
ಕಾಳಗಿ : ಏ.8:ತಾಲೂಕಿನ ಗಂಜಗೇರಾ, ಹಲಚೇರಾ, ಪಸ್ತಾಪುರ ಹಾಗೂ ತೇಗಲತಿಪ್ಪಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ರಸ್ತೆ ಡಾಂಬರಿಕರಣ ಬೇಡಿಕೆಗಳನ್ನು ಈಡೇರಿಸುವಂತೆ ತಾಲೂಕು ದಲಿತ ಸೇನೆಯಿಂದ ವತಿಯಿಂದ ತಹಸೀಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ದಲಿತ ಸೇನೆಯ ಕಲಬುರಗಿ ಜಿಲ್ಲಾ ಅಧ್ಯಕ್ಷ ಮಂಜುನಾಥ ಬಂಡಾರಿ ಮಾತನಾಡಿ ಸರ್ಕಾರದಿಂದ ಬಂದ ವಿವಿಧ ಯೋಜನೆಯಲ್ಲಿ ಮನೆಗಳಿಗೆ ಟಿಪಿ ಪೆಂಡಿಂಗ್ ಎಫ್.ಟಿ.ಓ ಮಾಡದೇ ಹಣ ಬೇಡಿಕೆ ಇಟ್ಟು ಜನರಿಗೆ ತೊಂದರೆ ನೀಡುತ್ತಿರುವ ಲಕ್ಷ್ಮಣ್ ಚವ್ಹಾಣ ಅವರನ್ನು ಕೂಡಲೇ ಅಮಾನತ ಮಾಡಬೇಕು. ಗಂಜಗೇರಾ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ರಸ್ತೆ ಡಾಂಬರೀಕರಣ ಮಾಡಬೇಕು. ಸೂಗೂರು ಹಾಗೂ ಕುಡ್ದಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಸವಳು ಮಾಫಿಯಾ ಮಾಡುವರ ಮೇಲೆ ಕೂಡಲೇ ಕಡಿವಾಣ ಹಾಕಬೇಕು. ಪಸ್ತಾಪುರ ಮತ್ತು ತೇಗಲತಿಪ್ಪಿ ಗ್ರಾಮದಲ್ಲಿ ಜೆಜೆಎಮ್ ನೀರಿನ ಸಮಸ್ಯೆ ಪರಿಶೀಲಿಸಿ ನೀರು ಬರುವಂತೆ ಕ್ರಮ ತೆಗದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಲಬುರಗಿ ಜಿಲ್ಲಾ ದಲಿತ ಸೇನೆ ವಿಭಾಗಿ ಅಧ್ಯಕ್ಷ ಕಪಿಲ್ ವಾಲಿ, ವಿ.ಓ ಅಧ್ಯಕ್ಷ ಸುನಿಲ ಕಲಬುರ್ಗಿ, ದಲಿತ ಸೇನೆ ತಾಲೂಕು ಅಧ್ಯಕ್ಷ ಖತಲಪ್ಪ ಅಂಕನ್, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷ ಅನಸುಬಾಯಿ ಹಲಚೆರಾ , ಸಾಮಾಜಿಕ ಜಾಲತಾಣ ಅಧ್ಯಕ್ಷ ರಮೇಶ ಕುಡಹಳ್ಳಿ ಜೈಭೀಮ ತಾಡಪಳ್ಳಿ, ಅನಿಲ್ ಗಂಜಗಿರಾ, ಮಾರುತಿ ತೆಗಲತಿಪ್ಪಿ, ಹನುಮಂತ ಸಾಲಹಳ್ಳಿ , ಸಂತೋಷ ಹೊಸಳ್ಳಿ, ರಾಮಚಂದ್ರ ಹೊಸಳ್ಳಿ, ತುಕಾರಾಮ ಗಂಜಗಿರಾ,ಆಕಾಶ ಹೆಬ್ಬಾಳ, ಸುಧಾಕರ ಪಸ್ತಾಪುರ, ಬಾಬುರಾವ, ಶಿವಾನಂದ ಚಿಂತಕುಂಟ, ಚಂದ್ರಕಾಂತ ಗಂಜಗಿರಾ, ಮಲ್ಲು, ದಶರಥ ನಾಗಪ್ಪ ಸೇರಿದಂತೆ ದಲಿತ ಸೇನೆ ಕಾರ್ಯಕರ್ತರು ಉಪಸ್ಥಿತರಿದ್ದರು.




















