
ಕೋಲಾರ,ಫೆ,೯- ಜ್ಯೋತಿ ಎಜುಕೇಷನ್ ಟ್ರಸ್ಟ್ ವತಿಯಿಂದ ಭಾನುವಾರ ನಗರದ ಟ್ರಸ್ಟ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮುದಾಯದ ನಾಲ್ವರು ಸಾಧಕರಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹಾಗೂ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ‘ಜ್ಯೋತಿಶ್ರೀ’ಪ್ರಶಸ್ತಿ ಪ್ರದಾನ ಮಾಡಿದರು.
ಕಂದಾಯ ಇಲಾಖೆಯ ಸೀನಿಯರ್ ಅಸಿಸ್ಟೆಂಟ್ ರಿಜಿಸ್ಟ್ರಾರ್ ಸ್ವರ್ಣಲತಾ, ಚಿಕ್ಕಬಳ್ಳಾಪುರದ ಪ್ರೊ.ಬಿ.ಕೃಷ್ಣ, ವಾಲಿಬಾಲ್‌ನಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿದ ಕ್ರೀಡಾ ಪ್ರತಿಭೆ ಶಿಢ್ಲಘಟ್ಟದ ಪೂಜಾ ಪ್ರಸಾದ್, ಕೃಷಿ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿರುವ ಕೃಷಿ ಮಹಿಳೆ ಮಂಜುಳಾ ನಾಗನಾಳ ಮತ್ತು ಸ್ವಾವಲಂಬಿ ಉದ್ಯೋಗದೊಂದಿಗೆ ಸಮುದಾಯದ ಸಾಧಕರಾಗಿರುವ ಚಿಂತಾಮಣಿಯ ಧನುಷ್ ಅವರಿಗೆ ‘ಜ್ಯೋತಿಶ್ರೀ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ನಾಗನಾಳ ಮಂಜುನಾಥ್,ಉಪಾಧ್ಯಕ್ಷೆ ಭಾರತಿದೇವಿ, ಖಜಾಂಚಿ ಅಪ್ಪಯ್ಯಶೆಟ್ಟಿ, ಲೆಕ್ಕಪರಿಶೋಧಕ ಎಸ್.ಕೆ.ವೆಂಕಟರಾಂ, ಸಂಘಟನಾ ಕಾರ್ಯದರ್ಶಿ ಕೆ.ರವಿ, ಮಾಜಿ ಅಧ್ಯಕ್ಷ ರಾಧಾಕೃಷ್ಣ, ನಿರ್ದೇಶಕರಾದ ವಿ.ಆರ್.ನಾಗರಾಜ್, ವೀರಭದ್ರಪ್ಪ, ಅರುಣ್, ಅರ್ಜುನ್,ಆನಂದ್‌ಕುಮಾರ್, ರಾಮಚಂದ್ರಪ್ಪ, ಹಾರಂಗಿ ಚಲಪತಿ, ಶಿಕ್ಷಕ ಚಲಪತಿ, ವೆಂಕಟೇಶಪ್ಪ, ಶಿವಕುಮಾರ್, ಅರುಣ್, ಅರ್ಜುನ್, ನರಸಿಂಹಪ್ಪ, ಕೃಷ್ಣಮೂರ್ತಿ,ಕೆಂಪಣ್ಣ, ಡಾ.ಶ್ರೀನಿವಾಸ್, ಕನಕಪುರದ ಗಂಗಾಧರ್, ವ್ಯವಸ್ಥಾಪಕ ಸುನೀಲ್ ಮತ್ತಿತರರಿದ್ದರು.



























