ದಾವಣಗೆರೆ ವಿವಿ ಘಟಿಕೋತ್ಸವ: ೪೫ ವಿದ್ಯಾರ್ಥಿಗಳಿಗೆ ಚಿನ್ನ

ದಾವಣಗೆರೆ, ಜ. ೩೦- ದಾವಣಗೆರೆ ವಿಶ್ವವಿದ್ಯಾನಿಲಯದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಒಟ್ಟು ೧೨,೭೦೬ ವಿದ್ಯಾರ್ಥಿಗಳಿಗೆ ಶುಕ್ರವಾರ ನಡೆದ ಹದಿಮೂರನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಥಾವರ್‌ಚಂದ್ ಗೆಹಲೋತ್ ಪದವಿ ಪ್ರದಾನ ಮಾಡಿದರು.

ಇದೇ ಸಮಾರಂಭದಲ್ಲಿ ೪೫ ವಿದ್ಯಾರ್ಥಿಗಳು ೮೭ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರೆ, ೭೦ ಸಂಶೋಧನಾರ್ಥಿಗಳು ಪಿಎಚ್.ಡಿ. ಪದವಿಯನ್ನು ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರಿಂದ ಸ್ವೀಕರಿಸಿದರು.

ವಿವಿಧ ಸ್ನಾತಕ ಪದವಿಗಳಲ್ಲಿ ೬೪೦೧ ಮಹಿಳಾ ಹಾಗೂ ೪೨೮೩ ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು ೧೦೬೮೪ ವಿದ್ಯಾರ್ಥಿಗಳು ಸ್ನಾತಕ ಪದವಿಗೆ ಭಾಜನರಾದರು. ಇನ್ನು ೧೧೯೧ ಮಹಿಳಾ ಹಾಗೂ ೮೩೧ ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು ೨೦೨೨ ವಿದ್ಯಾರ್ಥಿಗಳು ವಿವಿಧ ಸ್ನಾತಕೋತ್ತರ ಪದವಿ ಸ್ವೀಕರಿಸಿದರು.

ಒಟ್ಟು ಏಳು ಪದಕಗಳನ್ನು ಮುಡಿಗೇರಿಸಿಕೊಂಡ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ನಯನ ಎನ್.ಬಿ. ಚಿನ್ನದ ಹುಡುಗಿ ಮನ್ನಣೆ ಪಡೆದರು. ಸ್ನಾತಕೋತ್ತರ ಪದವಿಯಲ್ಲಿ ಎಂಬಿಎ ವಿಭಾಗದ ದೀಪಾ ಆರ್ ನಾಲ್ಕು ಸ್ವರ್ಣ ಪದಕಗಳನ್ನು ಪಡೆದರು. ಗಣಿತಶಾಸ್ತ್ರ ವಿಭಾಗದ ಕವನ ಪಿ.ಎಂ, ಜೀವರಸಾಯನಶಾಸ್ತ್ರ ವಿಭಾಗದ ರುಚಿತಾ ಡಿ, ಭೌತವಿಜ್ಞಾನ ವಿಭಾಗ ಪುಟ್ಟರಾಜ ಎಂ.ಆರ್, ಪ್ರಾಣಿಶಾಸ್ತ್ರ ವಿಭಾಗ ಪುಷ್ಪಾ ಜೆ, ಇಂಗ್ಲಿಷ್ ವಿಭಾಗದ ವಿಜಯಲಕ್ಷ್ಮಿ ಬಿ.ಎಂ, ಮತ್ತು ಕನ್ನಡ ವಿಭಾಗದ ಅನುಷಾ ಎಂ.ಎ. ಅವರು ತಲಾ ಮೂರು ಚಿನ್ನಗಳನ್ನು ಹಂಚಿಕೊಂಡರು.

ಸ್ನಾತಕ ಕಲಾ ಪದವಿ(ಬಿಎ)ಯಲ್ಲಿ ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಪ್ರಿಯಾಂಕ ಡಿ.ಆರ್., ವಾಣಿಜ್ಯ (ಬಿ.ಕಾಂ) ಪದವಿಯಲ್ಲಿ ದಾವಣಗೆರೆ ಎಜಿಬಿ ಪ್ರಥಮ ದರ್ಜೆ ಕಾಲೇಜಿನ ಕೀರ್ತನಾ ಎಸ್ ಮತ್ತು ಶಿಕ್ಷಣ (ಬಿಇಡಿ) ಪದವಿಯಲ್ಲಿ ದಾವಣಗೆರೆಯ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಕಾಲೇಜಿನ ಹಜ್ಮಾ ಜೆ. ಅವರು ತಲಾ ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದಲ್ಲಿ ಎಸ್‌ಬಿಸಿ ಪ್ರಥಮ ದರ್ಜೆ ಕಾಲೇಜಿನ ಕೋನೇನ್ ತಬಸುಮ್, ಪತ್ರಿಕೋದ್ಯಮ ವಿಭಾಗದ ಚಂದನ ವಿ.ಎಂ, ಇತಿಹಾಸ ಮತ್ತು ಪ್ರಾಚ್ಯಶಾಸ್ತ, ವಿಭಾಗದಲ್ಲಿ ಪ್ರದೀಪಕುಮಾರ ಬಿ, ಸಸ್ಯಶಾಸ್ತ, ವಿಭಾಗದ ಪ್ರಿಯಾ ಎಂ, ಎಂಪಿಇಡಿಯಲ್ಲಿ ಗಗನ ಎ.ಎಂ, ರಸಾಯನಶಾಸ್ತ್ರ ವಿಭಾಗದಲ್ಲಿ ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಚೌಡೇಶ್ವರಿ ಟಿ, ಗಣಕ ವಿಜ್ಞಾನ ವಿಭಾಗದ ಸುಮತಿ ಎಚ್.ಪಿ, ಆಹಾರ ತಂತ್ರಜ್ಞಾನ ವಿಭಾಗದ ನಿತೀಶ್ ಕೆ.ಗೌಡ, ಜೈವಿಕ ತಂತ್ರಜ್ಞಾನ ವಿಭಾಗದ ಸತ್ಯಮೂರ್ತಿ ಎಸ್., ಸೂಕ್ಷ್ಮ ಜೀವಿ ಶಾಸ್ತ್ರ,ವಿಭಾಗದ ಗಾಯತ್ರಿ ದೀಪಿಕಾ ಬಿ ಅವರು ತಲಾ ಎರಡು ಬಂಗಾರದ ಪದಕಗಳನ್ನು ತಮ್ಮದಾಗಿಸಿಕೊಂಡರು.

ಅರ್ಥಶಾಸ್ತ್ರ ವಿಭಾಗದಲ್ಲಿ ಶಿವಗಂಗೋತ್ರಿ ಆವರಣದ ಕಾವ್ಯಾ ಆರ್, ಕನ್ನಡ ವಿಭಾಗದಲ್ಲಿ ಚಿತ್ರದುರ್ಗ ಜಿ.ಆರ್.ಹಳ್ಳಿ ಸ್ನಾತಕೋತ್ತರ ಕೇಂದ್ರದ ಬೋರಯ್ಯ ಸಿ.ಸಿ, ರಾಜ್ಯಶಾಸ್ತ್ರ ವಿಭಾಗದ ಸಿಂಧು ಎಚ್ ಮತ್ತು ಅಮೂಲ್ಯ ಜಿ.ಎಂ., ಸಮಾಜಶಾಸ್ತ್ರ ವಿಭಾಗದಲ್ಲಿ ಶುಭಾ ಪಿ.ಒ, ಉರ್ದು ವಿಭಾಗದಲ್ಲಿ ಶುಬ್ನಮ್ ಬಳಿಗಾರ, ಎಂಎಸ್‌ಡಬ್ಲು?ಯ ವಿಭಾಗದಲ್ಲಿ ಚಿಕ್ಕಮ್ಮ ಎಂ., ಎಂ.ಕಾಂನಲ್ಲಿ ತೇಜರಾಜ ಎಸ್.ಎ, ಎಂಬಿಎ ವಿಭಾಗದಲ್ಲಿ ಪಾವನಿ ಎಸ್, ಪಲ್ಲವಿ ಕೆ.ಎಸ್, ಎಂಇಡಿಯಲ್ಲಿ ಸಮ್ರಿನ್ ಎಂ., ಜೀವರಸಾಯನಶಾಸ್ತ್ರ ವಿಭಾಗದ ನಂದಿತಾ ಎನ್., ಜೈವಿಕ ತಂತ್ರಜ್ಞಾನ ವಿಭಾಗದ ಧನರಾಜ್ ಆರ್.ಕೆ, ಅಪರಾಧಶಾಸ್ತ್ರ ವಿಭಾಗದ ಐಶ್ವರ್ಯ ಒ.ಎಸ್, ಮತ್ತು ಯೋಗ ವಿಜ್ಞಾನ ವಿಭಾಗದಲ್ಲಿ ಬಾಳಾಸಾಹೇಬ ಸುರಪುರ ಅವರು ಒಂದೊಂದು ಚಿನ್ನದ ಪದಕವನ್ನು ಹಂಚಿಕೊಂಡರು.

ದೃಶ್ಯಕಲಾ ಮಹಾವಿದ್ಯಾಲಯದ ಐಶ್ವರ್ಯ ಎಲಿಗಾರ, ಬಿಸಿಎ ಪದವಿಯಲ್ಲಿ ಇಂಟರ್‌ಫೇಸ್ ಕಂಪ್ಯೂಟರ್ ಅಪ್ಲಿಕೇಶನ್ ಕಾಲೇಜಿನ ಪಿ.ವೆಂಕಟದುರ್ಗಾ ಪ್ರಸಾದ, ಬಿಎಸ್‌ಸಿಯಲ್ಲಿ ಎ.ವಿ.ಕಮಲಮ್ಮ ಕಾಲೇಜಿನ ಹಬೀಬಾ ಮಿಸ್ಬಾ ಅವರು ತಲಾ ಎರಡು ಚಿನ್ನ ಗಳಿಸಿದ್ದಾರೆ. ಬಿಪಿಇಡಿಯಲ್ಲಿ ಮಲ್ಲಾಡಿಹಳ್ಳಿಯ ಶತಮಾನೋತ್ಸವ ದೈಹಿಕ ಶಿಕ್ಷಣ ಕಾಲೇಜಿನ ನಾಗವೇಣಿ ಬಿ., ಬಿಬಿಎನಲ್ಲಿ ಆರ್‌ಜಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ದಿಶಾ ಜೈನ್, ಗಣಿತಶಾಸ್ತ್ರದಲ್ಲಿ ಅತಿಹೆಚ್ಚು ಅಂಕ ಗಳಿಸಿದ ಡಿಆರ್‌ಎಂ ಕಾಲೇಜಿನ ಸುಶ್ಮಿತಾ ರಾವ್ ಹಾಗೂ ದೃಶ್ಯ ಕಲಾ ಕಾಲೇಜಿನ ನವ್ಯ ಎ.ಆರ್. ತಲಾ ಒಂದು ಚಿನ್ನದ ಪದಕವನ್ನು ಪಡೆದಿದ್ದಾರೆ.

ಘಟಿಕೋತ್ಸವ ಸಮಾರಂಭದಲ್ಲಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಎಸ್.ಬಿ.ಗಂಟಿ, ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ.ರಮೇಶ್, ಹಣಕಾಸು ಅಧಿಕಾರಿ ವಂದನಾ, ವಿವಿಧ ನಿಕಾಯಗಳ ಡೀನರಾದ ಪ್ರೊ.ಕೆ.ವೆಂಕಟೇಶ, ಪ್ರೊ.ಎಂ.ಯು.ಲೋಕೇಶ, ಪ್ರೊ.ಗೋವಿಂದಪ್ಪ, ಪ್ರೊ.ಶ್ರೀನಿವಾಸ, ಸಿಂಡಿಕೇಟ್ ಮತ್ತು ಅಕಾಡೆಮಿಕ ಕೌನ್ಸಿಲ್ ಸದಸ್ಯರು ಉಪಸ್ಥಿತರಿದ್ದರು.