
ಕಲಬುರಗಿ,ಆ.29-ಹವಾಮಾನ ವೈಪರಿತ್ಯದ ಅತೀ ಕೆಟ್ಟದಾದಂತಹ ಎಲ್‍ನಿನೊ ಪರಿಣಾಮವಾಗಿರುವ ತೀವ್ರ ಮಳೆಯ ಕೊರತೆ, ಭೀಕರ ಬರಗಾಲದ ಕೆಟ್ಟ ಪರಿಸಥಿಗೆ ಸಿಲುಕಿರುವ ಕಲಬುರಗಿ ಜಿಲ್ಲೆಯನ್ನು ಬರಗಾಲ ಪೀಡಿತವೆಂದು ಘೋಷಿಸುವ ಬಗ್ಗೆ ಈಗಾಗಲೇ ಸರ್ಕಾರಾದ ಗಮನಲ್ಲಿ ಹಲವು ಸಂಗತಿಳಿವೆ. ಆದಾಗ್ಯೂ ಈಚೆಗಿನ ಘೋಷಿತ ಮೊದಲ ಪಟ್ಟಿಯಲ್ಲಿ ಕಲಬುರಗಿ ಸೇರ್ಪಡೆ ಆಗದ ವಿಚಾರವಾಗಿ ತಾವು ಸಿಎಂ ಶಿವಕುಮಾರ್, ಡಿಸಿಎಂ ಡಾ. ಪರಮೇಶ್ವರ ಹಾಗೂ ಜಿಲ್ಲಾ ಉಸತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಗಮನಕ್ಕೆ ತರೋದಾಗಿ ಕಲಬುರಗಿ ನಗರ ಸಾಸಕರಾದ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.
ಈಗಾಗಲೇ ಕಲಬುರಗಿಯಲ್ಲಿ ಸಿಎಂ ಅವರೇ ಸಭೆ ಮಾಡಿ ಹೋಗಿದ್ದಾರೆ. ಬರಗಾಲದ ಅನೇಕ ಸಂಗತಿಗಳನ್ನು ಮಾಹಿತಿ ಪಡೆದಿದ್ದಾರೆ. ಕೇಂದ್ರದ ಬರಗಾಲಮಾನದಂಡಗಳಂತೆ ಮೊದಲ ಪಟ್ಟಿ ಹೊರಬಿದ್ದಿದೆ. ಮಳೆ ಕೊರತೆ ಕಾಡುತ್ತಿರುವ ಕಲಬರಗಿ ಯಾವ ಕಾರಣಕ್ಕಾಗಿ ಕೈಬಿಟ್ಟು ಹೋಗಿದೆ ಎಂಬುದನ್ನು ಗಮನಸಿ ಸೂಕ್ತ ನ್ಯಾಯ ಒದಗಿಸಲು ಗಮನ ಸೆಳೆಯುವೆ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಭೀಕರ ಬರಗಾಲ ಎದುರಾಗುವ ಎಚ್ಚರಿಕೆ ಬಂದ ಕೂಡಲೇ ಹವಾಮಾನ ವರದಿಯನ್ನು ಗಂಭೀರವಾಗಿ ಪರಿಗಣಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿಗಳು ಕಲಬುರಗಿಗೆ ಆಗಮಿಸಿದ ಸಂದರ್ಭದಲ್ಲಿ ಅವರ ಸಮ್ಮುಖದಲ್ಲಿಯೇ ಜಿಲ್ಲೆಯ ಬರ ಪರಿಸ್ಥಿತಿಯ ಕುರಿತು ಸ್ಪಷ್ಟವಾಗಿ ಪ್ರಸ್ತಾಪಿಸಿ, ಜಿಲ್ಲೆಯ ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾಗಿಯೂ ಸಾಸಕರಾದ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.
ಕಳೆದ ಮುಂಗಾರು ಅಧಿವೇಶನದಲ್ಲಿ ಬರಗಾಲದ ಕುರಿತು ಚರ್ಚೆಗೆ ಅವಕಾಶ ನೀಡದೆ ಸಭೆಯನ್ನು ಭಗ್ನಗೊಳಿಸಿದ ಬಿಜೆಪಿ ಸದಸ್ಯರ ವರ್ತನೆ ಜನರ ಹಿತಕ್ಕೆ ವಿರುದ್ಧವಾಗಿದೆ. ಆದಾಗ್ಯೂ ನಾನು ಸದನದಲ್ಲಿ ಬರಗಾಲ, ರೈತರ ಬವಮೆ ಕುರಿತಂತೆ ಪಟ್ಟು ಬಿಡದಂತೆ ಮಾತನಾಡಿರುವೆ, ಇದೀಗ ಅದೇ ಬಿಜೆಪಿ ಮುಖಂಡರು ಬರಗಾಲ ಗೋಷಣೆಗೆ ಆಗ್ರಹಿಸುತ್ತಿರೋದು ಹಾಸ್ಯಾಸ್ಪದವಾಗಿದೆ. ಸದನದಲ್ಲಿ ಚರ್ಚೆಗಿದ್ದ ಅವಕಾಶ ಬಳಸದೆ ರೈತರಿಗೆ ಬಿಜೆಪಿ ಅನ್ಯಾಯ ಮಾಡಿದೆ ಎಂದು ಅಲ್ಲಂಪ್ರಭು ಟೀಕಿಸಿದ್ದಾರೆ.
“ಕಲಬುರಗಿ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿಸುವುದು ನಮ್ಮ ಬದಧತೆuಟಿಜeಜಿiಟಿeಜಗಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯುವೆ. ಕಲಬುರಗಿ ದಕ್ಷಿಣ ಹಾಗೂ ಜಿಲ್ಲೆಯ ರೈತರ ಹಿತ ಕಾಪಾಡೋದಾಗಿಯೂ ಶಾಸಕ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.






























