Home ಜಿಲ್ಲೆ ಕಲಬುರಗಿ ಶಿಕ್ಷಣದ ಜತೆಗೆ ಸಂಸ್ಕಾರ ಅಗತ್ಯ : ಬೊಮ್ಮನಹಳ್ಳಿ

ಶಿಕ್ಷಣದ ಜತೆಗೆ ಸಂಸ್ಕಾರ ಅಗತ್ಯ : ಬೊಮ್ಮನಹಳ್ಳಿ

ಜೇವರ್ಗಿ,ಫೆ.13: ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರವು ಅಗತ್ಯವಾಗಿದೆ. ನರೇಂದ್ರ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಗೆ ಶಿಕ್ಷಣ ಜತೆಗೆ ಸಂಸ್ಕಾರ ನೀಡಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬೊಮ್ಮನಹಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಪ್ರತಿಷ್ಠಿತ ನರೇಂದ್ರ ಶಿಕ್ಷಣ ಸಂಸ್ಥೆ ಅಡಿಯ ಶ್ರೀ ಮಹಾಲಕ್ಷ್ಮಿ ಪ್ರೌಢಶಾಲೆ, ನಿವೇದಿತ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸಿ ಕೆ ಮಾಲಿ ಪಾಟೀಲ್ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಮೇಳ ವಸ್ತು ಪ್ರದರ್ಶನ ಹಾಗೂ ನರೇಂದ್ರ ಶಿಕ್ಷಣ ಸಂಸ್ಥೆಯ 35ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ,
ಸ್ವಾಮಿ ವಿವೇಕಾನಂದರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು, ಕೇವಲ ಅಂಕ ಪಟ್ಟಿಯ ಶಿಕ್ಷಣವಲ್ಲದೆ ತಮ್ಮ ದಿನನಿತ್ಯ ಜೀವನದಲ್ಲಿ ಪಡೆದ ಶಿಕ್ಷಣ ಉಪಯೋಗ ಪಡಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಸಂಸ್ಥೆ ಮುಂದಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತಂದು ತಾಲೂಕಿಗೆ ಹೆಸರು ತರಬೇಕು ಎಂದು ಶುಭ ಹಾರೈಸಿದರು.

ಶ್ರೀ ನರೇಂದ್ರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಾನಂದ ಗಂಟಿಮಠ ಮಾತನಾಡಿ, ಮಕ್ಕಳಿಗೆ ಉತ್ತಮ, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನಮ್ಮ ಶಾಲೆ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಶಿಕ್ಷಕರು ಕೂಡ ಒಳ್ಳೆ ರೀತಿಯಿಂದ ಕಾರ್ಯನಿರ್ವಹಿಸಿ ಶಾಲೆಗೆ ಹೆಸರು ತರುವಂತ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿಯಾಗಿ ಪಾಲಕರು ಮತ್ತು ಮಕ್ಕಳು ಒಳ್ಳೆ ರೀತಿಯಿಂದ ಸಹಕಾರ ನೀಡಿದರೆ ಮುಂದಿನ ದಿನಗಳಲ್ಲಿ ತಾಲೂಕಿಗೆ ಉತ್ತಮ ಫಲಿತಾಂಶ ನೀಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಸೋಮಶೇಖರ್ ಪಾಟೀಲ ಗುಡೂರ, ವಿಶ್ವನಾಥ ಅರಳಿ, ಶರಣಬಸವ ಕಲ್ಲಾ, ಎಂ. ಬಿ.ಪಾಟೀಲ್, ಎಂ.ಕೆ. ಪಾಟೀಲ್, ವೆಂಕಟೇಶ್ ಕುಲಕರ್ಣಿ, ಉಮಕಾಂತ್ ಗೋಲಗೇರಿ, ರಾಜು ಅಳಲಗೇರಿ, ಸುನಿಲ್ ಕುಮಾರ ಕುಲಕರ್ಣಿ, ಜಯಶ್ರೀ, ಮಡಿವಾಳಪ್ಪ, ವಿಕ್ಟೋರಿಯಾ, ದೇವೇಂದ್ರಪ್ಪ, ಅಂಬರೀಶ್ ವಾಲಿ, ಸಿದ್ದಪ್ಪ ನಗನೂರ, ನಿರಂಜನ ಉಕನಾಳ, ಶಿವರಾಜ ಹಡಪದ, ಪ್ರಕಾಶ್ ಮಂಗಳೂರು ಸೇರಿದಂತೆ ಸಂಸ್ಥೆಯ ಶಿಕ್ಷಕರು ಹಾಗೂ ಪಾಲಕ ಪ್ರತಿನಿಧಿಗಳು, ವಿದ್ಯಾರ್ಥಿಗಳು ಇದ್ದರು.