತಿಬೆಲೆ ಸಮೀಪದ ಆರ್‌ಟಿಓ ಕಚೇರಿ ಬಳಿಯಿರುವ ಸರ್ಕಾರಿ ಜಾಗದಲ್ಲಿ ಹೂವಿನ ಮಾರುಕಟ್ಟೆ ಮಾಡುವುದರಿಂದ ತಮಿಳುನಾಡು. ಆಂದ್ರ ಪ್ರದೇಶ ಮತ್ತು ಕರ್ನಾಟಕ ರಾಜ್ಯದ ರೈತರಿಗೆ ಬಹಳಷ್ಠು ಅನುಕೂಲವಾಗಲಿದೆ ಜೊತೆಗೆ ವಿಶೇಷವಾಗಿ ಆನೇಕಲ್ ತಾಲ್ಲೂಕಿನಲ್ಲಿ ಸುಮಾರು ೧೫೦೦ ಏಕರೆ ಪ್ರದೇಶದಲ್ಲಿ ರೈತರು ವಿವಿಧ ಬಗೆಯ ಹೂವು ಬೆಳೆಗಳನ್ನು ಬೆಳೆಯುತ್ತಿದ್ದಾರೆ ಅತ್ತಿಬೆಲೆಯಲ್ಲಿ ಮಾರು ಕಟ್ಟೆ ಆಗುವುದರಿಂದ ರೈತರಿಗೆ ಬಹಳ ಉಪಯೋಗವಾಗಲಿದೆ ಜೊತೆಗೆ ಈಗಾಗಲೇ ಬೆಂಗಳೂರಿನಲ್ಲಿ ಟ್ರಾಪಿಕ್ ಸಮಸ್ಯೆಗೆ ಬೇಸತ್ತಿದ್ದು. ಅತ್ತಿಬೆಲೆಯಲ್ಲಿ ಹೂವು ಮಾರುಕಟ್ಟೆ ಆಗುವುದರಿಂದ ಬಹಳಷ್ಠು ಅನುಕೂಲವಾಗಲಿದೆ ವಿಶೇಷವಾಗಿ ಹುಸ್ಕೂರು ಅಂತರಾಷ್ಠೀಯ ಹಣ್ಣು ಮಾರುಕಟ್ಟೆ ಹತ್ತಿರವಿದೆ ಜೊತೆಗೆ ರಾಷ್ಠೀಯ ಹೆದ್ದಾರಿ ೭ ಕೂಡ ಇದೆ ಹಾಗೆಯೇ ಎಸ್.ಟಿ,ಆರ್.ಆರ್ ರಸ್ತೆ ಮತ್ತು ನೈಸ್ ರಸ್ತೆ. ಮೆಟ್ರೋ ಸಂಪರ್ಕ ಕೂಡ ಇದೆ. ಮುಖ್ಯವಾಗಿ ಟ್ರಾಪಿಕ್ ಸಮಸ್ಯೆ ಕಡಿಮೆ ಯಾಗುತ್ತದೆ ಎಂದು ಆನೇಕಲ್ ತಾಲೂಕು ಹಸಿರು ಮನೆ ಬೆಳಗಾರರ ಕ್ಷೇಮಾಭಿವೃದ್ಧಿ ಸಂಘದ ಅದ್ಯಕ್ಷ ಕೂನು ಮಡಿವಾಳ ಸೋಮಣ್ಣ ರವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.


ಸಭೆಯಲ್ಲಿ ಆನೇಕಲ್ ತಾಲೂಕು ಹಸಿರು ಮನೆ ಬೆಳಗಾರರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಲೋಕೇಶ್. ಕಾರ್ಯದರ್ಶಿ ಮೋಹನ್, ನಿರ್ದೇಶಕರುಗಳಾದ ಬಾಬುರೆಡ್ಡಿ. ಅಶೋಕ್ ಕುಮಾರ್. ರಮೇಶ್ ರೆಡ್ಡಿ. ಮಧುಗೌಡ. ಕೀರ್ತನ. ಗೋಪಾಲ್ ರೆಡ್ಡಿ. ರಾಜಗೋಪಾಲ್ ರೆಡ್ಡಿ. ಇ.ಮಂಜುನಾಥ್. ವೆಂಕಟೇಶ್. ರಾಮಕೃಷ್ಣಪ್ಪ. ಆರ್.ಮಂಜುನಾಥ್. ಮಲ್ಲೇಶ್ ರೆಡ್ಡಿ ಮತ್ತು ಸಂಘದ ಪದಾದಿಕಾರಿಗಳು. ರೈತ ಮುಖಂಡರು ಹಾಜರಿದ್ದರು.