ಫೆ.೧೧ ಆದಿ ಜಾಂವಂತ ಸ್ವಾಮಿಯ ಜಾತ್ರೆ ಆಚರಣೆಗೆ ನಿರ್ಧಾರ

ಕೋಲಾರ,ಜ.೧೭- ಮುಳಬಾಗಿಲು ತಾಲೂಕಿನ ಪುರಾಣ ಪ್ರಸಿದ್ಧ ಆವಣಿ ಜಾತ್ರೆಯ ಮೊದಲನೇ ಪೂಜೆಯ ಅಂಗವಾಗಿ, ಫೆಬ್ರವರಿ ೧೧ರಂದು ನಡೆಯಲಿರುವ ಶ್ರೀ ಗುರು ಆದಿ ಜಾಂಭವಂತ ಸ್ವಾಮಿಯ ವಾರ್ಷಿಕ ಜಾತ್ರೆಯನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಮಾದಿಗ ದಂಡೋರ ಸಮಿತಿಯ ತಾಲೂಕು ಅಧ್ಯಕ್ಷ ಮುನಿಗಂಗಪ್ಪ ತಿಳಿಸಿದರು.


ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಮಾದಿಗ ಸಮುದಾಯದ ಮುಖಂಡರ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.


ಜಾತ್ರಾ ಮಹೋತ್ಸವ: ಫೆಬ್ರವರಿ ೧೧, ೨೦೨೬ ರಂದು ಶ್ರೀ ಗುರು ಆದಿ ಜಾಂಭವಂತ ಸ್ವಾಮಿಯ ಅದ್ದೂರಿ ಪೂಜಾ ಕಾರ್ಯಕ್ರಮಗಳು ಜರುಗಲಿವೆ.


ಪಲ್ಲಕ್ಕಿ ಉತ್ಸವ: ಕೋಲಾರ ಜಿಲ್ಲೆಯಾದ್ಯಂತ ಇರುವ ಮಾದಿಗ ಸಮುದಾಯದ ಕುಲಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ತಮ್ಮ ಗ್ರಾಮಗಳ ಪಲ್ಲಕ್ಕಿಗಳ ಸಮೇತ ಈ ಜಾತ್ರೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಲಾಗಿದೆ.


ಭಕ್ತಾದಿಗಳಿಗೆ ಸ್ವಾಗತ: ನಾಡಿನ ಮೂಲೆ ಮೂಲೆಗಳಿಂದ ಬರುವ ಎಲ್ಲಾ ಭಕ್ತಾದಿಗಳಿಗೆ ಸಮುದಾಯದ ವತಿಯಿಂದ ಆತ್ಮೀಯ ಸ್ವಾಗತ ಕೋರಲಾಗಿದೆ.


ಈ ಬಾರಿ ಜಾತ್ರೆಯನ್ನು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಗುತ್ತಿದ್ದು, ಎಲ್ಲಾ ಸಮುದಾಯದ ಬಂಧುಗಳು ಪ್ರತಿಯೊಬ್ಬರು ಮಾಲೆ ಹಾಕಿ ಇರುಮುಡಿ ಹೊತ್ತು ಸಹಕರಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು” ಎಂದು ಮುನಿಗಂಗಪ್ಪ ಈ ಸಂದರ್ಭದಲ್ಲಿ ಕೋರಿದರು.


ಸಭೆಯಲ್ಲಿ ಸಮುದಾಯದ ಪ್ರಮುಖ ಮುಖಂಡರುಗಳಾದ ಕೃಷ್ಣಪ್ಪ, ಆವಲಪ್ಪ, ವೆಂಕಟರೋಣಪ್ಪ, ವೆಂಕಟರಾಮ, ಹನುಮಂತಯ್ಯ, ವೇಣುಗೋಪಾಲ್, ಎನ್ ಶ್ರೀನಿವಾಸ್, ನರಸಿಂಹ, ಮಂಜುನಾಥ್, ಹರೀಶ್, ವೆಂಕಟರಮಣ, ಕೆ.ಎನ್ ಸುಬ್ರಮಣಿ, ಮನೋಹರ್, ರಮೇಶ್, ಶ್ರೀನಿವಾಸ್, ದಶರಥ್ ಅಡ್ವಕೇಟ್, ವೆಂಕಟರಾಮ, ವಿ ರಮೇಶ್, ಹನುಮಂತಯ್ಯ, ಶಂಕರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.