ಜೇವರ್ಗಿ:ಸೆ.26:ಜೇವರ್ಗಿ ಮತ್ತು ಯಡ್ರಾಮಿ ಅವಳಿ ತಾಲ್ಲೂಕಿನಲ್ಲಿ ಅತಿಯಾದ ಮಳೆಯಿಂದ ಹತ್ತಿ ಬೆಳೆ ತೊಗರಿ ಬೆಳೆ ಮತ್ತು ಹೆಸರು ಉದ್ದು ನಂತಹ ಬೆಳೆಗಳು ಪೂರ್ತಿಯಾಗಿ ನೆಲಕಚ್ಚಿದು ಅಪಾರ ಪ್ರಮಾಣದ ಬೆಳೆ ಹಾಳಾಗಿರುವ ಕಾರಣ ರೈತರ ಬದುಕು ಡೋಲಾಯಮಾನವಾಗಿದೆ ಕಳೆದ ಮುಂಗಾರಿನ ಮಳೆಯ ಸಂದರ್ಭದಲ್ಲಿ ರೈತರ ಹೋರಾಟಕ್ಕೆ ಮಣಿದ ಸರ್ಕಾರ ಪರಿಹಾರ ನೀಡುವುದಾಗಿ ಘೋಷಣೆ ಮಾಡಿತ್ತು ಆದರೆ ಇಲ್ಲಿಯ ತನಕ ಯಾವುದೇ ಪರಿಹಾರೋಪಾದಿಯಾಗಿ ಒಂದು ರುಪಾಯಿ ನೀಡಿರೋದ್ದಿಲ್ಲ ಮತ್ತು ನಿರಂತರವಾಗಿ ಹಿಂಗಾರುದಂತಾಹ ಅನೇಕ ಮಳೆಗಳು ಬಿಟ್ಟು ಬಿಡದೆ ರೈತರ ಜೀವನ ಹಾಳು ಮಾಡಿದ್ದು ಈ ಎಲ್ಲಾ ಸಮಸ್ಯಗಳಿಗೆ ಪರಿಹಾರ ನೀಡಬೇಕು ಜೊತೆಗೆ ರೈತರ ಸಾಲ ಮನ್ನಾ ಮಾಡಬೇಕು ಎಂದು ಈ ಮೂಲಕ ಬಿಜೆಪಿ ಜೇವರ್ಗಿ ಮಂಡಲ ಆಗ್ರಹಿಸಿತ್ತ ಜೇವರ್ಗಿ ವಿಜಯಪುರ ವೃತ್ತದಲ್ಲಿ ಮಾನ್ಯ ತಹಸೀಲ್ದಾರ್ ರವರ ಮೂಲಕ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿಯನ್ನು ಸಲ್ಲಿಲಾಯಿತು
ಈ ಸಂದರ್ಭದಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಶಿವರಾಜ್ ಪಾಟೀಲ್ ರದ್ದೇವಾಡಗಿ ರವರು, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಶೋಭಾ ಭಾಣಿ ರವರು, ರೇವಣಸಿದ್ದಪ್ಪ ಸಂಕಾಲೀ ರವರು,ಮಂಡಲ ಅಧ್ಯಕ್ಷರು ದೇವಿಂದ್ರ ಮುತ್ತಕೋಡ ರವರು ನಿಕಟಪೂರ್ವ ಮಂಡಲ ಅಧ್ಯಕ್ಷರಾದ ಭೀಮರಾವ್ ಗುಜಗೊಂಡ,ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಭಾಗೇಶ ಹೋತಿನಮಡು, ಸುರೇಶ ಹಳ್ಳಿ ರವರು,ಮುಖಂಡರುಗಳಾದ ನಿಂಗಣ್ಣ ದೊಡ್ಡಮನಿ, ಧರ್ಮಣ್ಣ ಇಟಗಾ,ಬಸವರಾಜ್ ಪಾಟೀಲ್ ಕುಕನೂರ, ಶರಣಗೌಡ ಯಲಗೂಡ, ಗುರುರಾಜ ಸುಲಹಳ್ಳಿ, ಮಲ್ಲಣ್ಣ ಕುಲಕರ್ಣಿ ವಿಶ್ವಾರಾಧ್ಯ ಬಡಿಗೇರ, ಸುರೇಶ್ ಪಾಟೀಲ್ ನೆದಲಗಿ, ಅನಿಲ್ ದೊಡ್ಡಮನಿ, ಬಸವರಾಜ ಬೇಲೂರು, ಮಹಿಳಾ ಸದಸ್ಯರಾದ ಶ್ರೀ ಮತಿ ಲಲಿತ್ ಸಜ್ಜನ್, ಅಕ್ಕಮ್ಮ ನೆಲೋಗಿ, ಅನಿತ್ ಕಡಕೋಳ, ಹಾಗು ಇನ್ನಿತರ ಕಾರ್ಯಕರ್ತರು ಮುಖಂಡರು ಉಪ್ಥಿತರಿದ್ದರು

























