
ಕೋಲಾರ,ಮೇ,೪- ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು ನಗರದಲ್ಲಿ ಸೈಕಲ್ ಸಂಚಾರ ಮೂಲಕ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಸಾರ್ವಜನಿಕರ ಆಹವಾಲುಗಳನ್ನು ಸ್ವೀಕರಿಸಿದರು. ಕೆಲವಡೆ ಸಾರ್ವಜನಿಕರ ಸಮಸ್ಯೆಗಳನ್ನು ಖುದ್ದಾಗಿ ವೀಕ್ಷಿಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲು ಗಡುವು ನೀಡಿದರು.
ಸುಡು ಬಿಸಲಿನಲ್ಲಿ ಭಾನುವಾರ ರಜೆ ದಿನವನ್ನು ಹಾಯಾಗಿ ಮನೆಯಲ್ಲಿ ಅಥವಾ ಕುಟುಂಬದವರೊಡನೆ ಪ್ರವಾಸ ಹೋಗಲು ಹಾತೊರೆಯುವ ಅಧಿಕಾರಿಗಳಿಗೆ ವಿಭಿನ್ನವಾಗಿ ಕೋಲಾರ ಜಿಲ್ಲಾಧಿಕಾರಿಗಳು ಭಾನುವಾರ ಬೆಳ್ಳಂಬೆಳಿಗ್ಗೆ ನಗರದ ಸಂಚಾರವನ್ನು ಸೈಕಲ್ ಮೂಲಕ ಕೈಗೊಂಡರು. ಜೂತೆಗೆ ನಗರಸಭೆ ಪೌರಾಯುಕ್ತ ವೆಂಕಟೇಶ್ ನಾಗನೂರು, ಜಿಲ್ಲಾ ನೋಡಲ್ ಅಧಿಕಾರಿಗಳಾದ ನವೀನ್ ಚಂದ್ರ ಮತ್ತು ನಗರಸಭೆ ಸಿಬ್ಬಂದಿಯೊಂದಿಗೆ ನಗರದಲ್ಲಿ ಸೈಕಲ್ ಯಾತ್ರೆ ನಡೆಸಿದರು.
ನಗರದ ವಿವಿಧಡೆ ರಸ್ತೆ ಬದಿಯಲ್ಲಿ ತ್ಯಾಜ್ಯದ ರಾಶಿಗಳು ಕಂಡ ಜಿಲ್ಲಾಧಿಕಾರಿಗಳು ಆರೋಗ್ಯ ನಿರೀಕ್ಷಕ ನವಾಜ್ ಮತ್ತು ಮಂಜುನಾಥ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದು ಕೊಂಡು ರಸ್ತೆ ಬದಿ ಗುಡ್ಡದಂತಿರುವ ಕಸವನ್ನು ಕೊಡಲೇ ತೆರವು ಮಾಡಿಸ ಬೇಕೆಂದು ತಾಕೀತು ಮಾಡಿದರು. ಸಾರ್ವಜಿನಿಕರಿಗೆ ಬ್ಲಾಕ್ ಪಾಯಿಂಟ್‌ಗಳಲ್ಲಿ ಕಸವನ್ನು ಸುರಿಯುವಂತ ಅರಿವು ಮೊಡಿಸಲಿಲ್ಲ ಏಕೆಂದು ಪ್ರಶ್ನಿಸಿ ಸಾರ್ವಜನಿಕರಿಗೆ ಅರಿವು ಮೊಡಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ನಗರದ ಕಾರಂಜಿ ಕಟ್ಟೆಯ ರಸ್ತೆಯ ಅಗಲೀಕರಣ ಕುರಿತು ಜಿಲ್ಲಾ ನಗರಾಭಿವೃದ್ದಿ ಯೋಜನಾ ನಿರ್ದೇಶಕ ಅಂಬಿಕಾ ಅವರಿಗೆ ಪ್ರಸ್ತಾವನೆಯನ್ನು ಸಿದ್ದಪಡೆಸಲು ಸೂಚಿಸಿದರು. ಬಸ್ ನಿಲ್ದಾಣದಿಂದ ವಾಹನಗಳು ನಿರ್ಗಮಿಸುವ ಸಂದರ್ಭದಲ್ಲಿ ವಾಹನಗಳ ದಟ್ಟನೆಯಿಂದ ಜಾಮ್ ಅಗುತ್ತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ರಸ್ತೆ ಒಂದು ಬದಿಯಲ್ಲಿ ಆಟೋಗಳ ನಿಲ್ದಾಣ ಇದೆ , ಬೀದಿ ಬದಿ ವ್ಯಾಪಾರಿಗಳು, ತಳ್ಳುವ ಗಾಡಿಗಳ ನಿಲುಗಡೆಯಿಂದ ಸುಗಮವಾದ ಸಂಚಾರಕ್ಕೆ ಅಡಚಣೆಯಾಗುತ್ತಿರುವುದು ಹಾಗಾಗಿ ರಸ್ತೆ ಅಗಲೀಕರಣ ಅತ್ಯವಶ್ಯಕವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಬಸ್ ನಿಲ್ದಾಣದಿಂದ ಕಾರಂಜಿ ಕಟ್ಟೆ ರಸ್ತೆ ಮೂಲಕ ಖಾದ್ರಿಪುರದವರೆಗೆ ಜೋಡಿ ರಸ್ತೆಯಾಗಿ ಕಾಮಗಾರಿಯನ್ನು ಕೈಗೆತ್ತಿ ಕೊಳ್ಳಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲು ಅಂಬಿಕಾ ಅವರಿಗೆ ಸೂಚಿಸಿದರು.
ಕೀಲುಕೋಟೆ ಅಂಜನೆಯ ಸ್ವಾಮಿ ದೇವಾಲಯದ ಕಾಂಪೌಂಡ್ ಗೋಡೆಯನ್ನು ಸ್ವಲ್ಪ ಒಳಗೆ ನಿರ್ಮಿಸಿಕೊಂಡು ರಸ್ತೆಯ ಅಗಲೀಕರಣಕ್ಕೆ ಬಳಿಸಿ ಕೊಳ್ಳುವುದು ಅನಿವಾರ್ಯವಾಗಿದೆ ಇದಕ್ಕೆ ಸಾರ್ವಜನಿಕರ ಹಾಗೂ ದೇವಾಲಯ ಸಮಿತಿಯನ್ನು ವಿಶ್ವಾಸಕ್ಕೆ ಪಡೆದು ಕೊಳ್ಳಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಲಹೆ ನೀಡಿದರು.
ಕ್ಲಾಕ್ ಟವರ್ ಬಳಿ ತೆರೆದ ರಸ್ತೆಯೇ ಮಾಂಸದ ಅಂಗಡಿಗಳು ಇದ್ದು ಮಾಂಸದ ಗುಡ್ಡೆಗಳು ಇರುವುದು ಮಾಂಸವನ್ನು ನೇತು ಹಾಕಿರುವುದು ಕಂಡು ಜಿಲ್ಲಾಧಿಕಾರಿಗಳು ನಗರಸಭೆಯ ಆರೋಗ್ಯಾಧಿಕಾರಿಗಳ ವಿರುದ್ದ ಕಿಡಿ ಕಾರಿದರು. ರಸ್ತೆಯಲ್ಲಿ ಧೂಳು, ಕಸವು ಮಾಂಸದ ಮೇಲೆ ಬಿದ್ದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಟ ಪರಿಣಾಮ ಬೀರುವುದೆಂಬ ಕನಿಷ್ಟ ಪ್ರಜ್ಷೆಯು ಇಲ್ಲವೇನ್ರಿ ಇನ್ನೇನು ತಾನೇ ನೀವು ಕೆಲಸ ಮಾಡುತ್ತಿದ್ದೀರಿ ಎಂಬುವುದಕ್ಕೆ ಇವೆಲ್ಲಾ ನಿದರ್ಶವಾಗಿದೆ ಎಂದು ಆರೋಗ್ಯಾಧಿಕಾರಿಗೆ ಛೇ ಮಾರೇ ಹಾಕಿದರು.
ಸ್ವಚ್ಚತೆಯನ್ನು ಕಾಪಾಡುವ ದೆಸೆಯಲ್ಲಿ ಮಾಂಸಗಳನ್ನು ಗಾಜಿನ ಬಾಕ್ಸ್ ಒಳಗೆ ಇಟ್ಟು ವ್ಯಾಪಾರ ವಹಿವಾಟು ನಡೆಸಲು ಸಂಬಂಧ ಪಟ್ಟ ಅಂಗಡಿಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ, ಇವರೆಲ್ಲಾ ಪರವಾನಗಿ ಪಡೆದಿದ್ದಾರೆಯೇ ನಗರದಲ್ಲಿ ನಿಗಧಿತ ಕಸಾಯಿ ಖಾನೆ ಇರುವ ಕಡೆ ಮಾರಾಟ ಮಾಡಲು ಹಾಗೂ ತ್ಯಾಜ್ಯಗಳಿಂದ ವಾಯು ಮಾಲಿನ್ಯ ಉಂಟಾಗದಂತೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಗರ ಹೊರವಲಯದಲ್ಲಿ ವಿಲೇವಾರಿ ಮಾಡಲು ಕ್ರಮ ವಹಿಸಲು ಪೌರಾಯುಕ್ತರಿಗೆ ಸೂಚಿಸಿದರು.
ಕೋಲಾರಮ್ಮ ದೇವಾಲಯದ ರಸ್ತೆಯ ಎರಡು ಬದಿಗಳಿ ಅಳವಡಿಸಿರುವ ಸಾಂಸ್ಕೃತಿಕ ದೀಪಗಳನ್ನು ವೀಕ್ಷಿಸಿದ ನಂತರ ಪ್ರಭಾತ್ ಚಿತ್ರಮಂದಿರ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪರಕ್ಕೆ ಅನುವು ಮಾಡಿ ಕೊಡಲು ಶೆಡ್‌ಗಳನ್ನು ನಿರ್ಮಿಸಲು ಸ್ಥಳ ಪರಿಶೀಲನೆ ನಡೆಸಿದರು ಅಂತರಗಂಗೆ ರಸ್ತೆಯಲ್ಲಿ ನಗರಸಭೆಗೆ ಸೇರಿದ ೨೪ ವಾಣಿಜ್ಯ ಮಳಿಗೆಗಳ ಸಂಕೀರ್ಣದಲ್ಲಿ ಕೇವಲ ೧೦ ರಿಂದ ೧೨ ಅಂಗಡಿಗಳು ಮಾತ್ರ ಬಾಡಿಗೆ ನೀಡಲಾಗಿದೆ ಉಳಿದ ಅಂಗಡಿಗಳನ್ನು ದುರಸ್ಥಿ ಪಡೆಸಿ ಹರಾಜು ಹಾಕುವ ಮೂಲಕ ನಗರಸಭೆಗೆ ಅದಾಯವನ್ನು ಮಾಡಿ ಕೊಳ್ಳ ಬೇಕೆಂದು ಸೂಚಿಸಿದ ಜಿಲ್ಲಾಧಿಕಾರಿಗಳು ಇಷ್ಟು ವರ್ಷಗಳಿಂದ ಬಾಡಿಕೆ ನೀಡಲು ಕ್ರಮ ಕೈಗೊಳ್ಳದೆ ಲಕ್ಷಾಂತರ ರೂ ನಷ್ಟಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ದ ಕೆಂಡಕಾರಿದರು.
























