Home ಜಿಲ್ಲೆ ಭಕ್ತಿ, ಸಂಸ್ಕಾರ ಬೆಳೆಸಿಕೊಳ್ಳಿ: ಮಲ್ಲೇಶ ಶರಣರು

ಭಕ್ತಿ, ಸಂಸ್ಕಾರ ಬೆಳೆಸಿಕೊಳ್ಳಿ: ಮಲ್ಲೇಶ ಶರಣರು

ಸಂಜೆ ವಾಣಿ ವಾರ್ತೆ |
ಜಮಖಂಡಿ: ಭಕ್ತಿ, ಧಾರ್ಮಿಕ ಆಚರಣೆ ಹಾಗೂ ಸಾತ್ವಿಕ ಚಿಂತನೆಗಳು ಮನುಷ್ಯನ ಬದುಕಿಗೆ ಸಾರ್ಥಕತೆ ನೀಡುತ್ತವೆ ಎಂದು ಹುಲ್ಯಾಳದ ಪ್ರವಚನಕಾರ ಮಲ್ಲೇಶ ಶರಣರು ಹೇಳಿದರು.

ತಾಲೂಕಿನ ಮೈಗೂರ ಗ್ರಾಮದ ನಿಜಶರಣ ಅಂಬಿಗರ ಚೌಡಯ್ಯ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ ಗುಡ್ಡಾಪುರ ದಾನಮ್ಮ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರಾವಣ ಮಾಸದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಭಕ್ತಿ ಹಾಗೂ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು. ಪ್ರವಚನ, ಭಜನೆ ಸೇರಿದಂತೆ ಧಾರ್ಮಿಕ ಚಟುವಟಿಕೆಗಳು ಸಮಾಜದಲ್ಲಿ ಸದ್ಭಾವನೆ ಮತ್ತು ಸೌಹಾರ್ದತೆ ಮೂಡಿಸಲು ಸಹಕಾರಿಯಾಗುತ್ತವೆ ಎಂದರು.

ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಗೂ ಸಂಸ್ಕಾರ ಬೆಳೆಸುತ್ತವೆ. ಆದ್ದರಿಂದ ಇಂತಹ ಕಾರ್ಯಕ್ರಮಗಳಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಮನಗೌಡ ಪಾಟೀಲ, ಸದಾಶಿವ ಪಾಟೀಲ, ಮಹಾದೇವ ಕೋಳಿ, ಶ್ರೀಕಾಂತ ಹಲಕಿ, ಲಕ್ಕಪ್ಪ ಕೋಳಿ, ಶ್ರೀಮಂತ ಹಜೇರಿ, ವಿರುಪಾಕ್ಷ ಶೇಡಬಾಳ ಸೇರಿದಂತೆ ಭಕ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.