
ನವದೆಹಲಿ,ಜ.೨೦- ದೇಶದಲ್ಲಿ ಕಳೆದ ೧೦ ವರ್ಷಗಳ ಅವಧಿಯಲ್ಲಿ ರಕ್ಷಣಾ ರಫ್ತು ದಾಖಲೆಯ ೨೪,೦೦೦ ಕೋಟಿ ರೂ.ಗಳನ್ನು ತಲುಪಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ
೨೦೧೪ ರಲ್ಲಿ ಕೇವಲ ೪೬,೪೨೫ ಕೋಟಿ ರೂ. ಇದ್ದ ದೇಶೀಯ ರಕ್ಷಣಾ ಉತ್ಪಾದನೆಯು ಈಗ ದಾಖಲೆಯ ೧.೫೧ ಲಕ್ಷ ಕೋಟಿ ರೂ.ಗೆ ಬೆಳೆದಿದೆ. ಇದರಿಂದ ಭಾರತ ಇನ್ನು ಮುಂದೆ ಕೇವಲ ಅಮುದು ರಾಷ್ಟ್ರ ಮಾತ್ರವಲ್ಲ ರಫ್ತುದಾರ ರಾಷ್ಟ್ರ ಎಂದು ತಿಳಿಸಿದ್ದಾರೆ
ಮಹಾರಾಷ್ಟ್ರದ ನಾಗ್ಪುರದಲ್ಲಿ ಭಾರತದ ಶಸ್ತ್ರಾಸ್ತ್ರ ರಫ್ತಿಗೆ ದೊಡ್ಡ ಉತ್ತೇಜನ ನೀಡುವ ಸಲುವಾಗಿ, ಪಿನಾಕಾ ರಾಕೆಟ್ ವ್ಯವಸ್ಥೆಯ ಮೊದಲ ಬ್ಯಾಚ್‌ಗೆ ಚಾಲನೆ ನೀಡಿ ಮಾತನಾಡಿದ ಅವರುನಿಖರತೆ ಮತ್ತು ವಿಸ್ತೃತ ವ್ಯಾಪ್ತಿಗೆ ಹೆಸರುವಾಸಿಯಾದ ಮಲ್ಟಿ-ಬ್ಯಾರೆಲ್ ರಾಕೆಟ್ ಲಾಂಚರ್ ನ ರಫ್ತು, ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನದ ವಿಶ್ವಾಸಾರ್ಹ ಪೂರೈಕೆದಾರನಾಗಿ ಹೊರಹೊಮ್ಮಲು ಸಹಕಾರಿಯಾಗಿದೆ ಎಂದಿದ್ದಾರೆ
ಪಿನಾಕಾದ ಇತ್ತೀಚಿನ ಪ್ರಾಯೋಗಿಕ ಆವೃತ್ತಿಯು ೧೨೦ ಕಿಮೀ ಆಂಚರ್‍ಗಳ ವ್ಯಾಪ್ತಿ ಸಹ ಮುಟ್ಟಬಲ್ಲದು, ೭೫ ಕಿಮೀ ವರೆಗಿನ ಗುರಿ ಹೊಡೆಯುವ ರೂಪಾಂತರಗಳೊಂದಿಗೆ ಹೆಚ್ಚು ಸಾಮರ್ಥ್ಯವಿರುವ ಶಸ್ತ್ರಾಸ್ತ್ರ ವ್ಯವಸ್ಥೆಗಳಾಗಿವೆ, ಬೆಳೆಯುತ್ತಿರುವ ಶಸ್ತ್ರಾಸ್ತ್ರ ರಫ್ತಿಗೆ ಪೂರಕವಾಗಿದೆ ಎಂದು ತಿಳಿಸಿದ್ದಾರೆ
ಸೌರ ರಕ್ಷಣಾ ಮತ್ತು ಏರೋಸ್ಪೇಸ್ ಸೌಲಭ್ಯದಲ್ಲಿ ಅಭಿವೃದ್ಧಿಪಡಿಸಲಾದ ಪಿನಾಕಾ ಕ್ಷಿಪಣಿಗಳ ರಫ್ತು ಪ್ರಾರಂಭವಾಗಿದೆ ರಕ್ಷಣಾ ಉದ್ಯಮದ ಸಾಮರ್ಥ್ಯಗಳನ್ನು ಪ್ರದರ್ಶಿಸುವ ಜೊತೆಗೆ ಉತ್ತೇಜನಕ್ಕೂ ಸಹಕಾರಿಯಾಗಲಿದೆ ಎಂದಿದ್ಧಾರೆ
“ಭಾರತ ಇನ್ನು ಮುಂದೆ ಕೇವಲ ಆಮದುದಾರನಲ್ಲ, ಬದಲಾಗಿ ರಫ್ತುದಾರನಾಗುವತ್ತ ವೇಗವಾಗಿ ಸಾಗುತ್ತಿದೆ” ಎಂದು ಹೇಳಿದ ಅವರು ಖಾಸಗಿ ವಲಯದ ಹೆಚ್ಚುತ್ತಿರುವ ಭಾಗವಹಿಸುವಿಕೆಯಿಂದಾಗಿ ರಫ್ತು ಹೆಚ್ಚಳವಾಗಲಿದೆ ಎಂದು ಮಾಹಿತಿ ನಿಡಿದ್ದಾರೆ
ಏಪ್ರಿಲ್ ೨೦೨೨ ರಲ್ಲಿ ಯಶಸ್ವಿಯಾಗಿ ಪ್ರಯೋಗಗಳನ್ನು ಪೂರ್ಣಗೊಳಿಸಿದ ನಂತರ ಭಾರತೀಯ ಸೇನೆಯು ಈಗಾಗಲೇ ಪಿನಾಕಾ ಒಞ-I ವರ್ಧಿತ ರೂಪಾಂತರ ಅನ್ನು ಸೇರ್ಪಡೆಗೊಳಿಸಿದೆ. ೩೭.೫-ಕಿಮೀ ವ್ಯಾಪ್ತಿಯೊಂದಿಗೆ ನಿರ್ಮಿಸಲಾದ ಪಿನಾಕಾವನ್ನು ಕಾಲಾನಂತರದಲ್ಲಿ ಹೆಚ್ಚಿನ ವ್ಯಾಪ್ತಿ ಮತ್ತು ಪರಿಣಾಮಕಾರಿತ್ವವನ್ನು ನೀಡಲು ನವೀಕರಿಸಲಾಗಿದೆ ಎಂದು ತಿಳಿಸಿದ್ಧಾರೆ
ಸುಮಾರು ೨,೫೦೦ ಕೋಟಿ ರೂ. ಮೊತ್ತದ ಯೋಜನೆ ಇದಾಗಿದ್ದು ಸೇನೆಯು ಈಗ ೧೨೦-ಕಿಮೀ ಸ್ಟ್ರೈಕ್ ರೇಂಜ್ ರಾಕೆಟ್‌ಗಳನ್ನು ಸೇರಿಸಲು ನೋಡುತ್ತಿದೆ. ಡಿಸೆಂಬರ್ ೨೦೨೫ ರಲ್ಲಿ ಪ್ರಯೋಗವನ್ನು ನಡೆಸಲಾದ ಹೊಸ ೧೨೦-ಕಿಮೀ ಸ್ಟ್ರೈಕ್ ರೇಂಜ್ ರಾಕೆಟ್‌ಗಳನ್ನು ಅದೇ ಲಾಂಚರ್‍ನಿಂದ ಉಡಾಯಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ



























