ಭುವನೇಶ್ವರ,ಜೂ.೧೪-ಒಡಿಶಾದ ಸುಂದರ್‌ಗಢ ಜಿಲ್ಲೆಯಲ್ಲಿ ಇಂದು ನಕ್ಸಲ್ ನಿಗ್ರಹ ಕಾರ್ಯಾಚರಣೆ ವೇಳೆ ಕಚ್ಚಾ ಬಾಂಬ್ ಸ್ಫೋಟಗೊಂಡು ಸಿಆರ್‌ಪಿಎಫ್ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ.
ಬಾಂಬ್ ಸ್ಫೋಟದಿಂದಾಗಿ ಸಿಆರ್‌ಪಿಎಫ್ ೧೩೪ನೇ ಬೆಟಾಲಿಯನ್‌ನ ಎಎಸ್‌ಐ ಸತ್ಯಬನ್ ಕುಮಾರ್ ಸಿಂಗ್ (೩೪) ಅವರ ಎಡಗಾಲಿಗೆ ಗಾಯಗಳಾಗಿವೆ. ಅವರನ್ನು ರೂರ್ಕೆಲಾದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಲ್ಲಿ ಅವರು ಸಾವನ್ನಪ್ಪಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಇವರು ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯವರಾಗಿದ್ದಾರೆ,ರೂರ್ಕೆಲಾದ ಕೆ ಬಲಂಗ್ ಗ್ರಾಮದ ಬಳಿ ಬೆಳಿಗ್ಗೆ ೬ ಗಂಟೆ ಸುಮಾರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಒಡಿಶಾ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ (ಎಸ್‌ಒಜಿ) ಪ್ರದೇಶದಲ್ಲಿ ಜಂಟಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾಗ ಸ್ಫೋಟ ಸಂಭವಿಸಿದೆ.