
ಕಲಬುರಗಿ,ಮೇ.26-ತಾನು ಪ್ರೀತಿಸಿದ ಹುಡುಗನ ಜೊತೆ ಮದುವೆ ಮಾಡಿಕೊಡುತ್ತಿಲ್ಲ ಎಂದು ಕೋಪಗೊಂಡ ಮಗಳು ತಾಯಿಗೆ ಚಪಾತಿ ಮಾಡುವ ಲಟ್ಟಣಿಗೆಯಿಂದ ಹೊಡೆ ಗಾಯಗೊಳಿಸಿರುವ ಇಲ್ಲಿನ ಸಾಯಿ ನಗರದಲ್ಲಿ ನಡೆದಿದೆ.
ಈ ಸಂಬಂಧ ಲಲಿತಾ ಭೀಮಶ್ಯಾ ಬೋತಗಿ (50) ಎಂಬುವರೆ ಮಗಳು ಸ್ವಾತಿ ವಿರುದ್ಧ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಸ್ವಾತಿ ಎಂ.ಟೆಕ್ ಮುಗಿಸಿಕೊಂಡು ಜಾಬ್ ಮಾಡಬೇಕೆಂದು ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದು, ಈ ವೇಳೆ ಡಾ.ನಿತಿನ್ ಹಾಸನ್ ಜೊತೆ ಪ್ರೀತಿಯಾಗಿ ಮದುವೆಯಾಗಲು ನಿರ್ಧರಿಸಿದ್ದಾರೆ. ಈ ವಿಷಯವನ್ನು ಸ್ವಾತಿ ಮನೆಯಲ್ಲಿ ತಿಳಿಸಿದ್ದು, ಇದಕ್ಕೆ ಮನೆಯವರು ಸಹ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಮಾತುಕತೆ ಆಡಲು ಡಾ.ನಿತಿನ್ ಹಾಸನ್ ಅವರನ್ನು ಮನೆಗೆ ಬನ್ನಿ ಅಂತ ಕರೆದರೂ ಅವರು ಇಂದು-ನಾಳೆ ಎನ್ನುತ್ತ ಮುಂದೂಡುತ್ತ ಹೋಗಿದ್ದಾರೆ. ಇದರಿಂದ ಬೇಜಾರಾದ ಸ್ವಾತಿ ಮದುವೆ ವಿಷಯದಲ್ಲಿ ಆಸಕ್ತಿ ತೋರುತ್ತಿಲ್ಲ. ಹುಡುಗನ ಮನೆಗೆ ಹೋಗುತ್ತಿಲ್ಲ ಎಂದು ಕೋಪಗೊಂಡು ತಾಯಿ ಲಲಿತಾ ಅವರಿಗೆ ಚಪಾತಿ ಮಾಡುವ ಲಟ್ಟಣಿಗೆಯಿಂದ ತಲೆ, ಎದೆ ಮತ್ತು ಬೆನ್ನಿನ ಮೇಲೆ ಹೊಡೆದು ಗಾಯಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.