
ಕಲಬುರಗಿ ;ಮಾ.20: ಶ್ರೀದತ್ತು ಅಗರವಾಲ್ ಹಾಗೂ ಶ್ರೀಮತಿ ಶೋಭಾರಾಣಿ ಡಿ.ಅಗರವಾಲ್ ಅವರಿಗೆ ವ್ಯಾಪಾರಿ ಎಜ್ಜುಕೇಷನ್ ಫೌಂಡೇಷನ್ ಹೈದ್ರಾಬಾದ ಇವರ ವತಿಯಿಂದ ಶಿಕ್ಷಣ ಸೇವಕ ಸನ್ಮಾನ ಪ್ರಶಸ್ತಿ ಪ್ರದಾನ
ದಿನಾಂಕ:15-3-2026ರಂದು ಹೈದ್ರಾಬಾದ ನಗರದಲ್ಲಿ ಶಿಕ್ಷಣ ಕ್ಷೇತರದಲ್ಲಿ ಉತ್ತಮ ಸೇವೆಸಲ್ಲಿಸಿದ
ಮಹನೀಯರನ್ನು ಹಾಗೂ ಶಿಕ್ಷಣ ಸಂಸ್ಥೆಯನ್ನು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಇದೇ ವೇಳೆ ಮಾತೋಶ್ರೀ ಅಂಬುಬಾಯಿ ಅಂಧ ಬಾಲಕಿಯರ ವಸತಿಯುತ ಶಾಲೆಯನ್ನು ಶಿಕ್ಷಣ ಸಂಸ್ಥೆ ವಿಭಾಗದಲ್ಲಿ ಆಯ್ಕೆ ಮಾಡಲಾಗಿತ್ತು. ಈ ಶಾಲೆಯನ್ನು ಸ್ಥಾಪಿಸಿ, ಬೆಳೆಸಿ ಉತ್ತಮ ಸಾಧನೆಯನ್ನು ಮಾಡಿ ಅಂಧ ಮಕ್ಕಳ ಶೈಕ್ಷಣಿಕ, ಕಲೆ, ಸಾಂಸ್ಕøತಿಕ & ಸಾಮಾಜಿಕ ಬೆಳವಣಿಗೆಗಾಗಿ ನಿರಂತರ ಶ್ರಮಿಸುತ್ತಿರುವ ಶಾಲೆಯ ಸಂಸ್ಥಾಪಕರಾದ ದತ್ತು ಅಗರವಾಲ್ ಹಾಗೂ ಹೈದ್ರಾಬಾದ ಕರ್ನಾಟಕ ಡೀಸೆಬಲ್ಡ್ ವೇಲ್ ಫೇರ್ ಸೋಸೈಟಿಯ ಅಧ್ಯಕ್ಷರಾದ ಶ್ರೀಮತಿ ಶೋಭಾರಾಣಿ ಡಿ.ಅಗರವಾಲ್ ಅವರನ್ನು ಶಿಕ್ಷಣ ಸೇವಕ ಸನ್ಮಾನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವ್ಯಾಪಾರಿ ಎಜ್ಜುಕೇಷನ್ ಫೌಂಡೇಷನ್ ಪದಾಧಿಕಾರಿಗಳು, ಸದಸ್ಯರು ಹಾಗೂ ಸಭೆಯಲ್ಲಿ
ಭಾಗವಹಿಸಿದ ಸಾರ್ವಜನಿಕರು ಅಗರವಾಲ್ ದಂಪತಿಗಳನ್ನು ಅಭಿನಂದಿಸಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸಂಗೀತಾ ಡಿ.ಠಾಕೂರ್, ಸಿಬ್ಬಂದಿಗಳಾದ ಶ್ರೀ ಪ್ರಸಾದ& ಶ್ರೀ ಪ್ರವೀಣ ಇವರು ಉಪಸ್ಥಿತರಿದ್ದರು.




















