ಚಿಣಮಗೇರ ಕೆ ಪಿ ಆರ್ ಸಕ್ಕರೆ ಕಾರ್ಖಾನೆಯ ತ್ಯಾಜ್ಯ ನೀರಿನಿಂದ ಬೆಳೆ ನಾಶ :ರೈತರ ಆಕ್ರೋಶ

ಕರಜಗಿ:ಅ.6:ಅಫಜಲಪೂರ ತಾಲೂಕಿನ ಚೀಣಮಗೇರದ ಕೆಪಿ ಆರ್ ಸಕ್ಕರೆ ಕಾರ್ಖಾನೆ ರಾತ್ರಿ ಹೊತ್ತಲ್ಲಿ ಸುಮಾರು 12 ಗಂಟೆ ಸಮಯಕ್ಕೆ ಕಾರ್ಖಾನೆಯ ತ್ಯಾಜ್ಯ ನೀರು ರೈತರ ಜಮೀನಿಗೆ ಬಿಟ್ಟು ಬೆಳಗಿನ ಜಾವ ರೈತ ಏಳುವದಕಿಂತ ಮೊದಲೇ 4 ಗಂಟೆಗೆ ತ್ಯಾಜ್ಯ ನೀರು ಬಂದ ಮಾಡೀ ರೈತರ ಬದುಕಿನ ಜೊತೆಗೆ ಕಳ್ಳಾಟವಾಡುತ್ತಿದೆ ಇದರಿಂದ ನಮ್ಮ ಬದುಕು ಬೀದಿಗೆ ಬಿದ್ದಿದೆ ಎಂದು ಚಿಣಮಗೇರ ಗ್ರಾಮದ ರೈತ ಮಹಾಂತಯ್ಯ ಸ್ವಾಮೀ ಕಣ್ಣೀರು ಹಾಕಿದ್ದಾರೆ.ಕಾರ್ಖಾನೆಯು ನಮ್ಮ ರೈತರ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಿದೆ ಏಕೆಂದರೆ ಇಡಿ ಕಾರ್ಖಾನೆಯ ತ್ಯಾಜ್ಯ ನೀರು ಸಂಪೂರ್ಣವಾಗಿ ನಮ್ಮ ಜಮೀನಿನಲ್ಲಿ ಮಿಶ್ರವಾಗಿ ನಮ್ಮ ಬೇಳೆಗಳು ಹಾಳಾಗುತ್ತಿವೆ, ಜಮೀನಿನಲ್ಲಿ ಮಲಿನಗೊಂಡ ನೀರು ನಿಲ್ಲುವದರಿಂದ ಧನ ಕರುಗಳಿಗೆ ಕುಡಿಯಲು ನೀರಿನ ಅಭಾವವಾಗುತ್ತಿದೆ, ಹಾಗೂ ಲಕ್ಷ ಲಕ್ಷ ರೂಪಾಯಿ ಬೇಲೆ ಬಾಳುವ ಬೆಳೆಗೆಳು ಈ ಕಾರ್ಖಾನೆಯ ತ್ಯಾಜ್ಯ ನೀರಿಗೆ ಒಣಗಿ ನಾಶವಾಗುತ್ತಿವೆ, ಮತ್ತು ರೈತರ ಭೂಮಿಯು ಕೂಡ ತನ್ನ ಫಲವತ್ತತೇಯನ್ನು ಕಳೆದುಕೊಳ್ಳುತ್ತಿದೆ ಹೀಗೆ ಮುಂದುವರೆದರೆ ಹೊಟ್ಟೆಗೆ ಹಿಟ್ಟು ಇಲ್ಲದೆ ನಾವು ಆತ್ಮ ಹತ್ಯೆ ಮಾಡಿಕೊಳ್ಳಬೇಕಾಗುತ್ತೆ ಕೂಡಲೇ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯವರು ಹಾಗೂ ತಾಲೂಕು ತಹಸೀಲ್ದಾರ್ ಮತ್ತು ಶಾಸಕರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಆದಷ್ಟು ಬೇಗೆ ನಮಗೆಲ್ಲ ನ್ಯಾಯ ಒದಗಿಸಿ ಕೊಡಬೇಕು ಎಂದರು. ನಂತರ ಮಾತನಾಡಿದ ಸಾಮಾಜಿಕ ಹೋರಾಟಗಾರ ಹಾಗೂ ರೈತ ಮುಖಂಡ ರಮೇಶ ಜಮಾದಾರ ನಮ್ಮ ಕೆಪಿ ಆರ್ ಸಕ್ಕರೆ ಕಾರ್ಖಾನೆ ರೈತರ ಹಿತ ಕಾಪಾಡುವಂತ ಕೆಲಸ ಮಾಡಬೇಕು ಹೊರೆತು ರೈತರ ಬದುಕನ್ನ ಬೀದಿಗೆ ತರುವಂತ ಕೆಲಸ ಮಾಡಬಾರದು ಏಕೆಂದರೆ ಇಡಿ ಕಾರ್ಖಾನೆಯ ತ್ಯಾಜ್ಯ ನೀರು ರೈತರ ಜಮೀನುಗಳನ್ನು ನುಂಗಿ ಹಾಕುತ್ತಿದೆ, ಅಲ್ಲಿ ಯಾವುದೇ ಬೇಳೆ ಬೆಳೆಯಲು ಆಗುತ್ತಿಲ್ಲ ಇದರಿಂದ ರೈತರಿಗೆ ಎಷ್ಟು ತೊಂದರೆ ಯಾಗುತ್ತದೆ ಎಂದು ಸ್ವಲ್ಪ ಯೋಚಿಸಬೇಕು, ಪದೇ ಪದೇ ಈ ವಿಚಾರದಲ್ಲಿ ನಮ್ಮ ಕಾರ್ಖಾನೆಯ ಆಡಳಿತ ಮಂಡಳಿ ನಿರ್ಲಕ್ಷ ತೋರುತ್ತಿದೆ, ನೀರು ನೇರವಾಗಿ ಹೊಳೆಗೆ ಸೇರಿದರೆ ಯಾವುದೇ ತೊಂದರೆ ಇರುವದಿಲ್ಲ ಅಚ್ಚುಕಟ್ಟಾಗಿ ಒಂದು ಕಾಲುವೆ ನಿರ್ಮಿಸಿದರೆ ರೈತರ ಜಮೀನಿಗಿ ನೀರು ಸೇರುವದಿಲ್ಲ, ಈ ಕುರಿತು ಹಲವು ಬಾರಿ ಕಾರ್ಖಾನೆಯವರಿಗೆ ಮನವಿ ಮಾಡಿದ್ದೇವೆ ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಹಾಗಾಗಿ ಕೂಡಲೇ ಈ ತ್ಯಾಜ್ಯ ನೀರು ರೈತರ ಜಮೀನಿಗೆ ಸೇರದಂತೇ ನೋಡಿಕೊಳ್ಳಬೇಕು ಹಾಗೂ ಬೇಳೆ ನಾಶವಾಗಿ ಜಮೀನಿಗೆ ಹಾನಿಯಾಗಿದ್ದರಿಂದ ರೈತ ಮಹಾಂತಯ್ಯ ಸ್ವಾಮಿಗೆ ಸೂಕ್ತ ಪರಿಹಾರ ಒದಗಿಸಬೇಕು ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಕಾರ್ಖಾನೆ ಎರಡು ಗೆಟ್ ಬಂದ ಮಾಡಿ ನ್ಯಾಯಾಲಯದಲ್ಲಿ ಮೊಕದಮ್ಮೆ ದಾಖಲಿಸಿ ಕಾರ್ಖಾನೆ ಬಂದ್ ಮಾಡಿಸಬೇಕಾಗುತ್ತದೆ, ಜೊತೆಗೆ ನಾವು ರೈತರಿಗಾಗಿ ಜೈಲಿಗೆ ಹೋಗಲು ಕೂಡ ಸಿದ್ದರಿದ್ದೇವೆ ಎಂದು ಎಚ್ಚರಿಕೆ ನೀಡಿದರು.


ಕೆ ಪಿ ಆರ್ ಸಕ್ಕರೆ ಕಾರ್ಖಾನೆ ಚಿಣಮಗೇರ ದವರು ಪದೇ ಪದೇ ರೈತರ ಜಮೀನುಗಳಿಗೆ ರಾತ್ರಿ ಹೊತ್ತು ತ್ಯಾಜ್ಯ ನೀರು ಬಿಡುತಿದ್ದು ಇದರಿಂದ ರೈತ ಮಹಾಂತಯ್ಯ ಸ್ವಾಮೀ ಜಮೀನಿನ ಬೇಳೆ ಸಂಪೂರ್ಣ ನಾಶವಾಗಿದ್ದು ಕೂಡಲೇ ತ್ಯಾಜ್ಯ ನೀರು ಬಿಡುವದನ್ನು ಕಾರ್ಖಾನೆ ನಿಲ್ಲಿಸಬೇಕು ಹಾಗೂ ರೈತನಿಗೆ ಪರಿಹಾರ ಕೊಡಬೇಕು ಇಲ್ಲವಾದರೆ ರಾಜ್ಯ ರೈತ ಸಂಘ ಹಸಿರು ಸೇನೆಯು ಕಾರ್ಖಾನೆಯ ಮುಖ್ಯ ಗೆಟ್ ಬಂದ್ ಮಾಡಿ ಪ್ರತಿಭಟನೆ ಮಾಡಬೇಕಾಗುತ್ತದೆ.

ಮಹಾಂತೇಶ್ ಜಮಾದಾರ. ಪ್ರಧಾನ ಕಾರ್ಯದರ್ಶಿ ರಾಜ್ಯ ರೈತ ಸಂಘ ಹಸಿರು ಕಲಬುರ್ಗಿ