Home ಜಿಲ್ಲೆ ಕಲಬುರಗಿ ದಸರಾ ಹಬ್ಬ ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಪವಿತ್ರ ಹಬ್ಬ: ಎಂ.ವೈ.ಪಾಟೀಲ

ದಸರಾ ಹಬ್ಬ ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಪವಿತ್ರ ಹಬ್ಬ: ಎಂ.ವೈ.ಪಾಟೀಲ

ಅಫಜಲಪುರ :ದಸರಾ ಹಬ್ಬವು ಕೇವಲ ಆಚರಣೆಯಷ್ಟೇ ಅಲ್ಲ,ಅದು ಸಮಾಜದಲ್ಲಿ ಪರಸ್ಪರ ಪ್ರೀತಿ,ವಿಶ್ವಾಸ ಹಾಗೂ ಗೌರವವನ್ನು ಮೂಡಿಸುವ ಪವಿತ್ರ ಹಬ್ಬವಾಗಿದೆ.ಹೀಗಾಗಿ ನಾವೆಲ್ಲರೂ ಒಂದಾಗಿ ಇಂತಹ ಪವಿತ್ರ ಹಬ್ಬವನ್ನು ಆಚರಿಸೋಣ ಎಂದು ಶಾಸಕ ಎಂ.ವೈ.ಪಾಟೀಲ್ ಅವರು ಹೇಳಿದರು.

ಪಟ್ಟಣದ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ನಡೆದ ಬನ್ನಿ ವಿನಿಮಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,”ದಸರಾ ಹಬ್ಬಕ್ಕೆ ತನ್ನದೇ ಆದ ಪೌರಾಣಿಕ ಹಿನ್ನೆಲೆಯಿದೆ.ಮಹಾಭಾರತದ ಅವಧಿಯಲ್ಲಿ ಪಾಂಡವರು ತಮ್ಮ ಸುದೀರ್ಘ ವನವಾಸವನ್ನು ಮುಗಿಸಿ, ಅಧರ್ಮದ ಹಾದಿಯಲ್ಲಿದ್ದ ಕೌರವರನ್ನು ಸೋಲಿಸಿ ವಿಜಯಶಾಲಿಯಾಗಿ ಬಂದ ದಿನವನ್ನೇ ನಾವು ಅತ್ಯಂತ ಶ್ರೇಷ್ಠ ಹಾಗೂ ವಿಜಯದ ದಿನವಾಗಿ ಆಚರಿಸುತ್ತಾ ಬಂದಿದ್ದೇವೆ,”ಪ್ರಸ್ತುತ ರಾಜ್ಯಾದ್ಯಂತ ಬರಗಾಲ ಆವರಿಸಿದೆ.

ನಮ್ಮ ಭಾಗದಲ್ಲೂ ಮುಂಗಾರು ಹಾಗೂ ಹಿಂಗಾರು ಎರಡೂ ಅವಧಿಯ ಬೆಳೆಗಳು ಮಳೆಯಿಲ್ಲದೆ ಸಂಪೂರ್ಣವಾಗಿ ಒಣಗಿ ಹೋಗಿವೆ.ಇದರಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.ಈ ಬಾರಿಯ ದಸರಾ ಹಬ್ಬದ ಸಂದರ್ಭದಲ್ಲಿ ನಾವೆಲ್ಲರೂ ಒಟ್ಟಾಗಿ,ಪ್ರಕೃತಿ ಮಾತೆ ಕರುಣೆ ತೋರಲಿ ಮತ್ತು ರೈತರ ಹಾಗೂ ಸಾರ್ವಜನಿಕರ ಈ ಸಂಕಷ್ಟಗಳನ್ನು ಶೀಘ್ರದಲ್ಲೇ ಬಗೆಹರಿಸಲಿ ಎಂದು ಭಗವಂತನಲ್ಲಿ ಶ್ರದ್ಧೆಯಿಂದ ಪ್ರಾರ್ಥಿಸೋಣ,” ಎಂದು ಜನತೆಗೆ ಕರೆ ನೀಡಿದರು.

ಸಾನಿಧ್ಯ ವಹಿಸಿ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ,ಮಹಾಭಾರತದ ಪ್ರಕಾರ,ಪಾಂಡವರು ತಮ್ಮ ಅಜ್ಞಾತವಾಸದ ಅವಧಿಯಲ್ಲಿ ತಮ್ಮ ದಿವ್ಯ ಆಯುಧಗಳನ್ನು ಬನ್ನಿ ಮರದಲ್ಲಿ (ಶಮಿ ವೃಕ್ಷ) ಇಟ್ಟಿದ್ದರು.ವಿಜಯದಶಮಿಯ ದಿನದಂದು ಆ ಆಯುಧಗಳನ್ನು ಮರಳಿ ಪಡೆದು,ಕೌರವರ ವಿರುದ್ಧ ವಿಜಯ ಸಾಧಿಸಿದರು. ಹಾಗಾಗಿ ಇದು ವಿಜಯದ ಸಂಕೇತವಾಗಿದೆ.ಇಂತಹ ಪವಿತ್ರ ಕಾರ್ಯಕ್ರಮ ಆಯೋಜನೆ ಮಾಡಿರುವ ಶಾಸಕ ಎಂ.ವೈ.ಪಾಟೀಲ್ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ. ಇಳಿ ವಯಸ್ಸಿನಲ್ಲೂ ಯುವಕರಂತೆ ತಾಲೂಕಿನ ತುಂಬಾ ಪ್ರಯಾಣಿಸಿ ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವ ಕೆಲಸ ಎಂ.ವೈ.ಪಾಟೀಲ್ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ.ಅಲ್ಲದೇ ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ಸಹ ಅತ್ಯಂತ ಸರಳ ಸ್ವಭಾವದಿಂದ ಜನಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕೆಕೆಆರ್ಟಿಸಿ ಅದ್ಯಕ್ಷ ಅರುಣಕುಮಾರ ಪಾಟೀಲ, ಕಾಂಗ್ರೆಸ್ ಮುಖಂಡರಾದ ಮತೀನ್ ಪಟೇಲ್, ರಾಜುಗೌಡ ಪಾಟೀಲ ಅವರಳ್ಳಿ, ಶಿವಶರಣಪ್ಪ ಹೀರಾಪೂರ, ಪ್ರಭುಗೌಡ ಪಾಟೀಲ ಅವರಳ್ಳಿ, ತಿಬಶೆಟ್ಟಿ, ಪ್ರಕಾಶ್ ಜಮಾದಾರ, ಸಿದ್ದಾರ್ಥ್ ಬಸರಗಿಡ, ಅಜಯ್ ಪಾಟೀಲ, ಸಿದ್ದು ಸಿರಸಗಿ,ಶರಣು ಕುಂಬಾರ, ಲಕ್ಷ್ಮೀಕಾಂತ ಸಿಂಗೆ ,ಎಸ್ ಎಸ್.ಪಾಟೀಲ, ಮಲ್ಲಿಕಾರ್ಜುನ ವಾಳಿ, ಅಣವೀರ ಮಠಪತಿ, ಸಚೀನ್ ಲಿಂಗಶೆಟ್ಟಿ, ಅಂಬರೀಶ್ ಬುರಲಿ, ಜವಳಿ, ಸುಧಾಕರ್ ಎಸ್.ಕೆ., ಸಾಹೀಲ್ ಚಿನಮಳ್ಳಿ, ದತ್ತು ಬಂಡಗಾರ,ವಿರೇಶ ಸಾಂಪೂರ, ಶರಣು ಈಶ್ವರಗೊಂಡ, ಉದಯ ಭಟ್ ಪೂಜಾರಿ, ನಾಗರಾಜ ಮೇಳಕುಂದಿ, ಶಿವು ಬೆಳಗುಂಪಿ, ಶರಣು ಪಡಶೆಟ್ಟಿ, ಇನ್ನಿತರರು ಉಪಸ್ಥಿತರಿದ್ದರು.