Home ಜಿಲ್ಲೆ ಡಿಸಿಸಿ ಬ್ಯಾಂಕ್ ಶಾಖೆ ಕಟ್ಟಡ ಉದ್ಘಾಟನೆ

ಡಿಸಿಸಿ ಬ್ಯಾಂಕ್ ಶಾಖೆ ಕಟ್ಟಡ ಉದ್ಘಾಟನೆ

ಬೀದರ್: ತಾಲ್ಲೂಕಿನ ಕಮಠಾಣ ಗ್ರಾಮದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಶಾಖೆಯ ಹೊಸ ಕಟ್ಟಡವನ್ನು ಬ್ಯಾಂಕ್ ಅಧ್ಯಕ್ಷ ಅಮರ ಖಂಡ್ರೆ ಸೋಮವಾರ ಉದ್ಘಾಟಿಸಿದರು.
ಗ್ರಾಮದಲ್ಲಿ ಈ ಹಿಂದೆ ಬಾಡಿಗೆ ಕಟ್ಟಡದಲ್ಲಿ ಬ್ಯಾಂಕ್ ಶಾಖೆ ಕಾರ್ಯ ನಿರ್ವಹಿಸುತ್ತಿತ್ತು. ಇದೀಗ ಸ್ವಂತ ನಿವೇಶನದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಇದರಿಂದ ಬ್ಯಾಂಕ್ ಶಾಖೆ ಹಾಗೂ ಗ್ರಾಹಕರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಜಿಲ್ಲೆಯ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ರೈತರು, ಮಹಿಳೆಯರು, ದುಡಿಯುವ ವರ್ಗದವರ ಏಳಿಗೆಗೆ ಅವಿರತ ಶ್ರಮಿಸುತ್ತಿದೆ ಎಂದು ಹೇಳಿದರು.
ಜಿಲ್ಲೆಯ ಜನರು ಬ್ಯಾಂಕ್‌ನ ವಿವಿಧ ಸೌಲಭ್ಯಗಳ ಪ್ರಯೋಜನ ಪಡೆದು, ಆರ್ಥಿಕ ಅಭಿವೃದ್ಧಿ ಸಾಧಿಸಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುಳಾ ಎಸ್, ನಿರ್ದೇಶಕರಾದ ಶಂಕುತಲಾ ಬೆಲ್ದಾಳೆ, ಉಮೇಶ ಕುಲಕರ್ಣಿ, ಬಸವರಾಜ ಚಟ್ನಳ್ಳಿ, ಬಸವರಾಜ ಕಾಮಶೆಟ್ಟಿ, ಯದಲಾಪುರ ಪಿಕೆಪಿಎಸ್ ಅಧ್ಯಕ್ಷ ಸಂತೋಷ್ ಪಾಟೀಲ ಅಯಾಸಪುರ, ಮುಖಂಡ ಕುಶಾಲ್ ಯಾಬಾ, ಬ್ಯಾಂಕ್ ಸಿಬ್ಬಂದಿ, ಗಣ್ಯರು ಹಾಗೂ ಗ್ರಾಮಸ್ಥರು ಇದ್ದರು.