Home ಜಿಲ್ಲೆ ಬೆಂಗಳೂರು ಸಾಲದ ಹೊರೆ ಬಜೆಟ್

ಸಾಲದ ಹೊರೆ ಬಜೆಟ್

ಚಿಕ್ಕಬಳ್ಳಾಪುರ, ಮಾ. ೮:.ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಮಂಡಿಸಿದ ಬೃಹತ್ ಪ್ರಮಾಣದ ೪,೪೮ ಕೋಟಿ ಅಧಿಕ ರೂಗಳ ೧೭ನೇ ಬಜೆಟ್ ಹಣಕಾಸಿನ ದೃಷ್ಟಿಯಿಂದ ನೋಡಿದಾಗ ಇದು ರಾಜ್ಯದ ಜನರ ಮೇಲೆ ಅತ್ಯಂತ ಹೆಚ್ಚಿನ ಸಾಲದ ಹೊರೆಯನ್ನು ಹಾಕಿರುವ ಬಜೆಟ್ ಆಗಿದೆ ಎಂದು ಜಿಲ್ಲೆಯ ಬಿಜೆಪಿ ಮುಖಂಡ ಹಾಗೂ ಜೈ ಫೌಂಡೇಶನ್ ಅಧ್ಯಕ್ಷ ಡಾ. ಜೈ ಕುಮಾರ್ ವಿಶ್ಲೇಷಿಸಿದರು.


ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಜ್ಯದ ರಾಜಧಾನಿಗೆ ಕೇವಲ ೫೬ ಕಿಲೋಮೀಟರ್ ಸಮೀಪ ಇರುವ ಚಿಕ್ಕಬಳ್ಳಾಪುರ ಜಿಲ್ಲೆ ಶಾಶ್ವತ ನೀರಾವರಿ ಸಮಸ್ಯೆಯಿಂದ ಬಳಲುತ್ತಿದ್ದು ದಶಕಗಳ ಕಾಲದಿಂದ ಉತ್ತಮ ನೀರಾವರಿ ಇಲ್ಲದ ಈ ಜಿಲ್ಲೆಗೆ ಬಜೆಟ್ ನಲ್ಲಿ ಜಿಲ್ಲೆಯ ಜನತೆಗೆ ಅತ್ಯಂತ ಅವಶ್ಯಕತೆ ಇರುವ ಹೆಚ್ ಏನ್ ವ್ಯಾಲಿ ನೀರಿಗೆ ಮೂರನೇ ಹಂತದ ಪರಿಷ್ಕರಣೆಗೆ ಯಾವುದೇ ರೀತಿಯ ಭರವಸೆ ಆಗಲಿ ಅಥವಾ ಹಣಕಾಸು ಸೌಲಭ್ಯ ಆಗಲಿ ಒದಗಿಸದೆ ಇರುವುದು ಈ ಜಿಲ್ಲೆಯ ಜನತೆಯನ್ನು ನಿರಾಸೆಗೆ ಒಳಪಡಿಸಿದೆ ಎಂದರು.


ಈಗಾಗಲೇ ಬೆಂಗಳೂರಿನ ತ್ಯಾಜ್ಯ ಕಲುಷಿತ ನೀರಿನ ಕಾರಣದಿಂದಾಗಿ ಜಿಲ್ಲೆಯಲ್ಲಿ ಕಲುಷಿತ ನೀರು ಕುಡಿದು ರೋಗ ಗ್ರಸ್ತರಾಗುವ ಜನತೆ ಕಂಡುಬರುತ್ತಿದ್ದಾರೆ ಹಾಗೆಯೇ ಇಲ್ಲಿ ಬೆಳೆಯುವ ತರಕಾರಿ ಹೂವು ಮುಂತಾದ ಬೆಳೆಗಳಿಗೂ ಸಹ ಈ ಕಲುಷಿತ ನೀರು ದುಷ್ಪರಿಣಾಮ ಬೀರಿದೆ ಸರ್ಕಾರ ಈ ಬಗ್ಗೆ ಕೂಡಲೇ ಗಮನ ಹರಿಸುವುದು ಅತ್ಯಂತ ಸೂಕ್ತ ಎಂದರು.