Home ಜಿಲ್ಲೆ ಕಲಬುರಗಿ ಕಸ್ಕೂಟ್ ನಿಯಂತ್ರಣ:ಗಾರAಪಳ್ಳಿಗೆ ಕೃಷಿ ವಿಜ್ಞಾನಿಗಳ ಭೇಟಿ

ಕಸ್ಕೂಟ್ ನಿಯಂತ್ರಣ:ಗಾರAಪಳ್ಳಿಗೆ ಕೃಷಿ ವಿಜ್ಞಾನಿಗಳ ಭೇಟಿ

ಚಿಂಚೋಳಿ,ಆ.೨೬: ತಾಲೂಕಿನ ಗಾರಂಪಳ್ಳಿ ಗ್ರಾಮದ ಕಸ್ಕೂಟ್ ಪ್ರಯೋಗಕ್ಕಾಗಿ ಪಡೆದ ರುಕ್ಮಿಣಿ ಮತ್ತು ವಾಯದಲ್ಲಿ ಅವರ ಜಮೀನಿಗೆ ಕೃಷಿ ವಿಜ್ಞಾನಿಗಳು ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ಕೊಟ್ಟು ಕಸ್ಕೂಟ್ ಪತ್ತೆಯಾಗಿರುವುದನ್ನು ಪರಿಶೀಲಿಸಿದರು
ಸಂಶೋಧನೆಗೆ ತುಂಬಾ ಅಗತ್ಯವಿತ್ತು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಪ್ರಾಜೆಕ್ಟ್ ಅನುಮೋದನೆ ಅವಕಾಶ ಕೊಡಬೇಕು ಅಂದಾಗ ಮಾತ್ರ ನಿಯಂತ್ರಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಲಬುರ್ಗಿ ಕೃಷಿ ವಿಜ್ಞಾನಿಗಳಾದ ಡಾ ಆನಂದ್ ರಾವ್ ಪೊಲೀಸ್ ಪಾಟೀಲ್, ಮತ್ತು ಡಾ ಪ್ರವೀಣ್ ಕುಮಾರ, ಹಾಗೂ ಬೀದರ ಕೃಷಿ ವಿಜ್ಞಾನಿಗಳಾದ ಡಾ ಧ್ಯಾನ್ ದೇವ ಬುಳ್ಳ, ಅವರ ತಂಡ ಗಾರಂಪಳ್ಳಿ ಗ್ರಾಮಕ್ಕೆ ಕೆಲ ರೈತರ ಹೊಲಕ್ಕೆ ಭೇಟಿ ಕೊಟ್ಟು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಗಂಗೋತ್ರಿ ಆಗ್ರೋ ಏಜೆನ್ಸಿಯವರ ಅಂಗಡಿಯಿAದ ಖರೀದಿಸಿರುವ ಬೀಜಗಳು ಕಳಪೆ ಬೀಜವನ್ನು ಕೊಟ್ಟು ಬೆಳೆ ಬರದ ರೀತಿಯಲ್ಲಿ ಆಗಿದೆ ಅದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೃಷಿ ಇಲಾಖೆಗೆ ದೂರು ಕೊಟ್ಟಾಗ ವಿಜ್ಞಾನಿಗಳು ಬಂದು ವೀಕ್ಷಣೆ ಮಾಡಿ ಪರಿಶೀಲಿಸಿದರು .
ಕಸ್ಬುಟ ಪ್ರಾಜೆಕ್ಟ್ ಅನುಮದನಿಗೆ ಅವಕಾಶ ಕೊಡಬೇಕು ಮತ್ತು ವರದಿ ಆಧಾರಿತವಾಗಿ ವಿಶೇಷ ಸೇಡಂ ಚಿತ್ತಾಪುರ ಚಿಂಚೋಳಿ ತಾಲೂಕಿಗೆ ಪ್ಯಾಕೇಜ್ ಘೋಷಿಸಬೇಕು
ಕೃಷಿ ಇಲಾಖೆ ಪ್ರಯೋಗಕ್ಕಾಗಿ ಪಡೆದ ಜಮೀನಿನಲ್ಲಿ ಕೂಡ ಕಸ್ಕೊಟ್ ನಿಯಂತ್ರಣಕ್ಕೆ ಬಾರದ ರೀತಿಯಲ್ಲಿ ವ್ಯಾಪಕವಾಗಿ ಹರಡುತ್ತಿದ್ದು ಮತ್ತು ರೈತನಿಗೆ ಕಳಪೆ ಮಟ್ಟದ ಬೀಜ ಕೊಟ್ಟಿರುವ ಅಂಗಡಿಯ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಗೋಪಾಲ ಎಂ.ಪಿ. ಹೇಳಿದರು ಈ ಸಂದರ್ಭದಲ್ಲಿ ಚಿಮ್ಮನಚೋಡ್ ಕೃಷಿ ವಲಯ ಅಧಿಕಾರಿಗಳಾದ ಅಭಿಲಾಷ್ ಸುಬೇದಾರ್, ಕೊಡ್ಲಿ ಕೃಷಿ ವಲಯ ಅಧಿಕಾರಿಗಳಾದ ಸರೋಜಾ ಪಾಟೀಲ, ಸುಮಾ ಪಾಟೀಲ್, ರೈತ ಮುಖಂಡ ಗೋಪಾಲ ಎಂ.ಪಿ, ರಜನಿಕಾಂತ್ ಬುಳ್ಳ, ಲಕ್ಷ್ಮಣ ಮುಸ್ತರಿ, ಗುಂಡಪ್ಪ ಜಾಡೂರು, ಇದ್ದರು