ಜೇವರಗಿ,ಅ.೧೫: ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನಡೆಯುತ್ತಿದೆ ಎನ್ನಲಾದ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಮತ್ತು ಮಾನಸಿಕ ಕಿರುಕುಳದ ವಿರುದ್ಧ ಧ್ವನಿ ಎತ್ತಿ, ನ್ಯಾಯಕ್ಕಾಗಿ ಬೀದರ್ ನಿಂದ ಬೆಂಗಳೂರಿನವರೆಗೆ ಬರಿಗಾಲಿನಲ್ಲಿ ಪಾದಯಾತ್ರೆ ಮಾಡುತ್ತಿರುವ ಪ್ರಕಾಶ್ ಮಾಳಗೆ ಅವರ ಹೋರಾಟಕ್ಕೆ ಜೇವರಗಿ
ದಲಿತ ಸಂಘಟನೆಗಳ ಸಮನ್ವಯ ಸಮಿತಿ ಸಮಿತಿ ಸಂಪೂರ್ಣ ಬೆಂಬಲವನ್ನು ಸೂಚಿಸುತ್ತೇವೆ ಎಂದು ಅಂಬೇಡ್ಕರ್ ವಾದ ತಾಲೂಕು ಸಂಚಾಲಕ ಸಿದ್ದು ಕೆರೂರ ಅವರು ಹೇಳಿದ್ದಾರೆ.
ಪ್ರಕಾಶ್ ಅವರು ತಮ್ಮ ಫಲಕದಲ್ಲಿ ಉಲ್ಲೇಖಿಸಿರುವ ಅಧಿಕಾರಿಗಳು ತಮ್ಮ ಬೆಂಬಲಿಗ ಕೆಲವು ವ್ಯಕ್ತಿಗಳೊಂದಿಗೆ ಸೇರಿ, ಒಬ್ಬ ಸಾಮಾನ್ಯ ಪ್ರಜೆಗೆ ಅನ್ಯಾಯ, ಮಾನಸಿಕ ಕಿರುಕುಳ ನೀಡಿರುವುದು ಖಂಡನೀಯ.ಮುಖ್ಯಮAತ್ರಿಗಳು ಮಧ್ಯಪ್ರವೇಶಿಸಿ, ಬೆಂಗಳೂರಿಗೆ ತಲುಪಿದ ಕೂಡಲೇ ಅವರಿಗೆ ನ್ಯಾಯ ಕೊಡಿಸುವ ಭರವಸೆ ನೀಡಬೇಕು.
ಈ ವಿಷಯದಲ್ಲಿ ಸರ್ಕಾರ ಮೌನವಾಗಿದ್ದರೆಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಸಿದ್ರಾಮ ಕಟ್ಟಿ, ರವಿ ಕುಳಗೇರಿ, ಗಿರಿಮಲ್ಲಪ್ಪ, ದೇವೇಂದ್ರ ಮುದವಾಳ, ರಾಜು ಸರಕಾರ,ದೊಡ್ಡಪ್ಪ ಮಲ್ಲಾ ,ಮಹೇಶ ಕೋಕಿಲೆ,ಮರೆಪ್ಪ ಬೇಗಾರ,ನಾಗರಾಜ ಕೊಂಬಿನ, ಜಂಪಣ್ಣ ಜಟ್ನಾಕರ್, ಇನ್ನು ಅನೇಕರು ಉಪ
Àಸ್ಥಿತರಿದ್ದರು.


















