
ಸಂಜೆ ವಾಣಿ ವಾರ್ತೆ
ಜಮಖಂಡಿ:ಡಿ.೨೫:ಮಹಾರಾಷ್ಟ್ರದ ಜತ್ತದಿಂದ ಧಾರವಾಡದ ಕುಂದಗೋಳ ತಾಲೂಕಿನವರೆಗೂ ವಿಸ್ತೀರ್ಣ ಹೊಂದಿದ್ದ ಜಮಖಂಡಿ ಪಟವರ್ಧನ ಸಂಸ್ಥಾನವು ಭಾರತೀಯ ಗಣರಾಜ್ಯದಲ್ಲಿ ಪ್ರಥಮ ವಿಲೀನ ಹೊಂದಿ ಅಂದಿನಿAದ ಇಂದಿನವರೆಗೂ ಜಿಲ್ಲೆ ಕೂಗು ಕಳೆದ ದಶಕಗಳಿಂದ ನೆರವೇರಿಲ್ಲ. ಸ್ವಾತಂತ್ರö್ಯನAತರ ಏಕೀಕರಣದಲ್ಲಿ ಪಟವರ್ಧನ ರಾಜರು ತಾವು ಭಾರತದೊಂದಿಗೆ ಮೊಟ್ಟ ಮೊದಲಿಗೆ ವಿಲೀನವಾಗುವುದರೊಂದಿಗೆ ಮುನ್ನುಡಿಯನ್ನು ಬರೆದರು. ಜೊತೆಗೆ ಕೆಲವಂದು ಪ್ರಮುಖ ಬೇಡಿಕೆಯನ್ನೂ ಸಹ ಅಂದಿನ ಸರಕಾರದ ಮುಂದಿರಿಸಿದ್ದರು ಕುಡಚಿ- ಬಾಗಲಕೋಟೆ ರೈಲು, ಜಂಬಗಿ ಗ್ರಾಮದ ಹತ್ತಿರ ಕೃಷ್ಣಾ ನದಿಗೆ ಸೇತುವೆ ನಿರ್ಮಾಣ, ಜಮಖಂಡಿಯನ್ನು ಜಿಲ್ಲಾ ಕೇಂದ್ರವನ್ನಾಗಿಸುವ ಷರತ್ತುಗಳೊಂದಿಗೆ ಅಂದಿನ ಗೃಹ ಸಚಿವ ವಲ್ಲಭಭಾಯಿ ಪಟೇಲ್ ಅವರ ಸಮ್ಮುಖದಲ್ಲಿ ಪರಶುರಾಮ ಶಂಕರರಾವ್ ಪಟವರ್ಧನ ಮಹಾರಾಜರು ಜಮಖಂಡಿ ಸಂಸ್ಥಾನವನ್ನು ದೇಶದಲ್ಲಿಯೇ ಪ್ರಥಮವಾಗಿ ಏಕೀಕರಣದಲ್ಲಿ ವಿಲೀನಗೊಳಿಸಿ ಇತಿಹಾಸ ನಿರ್ಮಿಸಿದರು. ಆದರೆ ಅದು ಕೈಗೂಡಲೇಯಿಲ್ಲ.ಅಲ್ಲಿಂದ ಪ್ರಾರಂಭವಾದ ಜಿಲ್ಲೆಯ ಕೂಗಿಗೆ ದಶಕಗಳೇ ಕಳೆದಿವೆ ಆದರೆ ಜಿಲ್ಲೆಯಾಗುವ ಕನಸು ಮಾತ್ರ ನನಸಾಗುವತ್ತ ಹೋಗಿಲ್ಲ. ೧೯೯೭ ರಲ್ಲಿ ಪ್ರಥಮ ಬಾರಿಗೆ ವಿಜಯಪುರ ಜಿಲ್ಲೆ ವಿಭಜನೆಯಾಗಿ ಬಾಗಲಕೋಟೆ ಹೊಸ ಜಿಲ್ಲೆಯಾದಾಗ ಜಮಖಂಡಿಯಲ್ಲಿ ಬೃಹತ ಹೋರಾಟವು ನಡೆದಿತ್ತು ಅಂದು ಅನೇಕ ಮಂತ್ರಿ ಮಹೋದಯರು ಆಶ್ವಾಸನೆಯನ್ನೂ ಕೂಡಾ ನೀಡಿ ಹೋದವರು ಇಂದಿಗೂ ಅದರತ್ತ ಗಮನ ಹರಿಸದಿರುವದೇ ಒಂದು ಯಕ್ಷ ಪ್ರಶ್ನೆಯಗಿದೆ.ಜಮಖಂಡಿಯು ಅವಿಭಜಿತ ಜಿಲ್ಲೆಯಲ್ಲಿಯೂ ಸಹ ಉಪವಿಭಾಗವಾಗಿತ್ತು ಪ್ರಸಕ್ತ ಮುಧೋಳ, ತೇರದಾಳ, ಬೀಳಗಿ, ರಬಕವಿ ಬನಹಟ್ಟಿ ತಾಲೂಕು ಸೇರಿಸಿಕೊಂಡು ಅದರ ಜೊತೆಗೆ ಸಾವಳಗಿಯನ್ನೂ ಹೊಸ ತಾಲೂಕು ಕೇಂದ್ರವಾಗಿಸಿದರೆ ಆರು ತಾಲೂಕು ಜಿಲ್ಲೆಗೆ ಸೇರುತ್ತವೆ.
ಜಮಖಂಡಿಯನ್ನು ಜಿಲ್ಲೆಯನ್ನಾಗಿ ಮಾಡುವ ಮಹದಾಸೆಹೊಂದಿದ ಮಾಜಿ ಕೇಂದ್ರ ಸಚಿವ ದಿ ಸಿದ್ದು ನ್ಯಾಮಗೌಡರು ದೇಶದಲ್ಲಿಯೇ ಮೊದಲು ಬಾರಿಗೆ ೨೦೧೮ ರಲ್ಲಿ ಸಂಸದ ಮಾದರಿಯ ತಾಲೂಕಾಡಳಿತ ಸೌಧವನ್ನು ಕಟ್ಟಿಕೆರೆಯ ಉದ್ಯಾನವನ ನಿರ್ಮಿಸಿದರು. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ೨೦೦೮ ರಲ್ಲಿ ಜಂಬಗಿ ಸೇತುವೆ ನಿರ್ಮಾಣಕ್ಕೆ ಚಾಲನೆ ನಿಡಿದ್ದರು. ಅದರ ಜೊತೆಗೆ ಕುಡಚಿ ಬಾಗಲಕೋಟೆ ರೈಲೂ ಕೂಡಾ ಆಮೆ ಗತಿಯಲ್ಲಿ ಸಾಗಿದೆ ಅದರೆ ಜಿಲ್ಲೆ ಸ್ಥಾನ ಮಾತ್ರ ಜಮಖಂಡಿಗೆ ಗಗನ ಕುಸುಮವಾಗಿದೆ.
ತಿವೃಗೊಳ್ಳದ ಹೋರಾಟ.ಜಿಲ್ಲಾ ಕೇಂದ್ರದ ಕೂಗು ಕೂಗಾಗಿ ದೂರದಲ್ಲಿಯೇ ಉಳಿದಿದೆ ತೀವೃ ಹೋರಾಟಗಳು ನಡೆಯಲೆಯಿಲ್ಲ ಬೆಳಗಾವಿ ವಿಧಾನ ಸೌಧದಲ್ಲಿ ಗೋಕಾಕ ಜಿಲ್ಲೆಯ ಕೂಗು ಎದ್ದಾಗ ಜಮಖಂಡಿ ಜಿಲ್ಲೆಯ ಕೂಗು ಏಳಲೇಯಿಲ್ಲ. ಆಳರಸರ ತಾತ್ಸಾರವೂ ಸಹ ಜಿಲ್ಲಯಾಗುವದಕ್ಕೆ ಹಿನ್ನೆಡೆಯಾಗಿದೆ ಎಂದು ಅನೇಕ ಹಿರಿಯರು ಹೇಳಿದ್ದಾರೆ.ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಹೇಳಿದ್ದು
ಮಾಜಿ ಮುಖ್ಯ ಮಂತ್ರಿ ದಿ ಜೆ.ಎಚ್. ಪಟೇಲರು ಹುಂಡೇಕಾರ ಮತ್ತು ಗದ್ದಿಗೌಡರ ಸಮೀತಿ ರಚನೆ ಮಾಡಿ ಜಿಲ್ಲೆಯ ವರದಿಯನ್ನು ತರಿಸಿತ್ತು ಆಗ ಸ್ಥಳೀಯ ಜನಪ್ರತಿನಿಧಿಗಳು ಅವರ ಮೇಲೆ ಒತ್ತಡ ಹೇರಲೇಯಿಲ್ಲ. ೨೦೦೮-೧೩ ರ ಅವಧಿಯಲ್ಲಿ ನಾಂಜ್ ಶಾಸಕರಿದ್ದಾಗ ಪ್ರಥಮ ಬಾರಿ ಜಮಖಂಡಿ ಜಲ್ಲೆ ಮತ್ತು ಸಾವಳಗಿ ತಾಲೂಕು ಘೋಷಣೆಗೆ ಧ್ವನಿ ಎತ್ತಿದ್ದು ದಾಖಲೆಗಳಿವೆ. ಅದರ ಜೊತೆಗೆ ಜಂಬಗಿ ಸೆತುವೆ ನಿರ್ಮಿಸಲು ಧ್ವನಿಯೆತ್ತಿದಾಗ ಜಂಬಗಿ ಸೆತುವೆ ನಿರ್ಮಾಣವಾಯಿತು, ಆದರೆ ಜಿಲ್ಲೆ ಮಾತ್ರ ಹಿಂದುಳಿದಿದೆ.
೧೯೯೭ ರಲ್ಲಿ ದಿ ಜೆ.ಚ್ ಪಟೇಲರು ಧಾರವಾಡ ಜಿಲ್ಲೆಯನ್ನು ಮೂರು ಜಿಲ್ಲೆಗಲಾಗಿ ಮಾಡಿದರು ಅದಕ್ಕಿಂತಲೂ ಭೌಗೋಳಿಕ ಭಾಗ ದೊಡ್ಡದಿದ್ದ ಅಖಂಡ ವಿಜಪುರ ಜಿಲ್ಲೆಯನ್ನು ಮೂರು ಜಿಲ್ಲೆಯನ್ನಗಿ ಮಾಡಬೇಕು ಎಂದು ಒತ್ತಯವಿದೆ ಎಂದರು.
ಬೆಳಗಾವಿ ಅಧಿವೆಶನದಲ್ಲಿ ಗೋಕಾಕ ಚಿಕ್ಕೋಡಿ ಜಿಲ್ಲೆಯ ಕೂಗು ಕೇಳಿ ಬಂದಿದೆ ಆದರೆ ನಮ್ಮಲ್ಲಿಯ ಜನಪ್ರತಿನಿಧಿಗಳು ಧ್ವನಿ ಯೆತ್ತಬೇಕಿತ್ತು ಹೋರಾಟವು ಆಗಬೇಕಿದೆ ಅದು ಆಗುತ್ತಿಲ್ಲ ಓಲೇಮಠದ ದಿ ಡಾ ಚೆನ್ನಬಸವ ಶ್ರೀಗಳು ಮತ್ತು ಕೇಲವು ಪ್ರಮುಖರು ಮಾತ್ರ ಈ ಹೋರಾಟಕ್ಕೆ ಆಸಕ್ತಿ ವಹಿಸಿದ್ದರು ಆದರೆ ಓಲೆ ಮಠದ ಚನ್ನಬಸವ ಶ್ರೀಗಳು ಲಿಂಗೈಕ್ಯದಿAದ ಹೋರಾಟವು ನೇಪಥ್ಯಕ್ಕೆ ಸರಿದಿದೆ ಎಂದು ಹೇಳಿದರು.

























