
ಕೆಜಿಎಫ್:ಮೇ:೨೪: ಪಶ್ಚಿಮ ಏಷ್ಯಾ ಬಿಕ್ಕಟ್ಟು ಮತ್ತು ಜಾಗತಿಕ ಇಂಧನ ಬೆಲೆ ಏರಿಳಿದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಅವರು ದೇಶದ ನಾಗರೀಕರಿಗೆ ಇಂಧನ ಉಳಿತಾಯ ಮತ್ತು ಮಿತವ್ಯಯದ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದ್ದು ನಮ್ಮ ಕ್ಷೇತ್ರದಲ್ಲೂ ಸಹ ನಾಗರೀಕರು ವಾರದಲ್ಲಿ ಓಮ್ಮೆಯಾದರು ತಮ್ಮ ದ್ವಿಚಕ್ರ ಕಾರುಗಳ ಬಳಕೆಯನ್ನು ಮಾಡದೆ ಸೈಕಲ್‌ಗಳನ್ನು ಬಳಸುವ ಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸುವಂತೆ ಮಾಜಿ ಶಾಸಕ ವೈ.ಸಂಪಂಗಿ ಮನವಿ ಮಾಡಿದರು .
ಎಬಿವಿಪಿ ಕೆಜಿಎಫ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ನಗರದ ಗಾಂಧಿ ವೃತ್ತದಲ್ಲಿ (ಸೈಕಲ್ ರ್‍ಯಾಲಿ)ಜಾಗೃತಿ ಅಭಿಯಾನದಲ್ಲಿ ಚಾಲನೆ ನೀಡಿ ಮಾಜಿ ಶಾಸಕ ಸಂಪಂಗಿ ಮಾತನಾಡಿ ಸಂಪನ್ಮೂಲಗಳ ಉಳಿತಾಯಕ್ಕಾಗಿ ಪ್ರಧಾನ ಮೋದಿ ತಮ್ಮ ಅಧಿಕೃತ ಬೆಂಗಾವಲು ಪಡೆಯ ವಾಹನಗ ಸಂಖ್ಯೆಯನ್ನು ಸುಮಾರು ಶೇ:೫೦ ರಷ್ಟು ಕಡಿತಗೊಳಿಸಿದ್ದಾರೆ ಆದ್ದರಿಂದ ನಮ್ಮ ಕ್ಷೇತ್ರದಲ್ಲೂ ಸಾರ್ವಜನಿಕರು ಮಿತವ್ಯಯವಾಗಿ ಇಂಧನವನ್ನು ಬಳಕೆ ಮಾಡುವ ಮೂಲಕ ದೇಶದ ಅಭಿವೃದ್ದಿಗೆ ಸಹಕರಿಸಬೇಕು ಎಂದು ಹೇಳಿದರು.
ರಾಜ್ಯ ಎಬಿವಿಪಿ ಕಾರ್ಯಕಾರಣಿ ಸದಸ್ಯ ಅಜಯ್ ಮಾತನಾಡಿ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರಮೋದಿ ರವರು ದೇಶದ ಪರಿಸ್ಥಿತಿಯನ್ನು ದೇಶದ ಜನರ ಮುಂದೆ ತೆರೆದಿಟ್ಟಿದ್ದು ಯುವಕರಾದ ನಾವುಗಳು ಸಹ ಅವರೊಂದಿಗೆ ಕೈಜೊಡಿಸಬೇಕು ಈಹಿನ್ನಲ್ಲೆಯಲ್ಲಿ ಯುವಕರು ತಮ್ಮ ದ್ವಿಚಕ್ರ ಕಾರುಗಳ ಚಾಲನೆ ಮಾಡದೆ ಸರ್ಕಾರಿ ಬಸ್‌ಗಳಲ್ಲಿ ಸಂಚರಿಸುವ ಮೂಲಕ ಪ್ರಧಾನ ಮಂತ್ರಿಗಳ ಕರೆಗೆ ಸ್ಪಂಧಿಸಬೇಕು ಎಂದು ಹೇಳಿದರು.
ಗಾಂಧಿ ವೃತ್ತದಲ್ಲಿ ಚಾಲನೆ ನೀಡಲಾದ ಸೈಕಲ್ ರ್‍ಯಾಲಿ ಯು ನಗರದ ಗೀತಾ ರಸ್ತೆ ಸ್ವರ್ಣ ಕುಪ್ಪ ಪಿಚರ್ಡ್ ರಸ್ತೆ ಮೂಲಕ ಗಾಂಧಿ ವೃತ್ತದಲ್ಲಿ ಮುಕ್ತಯವಾಯಿತ್ತು ನೂರಾರು ಎಬಿವಿಪಿ ಕಾರ್ಯಕರ್ತರು ಭಾಗವಹಿಸಿದ್ದರು. ನಗರ ಬಿಜೆಪಿ ಅಧ್ಯಕ್ಷ ಸುರೇಶ್‌ಕುಮಾರ್, ಕೋಲಾರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಶ್‌ನಾರಾಯಣಕುಟ್ಟಿ,ಬಿಜೆಪಿ ಬಿಎಲ್‌ಎ ಬಾಬಿ ಸುರೇಶ್ , ಮಾಜಿ ನಗರಸಭೆ ಸದಸ್ಯ ವಿಜಿಕುಮಾರ್, ಪಾಂಡ್ಯನ್,ರವಿಕುಮಾರ್,ಅಭಿಲಾಷ,ವಕೀಲರ ಸಂಘದ ಅಧ್ಯಕ್ಷ ರಾಜಗೋಪಾಲ್ ಗೌಡ, ಬೆಸ್ಕಾಂ ನಾಗರಾಜ್ ಹಾಗೂ ಇತರರು ಹಾಜರಿದ್ದರು.























