Home ಜಿಲ್ಲೆ ಕಲಬುರಗಿ ಸಿಯುಕೆ ಸ್ನಾತಕ,ಸ್ನಾತ್ತಕೋತ್ತರ ಪದವಿ ಪರೀಕ್ಷೆ ಫಲಿತಾಂಶ ಘೋಷಣೆ

ಸಿಯುಕೆ ಸ್ನಾತಕ,ಸ್ನಾತ್ತಕೋತ್ತರ ಪದವಿ ಪರೀಕ್ಷೆ ಫಲಿತಾಂಶ ಘೋಷಣೆ

ಕಲಬುರಗಿ,ಮೇ 27: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಡೆದ ಸ್ನಾತಕ ಮತ್ತು ಮತ್ತು ಸ್ನಾತ್ತಕೋತ್ತರ ಪದವಿ ಕೋರ್ಸ್‍ಗಳ ಪರೀಕ್ಷೆಗಳ ಫಲಿತಾಂಶವು ಘೋಷಣೆ ಮಾಡಲಾಯಿತು.
2026 ಏಪ್ರೀಲ್ ಮತ್ತು ಮೇ ತಿಂಗಳಿನಲ್ಲಿ ಜರುಗಿದ ಪದವಿಯ 4ನೇ ಸೆಮಿಸ್ಟರ್, 6ನೇ ಸೆಮಿಸ್ಟರ್ ಹಾಗೂ 8ನೇ ಸೆಮಿಸ್ಟರ್ ಮತ್ತು ಸ್ನಾತ್ತಕೋತ್ತರ ಪದವಿಯ 2ನೇ ಸೆಮಿಸ್ಟರ್ ಮತ್ತು 4ನೇ ಸೆಮಿಸ್ಟರ್ ನ ಪರೀಕ್ಷೆಗಳ ಹಾಗೂ ಎಂ.ಎಸ್ಸಿ ಮನೋವಿಜ್ಞಾನ ವಿಭಾಗದ 10ನೇ ಸೆಮಿಸ್ಟರ್‍ನ ಪರೀಕ್ಷೆಗಳ ಫಲಿತಾಂಶ ವಿ.ವಿ.ಯ ವೆಬ್‍ಸೈಟ್‍ನಲ್ಲಿ ಪ್ರಕಟವಾಗಿದೆ.
ಸಿಯುಕೆ ಕುಲಪತಿಗಳಾದ ಪ್ರೊ.ಬಟ್ಟು ಸತ್ಯನಾರಾಯಣ ಅವರು ಪರೀಕ್ಷಾ ಫಲಿತಾಂಶದ ಬಗ್ಗೆ ಹರ್ಷವನ್ನು ವ್ಯಕ್ತಪಡಿಸಿ, ವಿದ್ಯಾರ್ಥಿಗಳು ಪರೀಕ್ಷೆ ಬರೆದ ಕೇವಲ 15 ದಿನಗಳಲ್ಲಿ ಪರೀಕ್ಷಾ ಫಲಿತಾಂಶವನ್ನು ಘೋಷಣೆ ಮಾಡಿರುವುದು ವಿ.ವಿ.ಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಈ ಫಲಿತಾಂಶದಿಂದ ವಿ.ವಿ.ಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಉನ್ನತ ಶಿಕ್ಷಣ ಪಡೆಯಲು ಇದು ಮಹತ್ವದ್ದಾಗಿದೆ ಹಾಗೂ ಬೇಕಾದ ಉದ್ಯೋಗ ಪಡೆಯಲು ಮತ್ತು ಅವರ ಮುಂದಿನ ಭವಿಷ್ಯಕ್ಕೆ ಇದು ತುಂಬಾ ಸಹಕಾರಿಯಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯವು ಉಜ್ವಲವಾಗಿರಲೆಂದು ಶುಭ ಹಾರೈಸಿದ್ದಾರೆ.
ನಮ್ಮ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ನಿರಂತರವಾಗಿ ಶೈಕ್ಷಣಿಕ ವರ್ಷಕ್ಕೆ ಅನುಸಾರವಾಗಿ ಪ್ರಶ್ನೆಪತ್ರಿಕೆಗಳನ್ನು ತಯಾರಿ ಮಾಡುವುದು, ಪರೀಕ್ಷೆಗಳನ್ನು ನಡೆಸುವುದು, ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವುದು, ಪರೀಕ್ಷೆಗಳ ಫಲಿತಾಂಶವನ್ನು ಸಮಯಕ್ಕೆ ಅನುಗುಣವಾಗಿ ಘೋಷಣೆ ಮಾಡುತ್ತಾ ಬಂದಿದೆ. ಕೋವಿಡ್ ಸಂದರ್ಭದಲ್ಲಿ ತೊಂದರೆಗಿಒಳಗಾದ ವಿ.ವಿ. ಶೈಕ್ಷಣಿಕ ಚಟುವಟಿಕೆಗಳು ಮರಳಿ ಸಮಯನುಸಾರ ನಡೆಸಲಾಗುತ್ತಿದೆ.
ಪರೀಕ್ಷಾ ಫಲಿತಾಂಶವನ್ನು ಯಶಸ್ವಿಯಾಗಿ ಪ್ರಕಟಿಸಲು ಸಹಕರಿಸಿದ ವಿ.ವಿ.ಯ ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ, ವಿ.ವಿ.ಯ ಪರೀಕ್ಷಾ ನಿಯಂತ್ರಕ ಪ್ರೊ.ಭರತ್ ಕುಮಾರ್ ಸೇರಿದಂತೆ ಎಲ್ಲ ವಿಭಾಗಗಳ ಡೀನ್‍ರು, ಮುಖ್ಯಸ್ಥರು, ಎಲ್ಲ ಅಧ್ಯಾಪಕ ವೃಂದದವರು ಸೇರಿದಂತೆ ವಿ.ವಿ.ಯ ಆಡಳಿತ ವರ್ಗದ ಸಿಬ್ಬಂದಿಗಳಿಗೆ ವಿ.ವಿ ಕುಲಪತಿಗಳಾದ ಪ್ರೊ.ಬಟ್ಟು ಸತ್ಯನಾರಾಯಣ ಅವರು ಅಭಿನಂದನೆ ಸಲ್ಲಿಸಿದ್ದಾರೆ.