Home ಜಿಲ್ಲೆ ಕಲಬುರಗಿ ತುಟ್ಟಿಭತ್ಯೆ ಹೆಚ್ಚಳ ನೌಕರರಲ್ಲಿ ಹೊಸ ಚೈತನ್ಯ ತುಂಬಿದೆ: ಅಂಬರೀಷ್ ಸಂಗಾವಿ

ತುಟ್ಟಿಭತ್ಯೆ ಹೆಚ್ಚಳ ನೌಕರರಲ್ಲಿ ಹೊಸ ಚೈತನ್ಯ ತುಂಬಿದೆ: ಅಂಬರೀಷ್ ಸಂಗಾವಿ

ಸೇಡಂ,ಮೇ,೧೨ಸರ್ಕಾರವು ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಿರುವುದು ಸ್ವಾಗತಾರ್ಹ ಕ್ರಮವಾಗಿದ್ದು, ಇದರಿಂದ ನೌಕರರಲ್ಲಿ ಹೊಸ ಚೈತನ್ಯ ಮೂಡಿದಂತಾಗಿದೆ ಎಂದು ತಾಲೂಕಾ ಸರ್ಕಾರಿ ನೌಕರರ ಬಳಗದ ಖಜಾಂಚಿ ಅಂಬರೀಷ್ ಸಂಗಾವಿ.ಟಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು ನೌಕರರ ಹಿತರಕ್ಷಣೆ ಮಾಡುವಲ್ಲಿ ಸರ್ಕಾರ ವಿಳಂಬ ಮಾಡದೆ ತೆಗೆದುಕೊಂಡ ಈ ನಿರ್ಧಾರ ಐತಿಹಾಸಿಕವಾದುದು. ಬಾಕಿ ಇರುವ ಇತರ ಬೇಡಿಕೆಗಳ ಬಗ್ಗೆಯೂ ಸರ್ಕಾರ ಇದೇ ರೀತಿ ಸ್ಪಂದಿಸುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.