
ಚನ್ನಮ್ಮನ ಕಿತ್ತೂರು, ಮೇ.19: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ಇದರ ಉಪ ಶಾಖೆ ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಉದ್ಘಾಟನೆಗೊಂಡಿತು. ಡಿಸಿಸಿ ಬ್ಯಾಂಕ್ ನಿರ್ದೇಶಕ ನಾನಾಸಾಹೇಬ ಪಾಟೀಲ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆ ಶಾಸಕ ಬಾಬಾಸಾಹೇಬ ಪಾಟೀಲ ವಹಿಸಿಕೊಂಡು ಮಾತನಾಡಿದರು.
ಅರವಳ್ಳಿಯ ಚನ್ನಬಸವದೇವರು ಸಾನಿಧ್ಯ ವಹಿಸಿ ದೀಪ ಬೆಳಗಿಸಿದರು. ಸಭೆಯಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ಮುಖ್ಯ ಕಾರ್ಯನಿರ್ವಾಣಾ (ಪ್ರಭಾರ) ಅಧಿಕಾರಿ ನಿಸ್ಸಾರ್ ಅಹಮ್ಮದ್ ಕಲಾವಂತ, ಅಂಬಡಗಟ್ಟಿ ಪಿಕೆಪಿಎಸ್ ಅಧ್ಯಕ್ಷ ಮಹಾಂತೇಶ ಎಸ್ ದಾಸ್ತಿಕೊಪ್ಪ, ಶಿವಪುತ್ರ ಬಾಗೇವಾಡಿ, ದೇವುಗೌಡ ಪಾಟೀಲ, ತಾಲೂಕ ನಿಯಂತ್ರಣಾಧಿಕಾರಿ ಶಿವಾನಂದ ಕೊಟಗಿ, ತಹಜಾನ್ ಹವಾಲ್ದಾರ, ಡಿಸಿಸಿ ಬ್ಯಾಂಕ ಹಾಗೂ ಪಿಕೆಪಿಎಸ್ ಸಿಬ್ಬಂದಿ, ಸಾರ್ವಜನಿಕರು, ಮುಖಂಡರು ಇತರರಿದ್ದರು.
























