ಕಲಬುರಗಿ: ಅ 07: ಪ್ರತಿವರ್ಷದಂತೆ ಈ ವರ್ಷವೂ ಕೂಡ ಅರ್ಥಪೂರ್ಣವಾಗಿ ಡಿ,ದೇವರಾಜ ಅರಸು ರವರ 110 ನೇ ಜಯಂತಿಯನ್ನು ಆಚರಿಸಲು ಅಪರ ಜಿಲ್ಲಾಧಿಕಾರಿಗಳಾದ ರಾಯಪ್ಪ ಹುಣಸಗಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇತ್ತೀಚಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಗಸ್ಟ್ 20 ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಯ ಸಾರ್ವಜನಿಕ ಉದ್ಯಾನವನದಲ್ಲಿರುವ ವೀರಶೈವ ಕಲ್ಯಾಣ ಮಂಟ¥ದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಎಲ್ಲ ಸರಕಾರಿ ಅರೆಸರಕಾರಿ ಕಚೇರಿಗಳಲ್ಲಿ ಬೆಳಿಗ್ಗೆ 9 ಗಂಟೆಗೆ ಆಚರಿಸಬೇಕು. ಸರಕಾರಿ ಮತ್ತು ಅರೆ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯತಗಳಲ್ಲಿ ಕಡ್ಡಾಯವಾಗಿ ಜಯಂತಿಯನ್ನು ಆಚರಿಸಲು ತಿಳಿಸಿದರು.
ಭಾವಚಿತ್ರಕ್ಕೆ ಮಾಲಾರ್ಪಣೆ ಹೂದಾನಿಗಳಿಂದ ಅಲಂಕರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕುಡಿಯುವ ನೀರು ಹಾಗೂ ಸ್ವಚ್ಛತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಮಾಜ ಮುಖಂಡರು ಮಾತನಾಡಿ, ಮೆರವಣಿಗೆ ಹೆಚ್ಚಿನ ಕಲಾ ತಂಡಗಳನ್ನು ತರಬೇಕೆಂದು ಸಮಾಜದ ಮುಖಂಡ ಮನವಿ ಮಾಡಿಕೊಂಡಾಗ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಪನಿರ್ದೇಶಕಿ ಜಗದೀಶ್ವರಿ ನಾಶಿ ಅವರು ಮಾತನಾಡಿ, 02 ಕಲಾತಂಡಗಳನ್ನು ನೀಡಲಾಗುವುದು ನಾಡಗೀತೆ ಮತ್ತು ಸಾಂಸ್ಕøತಿ ಕಾರ್ಯಕ್ರಮಗಳು ಏರ್ಪಡಿಸಲಾಗುವುದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಡಿ.ದೇವರಾಜ ಜಯಂತಿ ದಿನಾಚರಣೆಯ ಅಂಗವಾಗಿ ನುರಿತ ಉಪನ್ಯಾಸಕರನ್ನಾಗಿ ಬಿ.ಎಂ.ರಾವೂರು ಅವರನ್ನು ನೇಮಿಸಲು ಹಾಜರಿದ್ದ ಸಂಘ ಸಂಸ್ಥೆಯ ಸದಸ್ಯರುಗಳು ಕೋರಿದರು.
ಡಿ.ದೇವರಾಜ ಅರಸು ಅವರ ಜನ್ಮ ದಿನಾಚರಣೆಯನ್ನು ಆಚರಿಸಲು ಬೆಳಿಗ್ಗೆ 8 ಗಂಟೆಗೆ ಡಿ.ದೇವರಾಜ ಅರಸು ಅವರ ಭಾವಚಿತ್ರದೊಂದಿಗೆ ಕಲಾತಂಡಗಳೊಂದಿಗೆ ಭವ್ಯವಾದ ಮೆರವಣಿಗೆಯನ್ನು ಕಲಬುರಗಿ ನಗರೇಶ್ವರ ಶಾಲೆ ಗಂಜದಿಂದ ಆರಂಭಗೊಂಡು ಪಬ್ಲಿಕ್ ಗಾರ್ಡನ್‍ದಿಂದ ವೀರಶೈವ ಕಲ್ಯಾಣ ಮಂಟಪಕ್ಕೆ ಮುಕ್ತಾಗೊಳ್ಳುವುದು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸೋಮಶೇಖರ ವೈ. ಅವರು ಮಾತನಾಡಿ, 2024-25 ನೇ ಸಾಲಿನಲ್ಲಿ ಇಲಾಖೆಯ ಜಿಲ್ಲೆಯ ಹಿಂದುಳಿದ ವಸತಿ ನಿಲಯಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಮತ್ತು ವಸತಿ ನಿಲಯದಲ್ಲಿ ಇದ್ದುಕೊಂಡು ಉನ್ನತ ವಿದ್ಯಭ್ಯಾಸ ಮಾಡಿ ಎಂ.ಬಿ.ಬಿ.ಎಸ್ ಮತ್ತು ಐ.ಐ.ಟಿ ಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ಸನ್ಮಾನಮಾಡಲಾಗುವುದು.ಶಾಲಾ ಕಾಲೇಜುಗಳಲ್ಲಿ ಬಾಷಣ,ರಸಪ್ರಶ್ನೆ,ಪ್ರಬಂದ ಸ್ಪರ್ಧೇಗಳನ್ನು ಹಮ್ಮಿಕೋಳ್ಳಲಾಗುವುದು ಎಂದು ಹೇಳಿದರು.
ಡಿ.ದೇವರಾಜ ಅರಸು ಕಳೆದ ಬಾರಿ ಐದು ಪ್ರಶಸ್ತಿಗಳನ್ನು ನೀಡಿದ್ದಾರೆ ಈಗ ಕೇವಲ ಒಂದೇ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಐದು ಪ್ರಶಸ್ತಿಗಳನ್ನು ನೀಡಲು ಸಾಹಿತಿ ಡಾ. ಚಿ.ಸಿ. ನಿಂಗಣ್ಣ ಸಭೆಯಲ್ಲಿ ಮನವಿ ಮಾಡಿಕೊಂಡರು.
ಮರಾಠ ಸಮಾಜದ ಅಧ್ಯಕ್ಷರಾದ ಆರ್.ಬಿ.ಜಗದಾಳೆ,ಸವಿತಾ ಸಮಾಜದ ಅಧ್ಯಕ್ಷರಾದ ಆನಂದ, ಉಪ್ಪಾರ ಸಮಾಜದ ಕಾರ್ಯದರ್ಶಿ ವೆಂಕಟೇಶ್ ಸವಿತಾ ಸಮಾಜದ ಮಾಜಿ ಅಧ್ಯಕ್ಷ ಅಶೋಕ ಡೈಮಂಡ್ ಈಡಿಗ ಸಮಾಜದ ಮುಖಂಡರಾದ ಅಂಬಯ್ಯ ಎಂ.ಗತ್ತೇದಾರ ಸೇರಿದಂತೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.























