Home ಜಿಲ್ಲೆ ಬೆಂಗಳೂರು ಎಸ್‌ಐಆರ್‌ನಲ್ಲಿ ನೋ ಮ್ಯಾಪಿಂಗ್ ಹೆಸರು ಸೇರ್ಪಡೆಗೆ ೧೭ರವರೆಗೆ ಗಡುವು

ಎಸ್‌ಐಆರ್‌ನಲ್ಲಿ ನೋ ಮ್ಯಾಪಿಂಗ್ ಹೆಸರು ಸೇರ್ಪಡೆಗೆ ೧೭ರವರೆಗೆ ಗಡುವು

filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:8; brp_del_th:0.0020,0.0000; brp_del_sen:0.1000,0.0000; motionR: 0; delta:null; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 280.50012;aec_lux_index: 0;albedo: ;confidence: ;motionLevel: 0;weatherinfo: null;temperature: 39;

ಶಿಡ್ಲಘಟ್ಟ.ಆ.೧೪-ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತದಾರರ ವಿವರಗಳ ಮ್ಯಾಪಿಂಗ್ ಆಗದಿರುವ ಕಾರಣ ೫ ಸಾವಿರಕ್ಕೂ ಅಧಿಕ ಮಂದಿ ಬಾಕಿ ಉಳಿದಿದ್ದಾರೆ.ಅವರಿಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.ಕೂಡಲೇ ಬಿಎಲ್‌ಓಗಳಿಗೆ ಸೂಕ್ತ ಮಾಹಿತಿ ನೀಡಿ ಎಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಎಸ್.ಎಸ್. ಅಬೀದ್ ಹೇಳಿದರು.


ತಾಲೂಕು ಕಚೇರಿಯಲ್ಲಿ ಎಸ್ ಐ ಆರ್ ಪ್ರಗತಿ ಕುರಿತು ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಎಸ್‌ಐಆರ್ ಪ್ರಕ್ರಿಯೆಯಲ್ಲಿ ನೋ ಮ್ಯಾಪಿಂಗ್ ಆಗಿರುವ ಕ್ಷೇತ್ರದಲ್ಲಿ ೫ ಸಾವಿರಕ್ಕೂ ಅಧಿಕ ಮಂದಿಗೆ ಫಾರಂ ನಂ.೬ ಮೂಲಕ ಹೆಸರು ಸೇರ್ಪಡೆ ಮಾಡಿಕೊಳ್ಳಲು ಇನ್ನೂ ಕೆಲವು ದಿನಗಳ ಕಾಲಾವಕಾಶ ಮಾತ್ರ ಇದೆ.ಆ.೧೭ರೊಳಗೆ ಅರ್ಜಿ ಸಲ್ಲಿಸಿ ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.


ತಾಲೂಕಿನಲ್ಲಿ ಫಾರಂ ನಂ.೬ರ ಅಡಿಯಲ್ಲಿ ಒಟ್ಟು ೨೪,೫೫೬ ಅರ್ಜಿಗಳು ಸ್ವೀಕೃತವಾಗಿದ್ದು,ಈ ಪೈಕಿ ೧೯,೩೪೫ ಅರ್ಜಿಗಳ ವಿಲೇವಾರಿ ಪೂರ್ಣಗೊಂಡಿದೆ.ಉಳಿದ ೫,೨೧೧ ಅರ್ಜಿಗಳು ನೋ ಮ್ಯಾಪಿಂಗ್ ಕಾರಣದಿಂದ ಬಾಕಿ ಉಳಿದಿವೆ. ೧೭ ರ ನಂತರ ಸಂಬಂಧಪಟ್ಟವರು ನಿಗದಿತ ಅವಧಿಯೊಳಗೆ ಫಾರಂ ನಂ.೬ ಸಲ್ಲಿಸಿ ಅಗತ್ಯ ದಾಖಲೆಗಳನ್ನು ನೀಡಬೇಕು ಎಂದು ಹೇಳಿದರು.


ತಹಶೀಲ್ದಾರ್ ಗಗನ ಸಿಂಧು ಮಾತನಾಡಿ,ಕೊನೆಯ ಅವಕಾಶವಾಗಿ ಆ.೧೭ರವರೆಗೆ ನೀಡಲಾಗಿದ್ದು,ಈ ಅವಧಿಯಲ್ಲಿ ಅರ್ಜಿ ಸಲ್ಲಿಸಿದವರ ದಾಖಲೆಗಳನ್ನು ಪರಿಶೀಲಿಸಿ, ಅರ್ಹತೆ ಹೊಂದಿರುವವರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು.ಹಾಗೆ ೧೮ ವರ್ಷ ಪೂರ್ಣಗೊಂಡಿರುವ ಹಾಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅರ್ಹರಾಗಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ನಿಗದಿತ ಗಡುವಿನೊಳಗೆ ಅರ್ಜಿ ಸಲ್ಲಿಸಿ ತಮ್ಮ ಮತದಾನದ ಹಕ್ಕನ್ನು ಖಚಿತಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.


ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತೆ ಅಮೃತ, ಹಾಗೂ ವಿವಿಧ ಪಕ್ಷದ ಮುಖಂಡರಾದ ಬಿಎಲ್‌ಎ-೨ಗಳು ಹಾಜರಿದ್ದರು.