
ಕಲಬುರಗಿ,ನ.20: ಇತ್ತೀಚೆಗೆ ಆನ್ ಲೈನ್ ಮೂಲಕ ಹಣ ಕಳೆದುಕೊಳ್ಳುವವರ ಸಂಖ್ಯೆ ದಿನಂಪ್ರತಿ ಹೆಚ್ಚಾಗುತ್ತಿದ್ದು, ಸೈಬರ್ ಕ್ರೈಂ ಸಂಘಟಿತ ಅಪರಾಧವಾಗುತ್ತಿದೆ ಎಂದು ಪೆÇಲೀಸ್ ಇಲಾಖೆಯ ತರಬೇತಿ ವಿಭಾಗದ ಹೆಚ್ಚುವರಿ ಪೆÇಲೀಸ್ ಮಹಾನಿರ್ದೇಶಕ ಆಲೋಕ್ ಕುಮಾರ್ ಹೇಳಿದರು.
ಬುಧವಾರ ಕಲಬುರಗಿ ನಾಗನಹಳ್ಳಿಯ ಪೆÇಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೈಬರ್ ಕ್ರೈಂ ನಮ್ಮ ರಾಜ್ಯ, ದೇಶಕ್ಕೆ ಸೀಮಿತವಾಗಿಲ್ಲ. ಹೊರದೇಶಕ್ಕೂ ವ್ಯಾಪಿಸಿದೆ. ಇದನ್ನು ಬೇಧಿಸುವ ಸವಾಲು ನಮ್ಮುಂದಿದೆ ಎಂದರು.
ಇತ್ತೇಚೆಗೆ ಬೆಂಗಳೂರಿನ ಇಂದಿರಾ ನಗರದ ನಿವಾಸಿ 32.81 ಕೋಟಿ ರೂ. ಕಳೆದುಕೊಂಡಿದ್ದಾರೆ. ಇಂತಹದೆ ಪ್ರಕರಣದ ಬೆನ್ನು ಹತ್ತಿದಾಗ ಬೆಳಗಾವಿಯಲ್ಲಿ 32 ಜನಸಿಕ್ಕಿ ಬಿದ್ದಿದ್ದಾರ
ಕರ್ನಾಟಕ ಪೆÇಲೀಸರಿಗೆ ಸೈಬರ್ ಕ್ರೈಂ ಸೇರಿದಂತೆ ಪರಿಸ್ಥಿತಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಎಲ್ಲಾ ಹಂತದ ತರಬೇತಿ ನೀಡಲಾಗುತ್ತಿದೆ. ಆರ್ಟಿಫಿಶಿಯಲ್ ಇಂಟಿಲಿಜೆನ್ಸ್ ಸದ್ಬಳಕೆ ಮಾಡುವ ನಿಟ್ಟಿನಲ್ಲಿಯೂ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಒಟ್ಟಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮತ್ತು ಸಮಾಜ ಘಾತುಕ ಶಕ್ತಿಗಳನ್ನು ನಿಯಂತ್ರಿಸಲು ಸಿಬ್ಬಂದಿಗಳಿಗೆ ಪರಿಪೂರ್ಣವಾದ ತರಬೇತಿ ನೀಡಲಾಗುವುದು ಎಂದರು.
ನಾಗಹನಹಳ್ಳಿ ಪಿ.ಟಿ.ಸಿ. ಪ್ರಾಂಶುಪಾಲ ಮತ್ತು ಎಸ್.ಪಿ. ಡೆಕ್ಕಾ ಕಿಶೋರ ಬಾಬು ಇದ್ದರು























