Home ಜಿಲ್ಲೆ ಕಾರಬಾರಿ ವಿರುದ್ಧ ಮಾನನಷ್ಟ ಮೊಕದ್ದಮೆ: ದೀಪಕ್ ಪಾಟೀಲ ಎಚ್ಚರಿಕೆಅನುದಾನ ದುರ್ಬಳಕೆಗೂ ನನಗೂ ಸಂಬAಧವಿಲ್ಲ

ಕಾರಬಾರಿ ವಿರುದ್ಧ ಮಾನನಷ್ಟ ಮೊಕದ್ದಮೆ: ದೀಪಕ್ ಪಾಟೀಲ ಎಚ್ಚರಿಕೆಅನುದಾನ ದುರ್ಬಳಕೆಗೂ ನನಗೂ ಸಂಬAಧವಿಲ್ಲ

ಬೀದರ್: ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸರ್ಕಾರದ ಅನುದಾನ ದುರ್ಬಳಕೆ ಪ್ರಕರಣಕ್ಕೂ ತಮಗೂ ಯಾವುದೇ ಸಂಬAಧ ಇಲ್ಲ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೀಪಕ್ ಪಾಟೀಲ ಚಾಂದೋರಿ ತಿಳಿಸಿದ್ದಾರೆ.
ಪ್ರಕರಣದ ಸಂಬAಧ ಲೋಕಾಯುಕ್ತ, ಸಿಐಡಿ, ಎಸ್‌ಐಟಿ ಸೇರಿ ಯಾವುದೇ ತನಿಖೆಗೆ ಸಿದ್ಧನಿದ್ದೇನೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ನನ್ನ ಹೆಸರಿಗೆ ಕಪ್ಪು ಮಸಿ ಬಳಿಯಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರವೀಣ್ ಕಾರಬಾರಿ ಪ್ರಕರಣಕ್ಕೂ ನನಗೂ ಸಂಬAಧ ಕಲ್ಪಿಸಿ ಸುಳ್ಳು ಆರೋಪ ಮಾಡಿದ್ದಾರೆ. ಪ್ರಕರಣದಲ್ಲಿ ನನ್ನ ಪಾತ್ರ ಸಾಬೀತುಪಡಿಸದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದ್ದಾರೆ.
ನಾನು ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿದ್ದಾಗ ಪಾರದರ್ಶಕ ಆಡಳಿತ ನೀಡಿದ್ದೆ. ೨೦೧೫- ೧೬ರಲ್ಲಿ ಅಂದಿನ ಕರ್ನಾಟಕ ಸರ್ಕಾರ ಗ್ರಾಮ ಪಂಚಾಯಿತಿಗೆ ಜಿಲ್ಲೆಯ ಮೊದಲ ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯಿತಿ ಪ್ರಶಸ್ತಿ ನೀಡಿತ್ತು. ಜಮಶೆಡಪುರದಲ್ಲಿ ಪ್ರಧಾನಿ ಅವರು ನಡೆಸಿದ ಸಂವಾದಕ್ಕೆ ಜಿಲ್ಲೆಯಿಂದ ನನ್ನನ್ನು ಆಯ್ಕೆ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.
ಪ್ರವೀಣ್ ಕಾರಬಾರಿ ಔರಾದ್ ಶಾಸಕರ ಚೇಲಾ ಆಗಿದ್ದಾರೆ. ಹೊಸ ಸಹಕಾರಿ ಬ್ಯಾಂಕ್ ಕಟ್ಟಲು ಮುಂದಾಗಿದ್ದಾರೆ. ಅದಕ್ಕಾಗಿ ಶಾಸಕರನ್ನು ಖುಷಿಪಡಿಸಿ, ಅವರಿಂದ ಠೇವಣಿ ಸಂಗ್ರಹಿಸಲು ನನ್ನ ವಿರುದ್ಧ ವಿನಾಕಾರಣ ಸುಳ್ಳು ಹೇಳಿಕೆ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ನನ್ನ ವಿರುದ್ಧ ಮಾಡಿರುವ ಆರೋಪವು ಔರಾದ್ ಶಾಸಕರು ಮಾಡಿರುವ ಭ್ರಷ್ಟಾಚಾರ, ಭೂ ಕಬಳಿಕೆ ವಿರುದ್ಧ ನಾನು ನಡೆಸುತ್ತಿರುವ ಹೋರಾಟಕ್ಕೆ ತಡೆಯೊಡ್ಡುವ ತಂತ್ರವಾಗಿದೆ. ಆದರೆ, ನಾನು ಇದ್ಯಾವುದಕ್ಕೂ ಹೆದರುವವನಲ್ಲ ಎಂದು ಹೇಳಿದ್ದಾರೆ.
ಭ್ರಷ್ಟಾಚಾರ ಮಾಡಿ ಐಷಾರಾಮಿ ಜೀವನ ನಡೆಸುವುದು ಕಾರಬಾರಿ ಸಂಸ್ಕೃತಿ ಆಗಿದೆಯೇ ಹೊರತು ನನ್ನದಲ್ಲ. ನಾನು ಸುಸಂಸ್ಕೃತ, ಸ್ಥಿತಿವಂತ ಕುಟುಂಬದಿAದ ಬಂದಿದ್ದೇನೆ. ಕಾರು, ಬಂಗಲೆ ನಮ್ಮ ಪೂರ್ವಜರ ಆಸ್ತಿಯಿಂದ ಬಂದವುಗಳಾಗಿವೆ. ಬೇರೆಯವರ ವೈಯಕ್ತಿಕ ವಿಷಯದ ಕುರಿತು ಮಾತನಾಡುವ ಕಾರಬಾರಿ ತಾನು ಎಲ್ಲಿಂದ ಬಂದಿದ್ದೇನೆ. ಮೊದಲು ಏನಾಗಿದ್ದೇನೆ, ಯಾರ ಯಾರ ಎಂಜಲು ಕಾಸಿನಿಂದ ಈ ಮಟ್ಟಕ್ಕೆ ತಲುಪಿದ್ದೇನೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಕಾರಬಾರಿಯಂತಹ ಚಿಲ್ಲರೆ ವ್ಯಕ್ತಿ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ನಾನು ಏನಿದ್ದೇನೆ, ನನ್ನ ವ್ಯಕ್ತಿತ್ವ ಎಂತಹದ್ದು ಎನ್ನುವುದು ಇಡೀ ಜಿಲ್ಲೆಗೆ ಗೊತ್ತಿದೆ. ಸೂರ್ಯನ ಮೇಲೆ ಉಗುಳುವ ಮುನ್ನ ಆ ಉಗುಳು ನಿನ್ನ ಮುಖದ ಮೇಲೆಯೇ ಬೀಳುತ್ತದೆ ಎನ್ನುವುದನ್ನು ಕಾರಬಾರಿ ಅರಿಯಬೇಕು ಎಂದು ತಿಳಿಸಿದ್ದಾರೆ.
ಚಾಂದೋರಿ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ನಕಲಿ ಸಹಿ ಮಾಡಿ ಗ್ರಾಮ ವಿಕಾಸ ಯೋಜನೆ ಹಾಗೂ ೧೫ನೇ ಹಣಕಾಸು ನಿಧಿಯ ರೂ. ೪೮.೯೨ ಲಕ್ಷ ಬೇರೆ ಬೇರೆ ಖಾತೆಗೆ ವರ್ಗಾವಣೆ ಮಾಡಿದ ಬಿಲ್ ಕಲೆಕ್ಟರ್ ಮಹಾದೇವ ನನ್ನ ಆಪ್ತ ಎನ್ನುವ ಆರೋಪ ಕಿವಿಯಲ್ಲಿ ಹೂ ಇಡುವಂಥದ್ದು. ಮಹಾದೇವ ಅವರು ಕಾರಬಾರಿ ಅವರ ಊರಿನವರು. ಬಿಲ್ ಕಲೆಕ್ಟರ್ ಆಗಿ ಅವರು ನೇಮಕವಾದದ್ದೇ ಕಾರಬಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ. ಆಗ ನಾನು ಗ್ರಾಮ ಪಂಚಾಯಿತಿ ಸದಸ್ಯನೂ ಆಗಿರಲಿಲ್ಲ ಎಂದು ಹೇಳಿದ್ದಾರೆ.
೨೦೨೫ ರಲ್ಲಿ ಕರ ವಸೂಲಿಗಾರ ಅವ್ಯವಹಾರ ಮಾಡಿದ್ದಾನೆ ಎಂದು ನಾನೇ ದೂರು ಕೊಟ್ಟಿದ್ದೆ. ನನ್ನ ಆಪ್ತನಾಗಿದ್ದರೆ ನಾನೇಕೆ ದೂರು ಕೊಡುತ್ತಿದ್ದೆ. ನಂತರ ಕಾರಬಾರಿ ಶಾಸಕರ ಮೇಲೆ ಒತ್ತಡ ಹಾಕಿಸಿ ತನಿಖೆ ಆಗದಂತೆ ನೋಡಿಕೊಂಡಿದ್ದರು. ಕೊರೆಕಲ್ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರವಾದದ್ದು ಗೊತ್ತಾದಾಗ, ಕಾರಬಾರಿ ಅವರೇ ಅವ್ಯವಹಾರದಲ್ಲಿ ಭಾಗಿಯಾದವರ ಹಾಗೂ ಅಧಿಕಾರಿಗಳ ರಾಜಿ ಸಂಧಾನ ಮಾಡಿಸಿದ್ದರು. ಅವ್ಯವಹಾರದ ಹಣ ಮರಳಿ ಸರ್ಕಾರದ ಖಾತೆಗೆ ಜಮೆ ಮಾಡಿಸಿದ್ದರು ಎಂದು ದೂರಿದ್ದಾರೆ.
ಗ್ರಾಮ ವಿಕಾಸ ಯೋಜನೆ ಕಾಮಗಾರಿ ನಿರ್ವಹಿಸಿದ್ದೇ ಆ ಯೋಜನೆ ಹಣ ದುರುಪಯೋಗದ ಬಗ್ಗೆ ಮಾತನಾಡುತ್ತಿರುವ ಪ್ರವೀಣ್ ಕಾರಬಾರಿ. ಹಲಬರ್ಗಾದ ಗುತ್ತಿಗೆದಾರ ಹೆಸರಲ್ಲಿ ಕಾಮಗಾರಿ ಕೈಗೊಂಡಿದ್ದರು. ನಕಲಿ ಸಹಿ, ಹಣ ವರ್ಗಾವಣೆ ಎಲ್ಲದಕ್ಕೂ ಸೂತ್ರಧಾರರು ಕಾರಬಾರಿ ಅವರೇ ಎಂದು ಆರೋಪಿಸಿದ್ದಾರೆ.
ಸದ್ಯ ಕಾರಬಾರಿ ಮಾಡುತ್ತಿರುವ ಆರೋಪ ಉಲ್ಟಾ ಚೋರ್ ಕೋತ್ವಾಲ್ ಕೋ ಡಾಟೆ ಎಂಬAತಿದೆ. ಚಾಂದೋರಿ ಗ್ರಾಮ ಪಂಚಾಯಿತಿಯ ಅನುದಾನ ದುರ್ಬಳಕೆಯ ನಿಷ್ಪಕ್ಷಪಾತ ತನಿಖೆ ನಡೆಸಿದರೆ ಕಾರಬಾರಿ ಪಾತ್ರ ಬಯಲಾಗಲಿದೆ. ಕಾರಬಾರಿ ವಿನಾಕಾರಣ ನನ್ನ ಹೆಸರಿಗೆ ಬರುವುದನ್ನು ನಿಲ್ಲಿಸದಿದ್ದರೆ ಕಾನೂನು ಚೌಕಟ್ಟಿನಲ್ಲೇ ತಕ್ಕ ಪಾಠ ಕಲಿಸಲಾಗುವುದು ಎಂದು ಹೇಳಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಔರಾದ್ ಶಾಸಕರ ಅಣತಿಯಂತೆ ಕಾರಬಾರಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಈಗ ಬಿಜೆಪಿ ತಾಲ್ಲೂಕು ಅಧ್ಯಕ್ಷರಾಗುವ ಹಗಲುಗನಸು ಕಾಣುತ್ತಿದ್ದಾರೆ. ಅದಕ್ಕಾಗಿಯೇ ಸಂಬAಧವಿಲ್ಲದ ಸುಳ್ಳು ಹೇಳಿಕೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಪಕ್ಷ ಅವರಿಗೆ ಹೇಗೆ ಮಣೆ ಹಾಕುತ್ತದೆ ನೋಡೋಣ ಎಂದು ಅವರ ಪಕ್ಷದ ನಿಷ್ಠಾವಂತ ಕಾರ್ಯಕರ್ತರೇ ಆಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.