ಔರಾದ : ಅ.3:ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ವಿಜಯದಶಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಜರುಗಿತು.
ಬೆಳಿಗ್ಗೆ ಮನೆಯಲ್ಲಿ ಧಾರ್ಮಿಕ ಪರಂಪರೆಯ ಪೂಜೆಗೈದು ಮನೆ ಸದಸ್ಯರು ಹೊಸ ಉಡುಗೆ ತೊಟ್ಟು ಸ್ಥಳಿಯ ಮಿನಿ ತುಳಜಾಪುರ, ಬೆಟ್ಟದ ತಾಯಿ ಖಂಡಿಕೇರಿ, ಭವಾನಿ ಬಿಜಲಗಾಂವ, ದಾಬಕಾ ಗ್ರಾಮದ ಅಂಬಾ ಭವಾನಿ ದೇಗುಲಕ್ಕೆ ತೆರಳಿ ವಿಶೇಷ ಪೂಜೆಗೈದು ಬನ್ನಿ ಮರದ ಸಿಮೋಲಂಘನದಲ್ಲಿ ಪಾಲ್ಗೊಂಡರು.
ಪಟ್ಟಣದ ವಿವಿಧ ಗ್ರಾಮಗಳಲ್ಲಿ ಹಾಗೂ ಪಟ್ಟಣದ ದೇಶಮುಖ ಮನೆತನದವರು ಭಾಜಾ ಭಜಂತ್ರಿಯೊಂದಿಗೆ ಪ್ರಮುಖರು ಸೇರಿ ಮಾತೆಯ ದೇವಸ್ಥಾನಕ್ಕೆ ಹಾಗೂ ಬನ್ನಿ ಮರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಸಿಮೊಲಂಘನದಲ್ಲಿ ಭಾಗಿಯಾದರು.
ಎಲ್ಲೆಡೆ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಹಬ್ಬದ ಶುಭಾಶಯ ಕೋರುವ ಸ್ನೇಹಿತರು ಕಂಡು ಬಂದರು. ಮನೆಯಲ್ಲಿರುವ ಮಾತೆಯಾರು ಸಿಮೊಲಂಘನದಲ್ಲಿ ಪಾಲ್ಗೊಂಡಿದ್ದ ಮನೆಯ ಸದಸ್ಯರಿಗೆ ಆರತಿ ಬೆಳಗಿ ಮನೆಗೆ ಬರಮಾಡಿಕೊಂಡರು.
ತಾಲೂಕಿನ ತುಳಜಾಪುರ, ಭವಾನಿ ಬಿಜಲಗಾಂವ, ದಾಪಕಾ ಗ್ರಾಮದ ಗ್ರಾಮದ ಅಂಭಾ ಭವಾನಿ ಮಂದಿರದಲ್ಲಿ ತಾಯಿ ಭವಾನಿ ಮಾತೆಯ ವಿಶೇಷ ಪೂಜೆ ಸಲ್ಲಿಸಿ ದೇವಿಯ ಪಲ್ಲಕ್ಕಿ ಮೆರವಣಿಗೆ ನಡೆಯಿತು. ತಾಲ್ಲೂಕಿನಾದ್ಯಂತ ಹಬ್ಬದ ಸಂಭ್ರಮ ಮನೆ ಮಾಡಿತ್ತು.























