ದುಬಾರಿ ಶುಲ್ಕ ವಸೂಲಿಗಿಳಿದ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಜೂ.5ರಂದು ಡಿ.ಸಿ ಕಚೇರಿಗೆ ಮುತ್ತಿಗೆ: ಮುಧೋಳ

ಬೀದರ್:ಮೇ.24: ಫಿಜಿಕ್ಸ್ವಾಲಾ ಸೇರಿದಂತೆ ಅಕ್ರಮವಾಗಿ ನಡೆಸುತ್ತಿರುವ ಪದವಿ ಪೂರ್ವ ತರಬೇತಿ ಕೇಂದ್ರಗಳು, ಪ್ರೌಢಶಾಲೆಗಳು ಹಾಗೂ ಅಕ್ರಮ ಶಾಲೆಗಳನ್ನು ರದ್ದು ಮಾಡಬೇಕು ಮತ್ತು ನೀಟ್, ಜಿಇಇ ತರಬೇತಿ ಹೆಸರಿನಲ್ಲಿ ಬಡ ಮಕ್ಕಳಿಂದ ದುಬಾರಿ ಶುಲ್ಕ ವಸುಲಿಗಿಳಿದ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರೂದ್ಧ ಜೂನ್ 4ರೊಳಗೆ ಕ್ರಮ ಜರುಗಿಸದಿದ್ದರೆ ಜೂನ್ 5ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳ ಎಚ್ಚರಿಸಿದರು.
ಶನಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಸರ್ಕಾರ ಕೊಟ್ಯಾನುಗಟ್ಟಲೆ ಸರ್ಕಾರಿ ಶಾಲಾ, ಕಾಲೇಜುಗಳಿಗೆ ಹಣ ಖರ್ಚು ಮಾಡಿದರೂ ಅಲ್ಲಿ ಪರಿಣಾಮಕಾರಿ ಬೋಧನೆ ಮಾಡುತ್ತಿಲ್ಲ. ಸರ್ಕಾರಿ ಶಾಲೆಗಳ ಶಿಕ್ಷಕರು ತಮ್ಮ ಕೈ ಕೆಳಗೆ ಸ್ಥಳಿಯ ವಿದ್ಯಾವಂತ ಯುವಕರಿಗೆ ಬೋಧಿಸಲು ಕಳಿಸಿ ಡಿ.ಡಿ.ಪಿ.ಐ ಕಚೇರಿ ಮುಂದೆಯೆ ಹರಟೆ ಹೊಡೆಯುತ್ತ ಕಾಲ ಕಳೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಹೀಗಾಗಿ ಖಾಸಗಿ ಶಾಲೆ, ಕಾಲೇಜುಗಳತ್ತ ಜನರು ಮುಖ ಮಾಡುತ್ತಿರುವರು. ಅಲ್ಲಿ ದುಬಾರಿ ಶುಲ್ಕ ಹೆಚ್ಚಿಸಿದ ಕಾರಣ ಬಡ ಮಕ್ಕಳಿಗೆ ಶಿಕ್ಷಣ ಎಂಬುದು ನಕ್ಷತ್ರದಂತಾಗಿದೆ. ಸಾಲ, ಶೂಲ ಮಾಡಿ ಮಕ್ಕಳಿಗೆ ವಿದ್ಯಾವಂತರನ್ನಾಗಿ ಮಾಡಲು ಪೆÇೀಷಕರು ಮುಂದಾಗುತ್ತಿದ್ದರೆ ಬ್ಯಾಂಕುಗಳು ಹಾಗೂ ಖಾಸಗಿ ಲೇವಾದೇವಿಯವರು ಪೆÇೀಷಕರಿಂದ ಹಣ ವಸುಲಿಗಾಗಿ ಅಮಾನವಿಯತೆ ಮೆರೆಯುತ್ತಿರುವರು. ಬಡ ವಿದ್ಯಾರ್ಥಿಗಳ ಜೀವ ಹಿಂಡುತ್ತಿರುವ ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳಾದ ಭಾಲ್ಕಿಯ ಚನ್ನಬಸವೇಶ್ವರ ಗುರುಕುಲ ಕರಡ್ಯಾಳ, ಶಾಹಿನ್ ಕಾಲೇಜು, ಜ್ಞಾನಸುಧಾ ವಿದ್ಯಾಲಯದಂತಹ ಶಿಕ್ಷಣ ಸಂಸ್ಥೆಗಳಿಗೆ ಕಡಿವಾಣ ಹಾಕಲು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ಪದವಿ ಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆಯ ಡಿ.ಡಿ.ಪಿ.ಯು ಕೂಡಲೇ ಕಾರ್ಯತತ್ಪರರಾಗಬೇಕೆಂದು ಕರೆ ನೀಡಿದರು.
ಈ ಹಿಂದೆ ಮೇಲ್ತಿಳಿಸಿದ ಖಾಸಗಿ ಶಿಕ್ಷಣ ಸಂಸ್ಥೆಗಳ ನಾಮಫಲಕ ಆಂಗ್ಲ ಭಾಷೆಯಲ್ಲಿ ಅಳವಡಿಸಿ ಕನ್ನಡಿಗರಿಗೆ ಮುಜುಗರ ಉಂಟು ಮಾಡಿದ್ದರು. ಅದರ ವಿರೂದ್ಧ ಕರವೆ ಸಂಘಟನೆ ಅವನ್ನು ತೆರವುಗೊಳಿಸಲು ಮುಂದಾಗಿತ್ತು. ಇದನ್ನು ಸಹಿಸದ ಕೆಲವು ಕಾಣದ ಕೈಗಳು ನಮ್ಮ ವಿರೂದ್ಧ ಮೊಕದ್ದಮೆ ಹೂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಆದರೂ ಕನ್ನಡದ ನೆಲ, ಜಲ ಸಂರಕ್ಷಣೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.
ಅನಧಿಕೃತ ಕೋಚಿಂಗ್ ಸೆಂಟರ್‍ಗಳ ಹಾವಳಿ ಹತ್ತಿಕ್ಕಲು ಹಾಗೂ ದುಬಾರಿ ಶುಲ್ಕ ವಸುಲಿ ಮಾಡುತ್ತಿರುವ ಖಾಸಗಿ ಶಾಲಾ, ಕಾಲೇಜುಗಳ ವಿರೂದ್ಧ ಜೂನ್ 4ರೊಳಗೆ ಕ್ರಮ ವಹಿಸಬೇಕು. ಇಲ್ಲದಿದ್ದಲ್ಲಿ ಜೂನ್ 5ರಂದು ಸಾವಿರಾರು ಕರವೆÀ ಕಾರ್ಯಕರ್ತರು ಸೇರಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಅಲ್ಲಿಯ ಆಗುವ ಅನಾಹುತಗಳಿಗೆ ಸರ್ಕಾರವೇ ಜವಾಬ್ದಾರಿ ವಹಿಸಬೇಕಾದಿತು ಎಂದು ಮುಧೋಳ ಎಚ್ಚರಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಗೌಡ, ಭಾಲ್ಕಿ ತಾಲೂಕಾಧ್ಯಕ್ಷ ಬಂಡೆಪ್ಪ ಕರಬಸಣ್ಣ, ಬೀದರ್ ದಕ್ಷಿಣ ಕ್ಷೇತ್ರದ ಅಧ್ಯಕ್ಷ ವೀರಶೆಟ್ಟಿ ಗೌಸಪುರೆ, ಜಿಲ್ಲಾ ಉಪಾಧ್ಯಕ್ಷರಾದ ಸೋಮಶೇಖರ ಸಜ್ಜನ್, ಶಿವರುದ್ರ ತೀರ್ಥ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.