ಕುಂದಗೋಳ ಸೆ.೧೭ : ವಿಕೃತ ಸಂಗೀತದ ಡಿಜೆ ಸಂಸ್ಕöÈತಿಯನ್ನು ಅಳಿಸಿ, ಯುವಜನತೆ ಪರಿಶುದ್ಧ-ಸುಸ್ರಾವ್ಯ-ಸುಮಧುರ ಸಂಗೀತದತ್ತ ಗಮನ ನೀಡಬೇಕು ಎಂದು ಕೊಲ್ಲಾಪುರ ಕನೇರಿ ಮಠದ ಸಿದ್ಧಗಿರಿ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಜಿಯವರು ಜನತೆಗೆ ಕರೆ ನೀಡಿದರು
ಕುಂದಗೋಳ ಸವಾಯಿ ಗಂಧರ್ವ ಸ್ಮಾರಕ ಸಭಾಭವನದಲ್ಲಿ ವಿಸ್ವಸ್ಥ ಸಂಸ್ಥೆ ಹಾಗೂ ರಾಜ್ಯ ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಸಹಯೋಗದಲ್ಲಿ ಸವಾಯಿ ಗಂಧರ್ವರ ೭೩ನೇ ಪುಣ್ಯತಿಥಿ ಅಂಗವಾಗಿ ಹಮ್ಮಿಕೊಂಡಿದ್ದ ಅಹೋರಾತ್ರಿ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು
ಡಿಜೆ ಶಬ್ದವು ನಮ್ಮ ದೇಹಕ್ಕೆ ಅನೇಕ ಅಪಾಯಗಳನ್ನುಂಟು ಮಾಡುತ್ತಿದ್ದು ಅವುಗಳನ್ನು ಬಳಸಬಾರದು ಮತ್ತು ಅವುಗಳಿಗೆ ಪ್ರೋತ್ಸಾಹಿಸಬಾರದು ಎಂದು ಕರೆ ನೀಡಿದ ಶ್ರೀಗಳು ಮಾತನಾಡಿ ನಮ್ಮ ಸಾಂಪ್ರದಾಯ ಸಂಗೀತಕ್ಕೆ ದೇವಲೋಕದ ನಾರದರು ಕರ್ತೃ ಆಗಿದ್ದು ನಮ್ಮಲ್ಲಿ ಪ್ರತಿಯೊಂದು ಕಾರ್ಯದಲ್ಲೂ ಸಂಗೀತವು ಹಾಸುಹೊಕ್ಕಾಗಿದ್ದು, ಸಂಗೀತದಿAದ ರೋಗವಾಸಿಯಾಗಬಹುದು, ಮಳೆ ತರಿಸಬಹುದು ದೀಪ ಹಚ್ಚಬಹುದು ಎಂಬುದು ಗತಕಾಲದ ಪ್ರಕರಣಗಳಿಂದ ನಿರ್ಧರಿಸಿಗಳಿಂದ ತಿಳಿದು ಬರುತ್ತದೆ. ಇಂತಹ ಶಕ್ತಿಯನ್ನು ಅಡಗಿಸಿಕೊಂಡ ಸಂಗೀತೋತ್ಸವದಲ್ಲಿ ಇಂದು ನಾವು ಪಾಲ್ಗೊಳ್ಳುತ್ತಿರುವುದು ಹೆಮ್ಮೆ ಎನಿಸುತ್ತಿದೆ ಎಂದರು.
ಸಾನಿಧ್ಯ ವಹಿಸಿದ್ದ ಶಿರಹಟ್ಟಿಯ ಶ್ರೀ ಪಕೀರ ಸಿದ್ದರಾಮ ಮಹಾಸ್ವಾಮಿಗಳು ಮಾತನಾಡಿ ಎಲ್ಲರಿಗೂ ಸಂಗೀತವು ದಿವ್ಯ ಔಷಧವಾಗಿದ್ದು ನಾವೆಲ್ಲ ಅದನ್ನು ಆರಾಧಿಸೋಣ ಎಂದರು
ಶಾಸಕ ಎಂಆರ್ ಪಾಟೀಲ್ ಅವರು ಮಾತನಾಡಿ ಕುಂದಗೋಳ ಎಂದರೆ ಸಂಗೀತದ ನಾಡು, ಎಂದು ಹೇಳಿದರು.
ವಿಶ್ವಸ್ಥ ಸಂಸ್ಥೆಯ ಅಧ್ಯಕ್ಷ ಡಾ. ಅರವಿಂದ್ ಕಟಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿ ವರ್ಷವೂ ನಾವು ಈ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲು ಪ್ರತಿ ಬಾರಿ ಹಣದ ಕೊರತೆ ಆಗುತ್ತಿದೆ. ಆದರೂ ಗುರುವರ್ಯ ಸವಾಯಿ ಗಂಧರ್ವರ ಆಶೀರ್ವಾದದಿಂದ ಎಲ್ಲವೂ ಸರಳವಾಗಿ ಸಾಗುತ್ತಿದೆ. ಕಲಾವಿದರು ಇಲ್ಲಿ ಸೇವೆ ಸಲ್ಲಿಸಲು ನಾ ಮುಂದು ತಾ ಮುಂದು ಎಂದು ಬಂದು ತಮ್ಮ ನಿಶ್ವಾರ್ಥ ಸೇವೆ ಸಲ್ಲಿಸುತ್ತಾರೆ ಅವರ ಭಾವ ರಮಣೀಯ ಎಂದರು
ಸವಾಯಿ ಗಂಧರ್ವ ರಾಷ್ಟಿçÃಯ ಪುರಸ್ಕöÈತರಾದ ಅಶ್ವಿನಿ ಬಿಳಿ ದೇಶಪಾಂಡೆ ಅವರನ್ನು ಗೌರವಿಸಿ ಸತ್ಕರಿಸಲಾಯಿತು. ಅದರಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಕಲಾವಿದರನ್ನು ಮತ್ತು ಕಾರ್ಯಕ್ರಮಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿ-ಗೌರವಿಸಲಾಯಿತು
ಧಾರವಾಡ ಶೆಟ್ಟರ್ ಸ್ವಾಗತಿಸಿದರು. ಶಂಕರ್ ಗೌಡ ದೊಡ್ಡಮನಿ ವಂದಿಸಿದರು ಪ್ರೊಫೆಸರ್ ಎನ್.ಎಸ್ ಕುಸುಗಲ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮೋಹನ್ ಜೋಶಿ ಅವರ ತಬಲಾ ಸೋಲೊ ತನುಮನತಣಿಸಿತು.























