ನ.8ರಂದು ಸಿಯುಕೆ 9ನೇ ಘಟಿಕೋತ್ಸವ

ಕಲಬುರಗಿ:ನ.6- ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ದ 9ನೇ ಘಟಿಕೋತ್ಸವ ಇದೇ ನ.8ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ ಎಂದು ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ತಿಳಿಸಿದರು.
ಇಲ್ಲಿನ ಸಿಯುಕೆ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸುಪ್ರಿಂಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಹಾಗೂ ಭಾರತದ ಕಾನೂನು ಆಯೋಗದ ಅಧ್ಯಕ್ಷ ದಿನೇಶ್ ಮಹೇಶ್ವರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಪ್ರೊ.ಸತ್ಯನಾರಾಯಣ ಮಾಹಿತಿ ನೀಡಿದರು.
ಈ ಬಾರಿ ಒಟ್ಟು ವಿಶ್ವವಿದ್ಯಾಲಯದ 27 ವಿಭಾಗಗಳಲ್ಲಿ ಪ್ರಥಮ ರ್ಯಾಂಕ್ ಪಡೆದ ತಲಾ ಒಬ್ಬ ವಿದ್ಯಾರ್ಥಿಗೆ ಚಿನ್ನದ ಪದಕಕ್ಕಾಗಿ ಆಯ್ಕೆ ಮಾಡಲಾಗಿದ್ದು, ಇದರ ಜೊತೆಗೆ ಪ್ರತಿ ವರ್ಷದಂತೆ ಓರ್ವ ವಿದ್ಯಾರ್ಥಿಗೆ ಪ್ರೊ.ಎ.ಎಂ.ಪಠಾಣ ಚಿನ್ನದ ಪದಕಕ್ಕೂ ಆಯ್ಕೆ ಮಾಡಲಾಗಿದೆ ಎಂದರು.
ಇದರ ಜೊತೆಗೆ, ಬಿಸಿನೆಸ್ ಸ್ಟಡೀಸ್, ಕಾಮರ್ಸ್, ಅರ್ಥಶಾಸ್ತ್ರ ಮತ್ತು ಯೋಜನೆ, ಟೂರಿಸಂ ಮತ್ತು ಹೋಟೆಲ್ ಮ್ಯಾನೇಜ್‍ಮೆಂಟ್, ರಾಸಾಯನಶಾಸ್ತ್ರ, ಭೂಗೋಳಶಾಸ್ತ್ರ, ಭೂಗರ್ಭಶಾಸ್ತ್ರ, ಶಿಕ್ಷಣ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್, ಇಂಗ್ಲಿಷ್, ಹಿಂದಿ, ಕನ್ನಡ, ಭಾಷಾಶಾಸ್ತ್ರ, ಸಂಗೀತ ಮತ್ತು ಫೈನ್ ಆಟ್ರ್ಸ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಕಾನೂನುಶಾಸ್ತ್ರ, ಲೈಫ್‍ಸೈನ್ಸ್, ಗಣಿತಶಾಸ್ತ್ರ, ಭೌತಶಾಸ್ತ್ರ, ಮನಶಾಸ್ತ್ರ, ಸಾರ್ವಜನಿಕ ಆಡಳಿತ, ಇತಿಹಾಸ ಮತ್ತು ಪ್ರಾಗೈತಿಹಾಸ, ಅಂಡರ್‍ಗ್ರಾಜ್ಯುಯೇಟ್ ಅಧ್ಯಯನ, ಪಿಎಚ್.ಡಿ ಹಾಗೂ ಎಂ.ಫಿಲ್ ವಿಭಾಗದ 628 ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುತ್ತಿದ್ದು, ಈ ಪೈಕಿ 487 ವಿದ್ಯಾರ್ಥಿಗಳು ಭೌತಿಕವಾಗಿ ಹಾಗೂ 141 ವಿದ್ಯಾರ್ಥಿಗಳು ಅನುಪಸ್ಥಿತಿಯಲ್ಲಿ ತಮ್ಮ ಪದವಿ ಪ್ರಮಾಣ ಪತ್ರಗಳನ್ನು ಸ್ವೀಕರಿಸಲಿದ್ದಾರೆ ಎಂದು ಬಟ್ಟು ಸತ್ಯನಾರಾಯಣ ವಿವರಿಸಿದರು.

ಪ್ರಭಾರ ಕುಲಸಚಿವ ಡಾ.ಚನ್ನವೀರ ಆರ್.ಎಂ., ಪರೀಕ್ಷಾ ನಿಯಂತ್ರಣಾಧಿಕಾರಿ ಕೋಟಾ ಸಾಯಿಕೃಷ್ಣ, ಘಟಿಕೋತ್ಸವ ಮಾಧ್ಯಮ ಉಸ್ತುವಾರಿ ಡಾ.ಜೋಹೆರ್, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಗಣಪತಿ ಸಿನ್ನೂರ, ಸಹಾಯಕ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಪ್ರಕಾಶ ಬಾಳಿಕಾಯಿ ಉಪಸ್ಥಿತರಿದ್ದರು.

18 ಪಿಎಚ್‍ಡಿ, ಒಂದು ಎಂ.ಫಿಲ್ ಪದವಿ ಪ್ರದಾನ
ಪ್ರಸಕ್ತ 9ನೇ ಘಟಿಕೋತ್ಸವದಲ್ಲಿ ಒಟ್ಟು 19 ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್‍ಡಿ ಪದವಿ ಪ್ರದಾನ ಮಾಡಲಾಗುವುದು ಎಂದು ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.

ರೋಹಿತ್ ರಾಮಚಂದ್ರ ಮತ್ತು ಮೊಹ್ಮದ್ ಆಸಿಫ್ (ಇಂಗ್ಲಿಷ್), ರೀಟಾ (ಸಾಮಾಜಿಕ ಕಾರ್ಯ), ವಿಸ್ಮಯ ಎ. (ಮನಶಾಸ್ತ್ರ), ಜೀವನಕುಮಾರ್ ಹಾಗೂ ಚನ್ನಬಸವಯ್ಯ (ಗಣಿತಶಾಸ್ತ್ರ), ಜಯಶ್ರೀ, ಮಧುಸೂದನ, ಬಿ.ವಿ.ಎನ್.ಉಮಾಗಾಯತ್ರಿ (ಹಿಂದಿ), ನವೀನ ಎಸ್.ವಿ ಮತ್ತು ದೀಪಕಕುಮಾರ ಸಾಹು (ರಾಸಾಯನಶಾಸ್ತ್ರ), ಪ್ರಕಾಶ ಹಡಪದ (ಶಾಸ್ತ್ರೀಯ ಕನ್ನಡ), ರಮ್ಯ ಸಿ.ಪಿ (ಇತಿಹಾಸ ಮತ್ತು ಪ್ರಾಗೈತಿಹಾಸ), ರಿದ್ಧಿ ಸೇನ್‍ಗುಪ್ತಾ (ಭೌತಶಾಸ್ತ್ರ), ಗದ್ದೆಪ್ಪ (ಕನ್ನಡ), ಜಫರ್ ಇಕ್ಬಾಲ್ (ಭೂಗೋಳಶಾಸ್ತ್ರ), ಸಾಗರ ಗಾಜ್ರೆ ಮತ್ತು ಪುಲಿಮಡಗು ನಾಗೇಂದ್ರ ಸಾಯಿಪ್ರಸಾದ್ (ವ್ಯವಹಾರ ಅಧ್ಯಯನ) ಹಾಗೂ ಜಿತಿನ್ ಜೈಸೆ ಎಂ.ಫಿಲ್ ಪದವಿ ( ಸೈಕಿಯಾಟ್ರಿಕ್ ಸೋಷಿಯಲ್ ವರ್ಕ್) ಸ್ವೀಕರಿಸಲಿದ್ದಾರೆ ಎಂದು ಅವರು ವಿವರಿಸಿದರು.

ಚಿನ್ನದ ಪದಕ ವಿಜೇತರು
ಅನುಶೃತಿ ಪಾಂಡೆ – ಬಿಎಸ್ಸಿ ಸೈಕಾಲಜಿ
ಮಂಜಿಮಾ ಮಹೇಶ್- ಎಂಎಸ್ಸಿ. ಸೈಕಾಲಜಿ
ಸಿದ್ಧಾರ್ಥ – ಬಿಎಸ್ಸಿ (ಹಾನರ್ಸ್) ಭೂಗೋಳ
ಇಂದ್ರಕಾಂತ ಬೆಹರಾ – ಎಂ.ಎಸ್ಸಿ ಅಪ್ಲೈಡ್ ಜಿಯಾಗ್ರಫಿ
ಸಾಯಿ ಪ್ರತ್ಯೂಷ್‍ಸಾಹು- ಬಿಎಸ್ಸಿ (ಹಾನರ್ಸ್) ಜಿಯೋಲಜಿ
ಅರ್ಮನಾ ಮಿತ್ರ – ಎಂ.ಎಸ್ಸಿ ಅಪ್ಲೈಡ್ ಜಿಯಾಲಜಿ
ಮೇಘನಾ ಸಿ.- ಎಂ.ಎಸ್ಸಿ (ಗಣಿತ)
ಅಭಿಜೋಯ್ ಕರ್ಮಾಕರ್- ಎಂ.ಎಸ್ಸಿ ಭೌತಶಾಸ್ತ್ರ
ಅನಕಪಲ್ಲಿ ಚಂದ್ರಶೇಖರ – ಬಿಎಸ್ಸಿ (ಪಿಸಿಎಂ)
ಅರ್ಚನಾ ಎ.ಆರ್- ಎಂ.ಎಸ್ಸಿ (ಕೆಮಿಸ್ಟ್ರಿ)
ನಿರಂಜನ ಬಿ. ವಡಿಗೇರಿ – ಎಂ.ಎಸ್ಸಿ ಲೈಫ್ ಸೈನ್ಸ್
ರಮಣ್ ಕೌಶಿಕ್ – ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್
ಶಿವಸಾಹಿತಿ ಸೋಮಿಶೆಟ್ಟಿ – ಬಿ.ಟೆಕ್
ಹರಿಚಂದನಾ ಡಿ – ಬಿಎ (ಹಾನರ್ಸ್) ಅರ್ಥಶಾಸ್ತ್ರ
ಬಿಟ್ಲಿಂಗು ಅಭಿತಾ – ಎಂ.ಎ ಅರ್ಥಶಾಸ್ತ್ರ
ಕಾಪೆಲ್ಲಿ ಶ್ರೀನಿವಾಸ ಸತೀಶ್‍ಕುಮಾರ್ – ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನೇಸ್ಟ್ರೇಷನ್
ಉನ್ನತಿ ಚೌಹಾಣ್ – ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್
ಸುಮಾ ಕೆ.- ಎಂ.ಬಿ.ಎ ಟೂರಿಸಂ ಅ್ಯಂಡ್ ಟ್ರಾವೆಲ್ ಮ್ಯಾನೇಜ್‍ಮೆಂಟ್
ಸಾನಿಯಾ ಸಮ್ರೀನ್ – ಮಾಸ್ಟರ್ ಆಫ್ ಕಾಮರ್ಸ್
ಚಂದನಾ ಸಾಗರ್ – ಬಿಎ (ಹಾನರ್ಸ್) ಇಂಗ್ಲಿಷ್
ಅನೈನಾ ಪಾಲ್ – ಎಂ.ಎ ಇಂಗ್ಲಿಷ್
ಅನಿತಾ ಎಂ.ಥಾಮಸ್ – ಬ್ಯಾಚುಲರ್ ಆಫ್ ಎಜುಕೇಷನ್
ಬಿನ್ಶಾ ಎನ್ – ಮಾಸ್ಟರ್ ಸೋಷಿಯಲ್ ವರ್ಕ್
ಮೆರುಗು ಶ್ರೀಜಾ – ಎಂ.ಎ ಇತಿಹಾಸ ಮತ್ತು ಪ್ರಾಗೈತಿಹಾಸ
ಪ್ರತ್ಯೂಷಾ ವಾಸುಪಿಲ್ಲಿ – ಎಂ.ಎ ಪಬ್ಲಿಕ್ ಅಡ್ಮಿನಿಸ್ಟ್ರೇಷನ್
ಸೋನಾ ಸುನಿಲ್ – ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ
ಡಿಂಪಲ್ ಕುಮಾರಿ – ಎಲ್.ಎಲ್.ಎಂ. (ಕ್ರಿಮಿನಲ್ ಲಾ)
ಶಿವಸಾಹಿತಿ ಸೋಮಿಶೆಟ್ಟಿ (ಬಿ.ಟೆಕ್) – (ಪ್ರೊ.ಎ.ಎಂ.ಪಠಾಣ ಚಿನ್ನದ ಪದಕ)