Home ಜಿಲ್ಲೆ ತುಮಕೂರು ಬದುಕಿನಲ್ಲಿ ಸಂಸ್ಕೃತಿ, ಆಧ್ಯಾತ್ಮ ಮುಖ್ಯ

ಬದುಕಿನಲ್ಲಿ ಸಂಸ್ಕೃತಿ, ಆಧ್ಯಾತ್ಮ ಮುಖ್ಯ

ತುಮಕೂರು, ಅ. ೨೬- ಜೀವನದಲ್ಲಿ ಕಲೆ, ಸಂಸ್ಕೃತಿ ಮತ್ತು ಆಧ್ಯಾತ್ಮ ಬಹಳ ಮುಖ್ಯ ಎಂದು ಪಾವಗಡದ ರಾಮಕೃಷ್ಣ ಆಶ್ರಮದ ಸ್ವಾಮಿ ಜಪಾನಂದ ಮಹಾರಾಜ್ ತಿಳಿಸಿದ್ದಾರೆ.


ತುಮಕೂರಿನ ಮಲ್ಲಸಂದ್ರದ ಬಳಿ ಮಾನಸ ಮಂದಿರದಲ್ಲಿ ಎರಡು ದಿನದ ಚಿತ್ರ ಕಲಾವಿದರ ತರಬೇತಿ ಮತ್ತು ಕಮ್ಮಟ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಆಧ್ಯಾತ್ಮಿಕತೆ ಹಾಗೂ ಸಂಸ್ಕೃತಿ ಕಲೆಯ ಕಲರವಗಳು ಎಂದು ತಿಳಿಸಿದರು.


ಕಾರ್ಯಾಗಾರದಲ್ಲಿ ಪೊಲೀಸ್ ಕಮಿಷನರ್ ಹಾಗೂ ಕ್ರಿಯಾ ಸಾಹಿತಿ ಡಾ. ರವಿಕಾಂತ್ ಗೌಡ, ಮತ್ತೊಬ್ಬ ಹಿರಿಯ ಪೊಲೀಸ ಅಧಿಕಾರಿ ರಾಮಕೃಷ್ಣಪ್ರಸಾದ್, ಚಿತ್ರಕಲಾ ಪರಿಷತ್ ಸದಸ್ಯರುಗಳಾದ ಶ್ರೀ ಕೃಷ್ಣ ಅಯ್ಯರ್ ಶ್ರೀ ಚಕ್ರವರ್ತಿ ಕಾನೂನು ಸಲಹೆಗಾರರಾದ ಹೊನ್ನಪ್ಪಜಿ ಮತ್ತಿಸರರು ಭಾಗವಹಿಸಿದ್ದರು.


ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ರಾಜ್ಯದ ಸುಮಾರು ೨೦ ಮಂದಿಗೆ ಪ್ರಶಸ್ತಿ ಪತ್ರವನ್ನು ಜಪಾನಂದ ಸ್ವಾಮಿಜಿ ವಿತರಿಸಿದರು.