ಸೈಬರ್ ವಂಚನೆ:31.64 ಲಕ್ಷ ರೂ ಕಳೆದುಕೊಂಡ ಔಷಧಿ ವ್ಯಾಪಾರಿ

ಕಲಬುರಗಿ,ನ.6: ಹೆಚ್ಚಿನ ಹಣದ ಲಾಭ ಆಮಿಷವೊಡ್ಡಿದ ಸೈಬರ್ ವಂಚಕರು ಔಷಧಿ ವ್ಯಾಪಾರಿಗೆ 31.64 ಲಕ್ಷ ರೂ ವಂಚನೆ ಮಾಡಿದ ಘಟನೆ ನಗರದಲ್ಲಿ ಜರುಗಿದೆ.
ಶಿವಾಜಿ ನಗರದ ನಿವಾಸಿ ಶರಣಬಸಪ್ಪ ರಾಚಣ್ಣ ಮೈದರಗಿ ವಂಚನೆಗೊಳಗಾದ ವ್ಯಕ್ತಿ.
ನುವಾಮಾ ವೆಲ್ತ್ ಮ್ಯಾನೇಜಮೆಂಟ್ ಲಿಮಿಡೆಡ್ ಎಂಬ ನಕಲಿ ಶೇರ್ ಮಾರುಕಟ್ಟೆ ಕಂಪನಿಯ ಆಪ್ ಮತ್ತು ವಾಟ್ಸ್‍ಪ್ ಗುಂಪು ರಚಿಸಿದ 6 ಜನ ವಂಚಕರು ನಿಗದಿತ ಬ್ಯಾಂಕ್ ಖಾತೆಗೆ ಹಂತಹಂತವಾಗಿ ಹಣ ಜಮಾ ಮಾಡುವಂತೆ ಶರಣಬಸಪ್ಪ ಅವರಿಗೆ ನಂಬಿಸಿದ್ದರು.ನಂತರ ಲಾಭ ನೀಡದೇ ಠೇವಣಿ ಮಾಡಿದ ಹಣ ನೀಡದೇ ಸಂಪರ್ಕ ಕಡಿತಗೊಳಿಸಿದ್ದರು.
ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.